Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಗೂಡಂಗಡಿ ತೆರವುಗೊಳಿಸಿದ್ದನ್ನು...

ಗೂಡಂಗಡಿ ತೆರವುಗೊಳಿಸಿದ್ದನ್ನು ಪ್ರತಿಭಟಿಸಿ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಸಂತ್ರಸ್ತ

►ಹಾಸಿಗೆ ಹಿಡಿದ ತಾಯಿ ►ಸೂತಕದ ಛಾಯೆಯಿಂದ ಹೊರಬರದ ಕುಟುಂಬ

ಎಂ.ಆರ್.ಮಾನ್ವಿಎಂ.ಆರ್.ಮಾನ್ವಿ18 Sept 2017 11:23 PM IST
share
ಗೂಡಂಗಡಿ ತೆರವುಗೊಳಿಸಿದ್ದನ್ನು ಪ್ರತಿಭಟಿಸಿ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಸಂತ್ರಸ್ತ

ಭಟ್ಕಳ, ಸೆ.18: ತನ್ನ ಬದುಕಿಗೆ ಏಕೈಕ ಆಸರೆಯಾಗಿದ್ದ ಗೂಡಂಗಡಿಯನ್ನು ಭಟ್ಕಳ ಪುರಸಭೆ ತೆರವುಗೊಳಿಸಿರುವುದನ್ನು ಪ್ರತಿಭಟಿಸಿ ಪುರಸಭೆಯ ಕಟ್ಟಡದೊಳಗೇ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಆಸರಕೇರಿಯ ರಾಮಚಂದ್ರಪ್ಪ ನಾಯ್ಕರ ಮನೆಯಲ್ಲೀಗ ಸ್ಮಶಾನ ಮೌನ.

ತನ್ನ ನಾಲ್ವರು ಮಕ್ಕಳಲ್ಲಿ ಓರ್ವ ಮಗನನ್ನು ಕಳೆದುಕೊಂಡಿರುವ ರಾಮಚಂದ್ರ ನಾಯ್ಕರ ತಾಯಿ ಮಾದೇವಿ ನಾಯ್ಕ, ಇನ್ನೂ ಆಘಾತದಿಂದ ಚೇತರಿಸಿಕೊಂಡಿಲ್ಲ.

ಕೇವಲ ಆರನೆ ತರಗತಿ ಮಾತ್ರ ಕಲಿತ ರಾಮಚಂದ್ರ ನಾಯ್ಕ ಅವರು ತನ್ನ ಹಿರಿಯ ಸಹೋದರ ವೆಂಕಟೇಶ ನಾಯ್ಕ, ಮಂಜುನಾಥ್ ನಾಯ್ಕರೊಂದಿಗೆ ಪುರಸಭೆಯ ಗೂಡಂಗಡಿಯಲ್ಲಿ ಕಳೆದ 17 ವರ್ಷಗಳಿಂದ ಸಿಯಾಳ, ಕಬ್ಬಿನ ಹಾಲು, ಬೀಡಾ, ಎಲೆ ಅಡಿಕೆ ಮಾರಿ ಕುಟುಂಬ ನಿರ್ವಹಣೆಗೆ ಕೈ ಜೋಡಿ ಸುತ್ತಿದ್ದರು. ಬದುಕಿನ ಬಂಡಿಯನ್ನು ಸಾಗಿಸಲು ಕೇವಲ ಈ ಗೂಡಂಗಡಿಯನ್ನೇ ಅವಲಂಬಿಸಿದ್ದ ಅವರು ಅಲ್ಪಸ್ವಲ್ಪ ಬಾಡಿಗೆ ನೀಡಿ ಬದುಕು ಕಟ್ಟಿಕೊಂಡಿದ್ದರು.

ಆದರೆ, ಪುರಸಭೆಯವರು ಕಳೆದ ವರ್ಷ ಏಕಾಏಕಿ ಅಂಗಡಿಗಳನ್ನು ಹರಾಜು ಮಾಡುವ ಪ್ರಕ್ರಿಯೆ ಕೈಗೊಂಡಿದ್ದು, ಅದರಲ್ಲಿ ತನ್ನ ಅಂಗಡಿಯನ್ನು ಉಳಿಸಿ ಕೊಳ್ಳಲು ಇವರು ಪಡಬಾರದ ಕಷ್ಟ ಪಟ್ಟರಾದರೂ ಕೊನೆಗೆ ಹರಾಜಿನಲ್ಲಿ ಭಾಗವಹಿಸಲಾಗದೆ 34 ಅಂಗಡಿಯವರೊಂದಿಗೆ ತಾವೂ ಕೂಡ ಅತಂತ್ರರಾಗಿದ್ದರು.

ಈ ಕುರಿತಂತೆ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಮೃತ ರಾಮಚಂದ್ರ ನಾಯ್ಕರ ಸಹೋದರರಾದ ವೆಂಕಟೇಶ್ ನಾಯ್ಕ ಹಾಗೂ ಮಂಜುನಾಥ್ ನಾಯ್ಕ, 'ಪುರಸಭೆಯಿಂದ ನಮಗೆ ಮೋಸ ಆಗಿದೆ. ನಮ್ಮ ತಮ್ಮನ ಸಾವಿಗೆ ಪುರಸಭೆ ಅಧಿಕಾರಿಗಳೇ ಕಾರಣ. ಇದು ಆತ್ಮಹತ್ಯೆಯಲ್ಲ, ವ್ಯವಸ್ಥಿತ ಕೊಲೆ ಎಂದು ಆರೋಪಿಸಿದ್ದಾರೆ.

ಪುರಸಭೆ ಕಳ್ಳರ ಹಾಗೆ ಬೆಳಗಿನ 5 ಗಂಟೆಯ ಸುಮಾರಿಗೆ ಅಂಗಡಿಗಳನ್ನು ತೆರವುಗೊಳಿಸಲು ಮುಂದಾದ ಕಾರಣ ನನ್ನ ತಮ್ಮ ಆತ್ಮಹತ್ಯೆಗೆ ಶರಣಾ ಗಿದ್ದಾನೆ. ಎಲ್ಲಾ ಕೆಲಸಕ್ಕೂ 10 ಗಂಟೆಗೆ ಕಚೇರಿಗೆ ಬರುವ ಇವರು ಅಂಗಡಿ ತೆರವುಗೊಳಿಸಲು ಅಂಗಡಿಗಳಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಕಳ್ಳರ ಹಾಗೆ ನಮ್ಮ ಅಂಗಡಿಗಳಿಗೆ ನುಗ್ಗಿದ್ದಾರೆ. ತನ್ನ ಕಣ್ಣ ಮುಂದೆಯೇ ತನ್ನ ಬದುಕು ಸೇರಿದಂತೆ ಸುಮಾರು 34 ಅಂಗಡಿಯವರ ಬದುಕು ನಾಶವಾಗುತ್ತಿರುವುದನ್ನು ಕಂಡು ಸಹಿಸದ ಆತ ತನ್ನ ಜೀವವನ್ನೇ ಅರ್ಪಿಸಿದ. ಪುರಸಭೆ ಕಟ್ಟಡದೊಳಗೆಯೇ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದಾಗ ಅಧಿಕಾರಿಗಳು, ಪೊಲೀಸರು ಏನು ಮಾಡುತ್ತಿದ್ದರು? ಅವರ ಕಣ್ಣ ಮುಂದೆಯೇ ಬೆಂಕಿಯಲ್ಲಿ ಸುಟ್ಟು ಹೋಗುತ್ತಿರುವುದನ್ನು ನೋಡುತ್ತಾ ನಿಂತರು. ‘ನನ್ನ ಮತ್ತೋರ್ವ ತಮ್ಮ ತನ್ನ ಜೀವದ ಹಂಗು ತೊರೆದು ಆತನ ರಕ್ಷಣೆಗೆ ಧಾವಿಸಿದ. ಆದರೂ ಪ್ರಯತ್ನ ಫಲಿಸಲಿಲ್ಲ. ಭಟ್ಕಳದಿಂದ ಮಣಿಪಾಲಕ್ಕೆ ಕರೆದುಕೊಂಡು ಹೋಗುವಾಗ ಎರಡು ಗಂಟೆ ನಮ್ಮೊಂದಿಗೆ ಮಾತನಾಡಿದ್ದಾನೆ. ನನ್ನ ಜೀವ ಹೋದರೂ ಪರವಾಗಿಲ್ಲ. ಆ ಮೂವತ್ತ ನಾಲ್ಕು ಅಂಗಡಿಕಾರರ ಬದುಕು ಬರಡಾಗಬಾರದು. ಪುರಸಭೆಯ ಎಲ್ಲಾ ಅಂಗಡಿಕಾರರಿಗೂ ಮತ್ತೆ ಅಂಗಡಿಗಳು ಮರಳಿ ಲಭಿಸಬೇಕು' ಇದು ನನ್ನ ಕೊನೆಯ ಆಸೆ ಎಂದು ರಾಮಚಂದ್ರಪ್ಪ ನಾಯ್ಕ ತಿಳಿಸಿದ್ದಾರೆ ಎಂದು ಅವರು ತಿಳಿಸಿದರು.

ನಮಗೆ ನಮ್ಮ ತಮ್ಮನ ಜೀವದ ಪರಿಹಾರಬೇಕು. ನಮಗೆ ಹಣಬೇಡ. ಆತನ ಅಂತಿಮ ಆಸೆಯನ್ನು ನೆರವೇರಿಸಿ. ನಮಗೆ ನ್ಯಾಯ ಕೊಡಿ ಎಂದು ಸಹೋದರರು ಮಾಧ್ಯಮದ ಮೂಲಕ ಜಿಲ್ಲಾಧಿಕಾರಿಯಲ್ಲಿ ಕೇಳಿ ಕೊಂಡಿದ್ದಾರೆ.

ಹಿನ್ನೆಲೆ:  ಕಳೆದ ವಾರವಷ್ಟೇ ಅಂಗಡಿ ಮಳಿಗೆಗಳನ್ನು ಖಾಲಿ ಮಾಡಲು ಬಂದಿದ್ದ ಅಧಿಕಾರಿಗಳಿಗೆ ಅಂಗಡಿಕಾರರು ಹಾಗೂ ಸಾರ್ವಜನಿಕರು ಘೇರಾವ್ ಹಾಕಿದ್ದರಿಂದ 5 ದಿನಗಳ ಕಾಲಾವಕಾಶವನ್ನು ನೀಡಿ ತೆರಳಿದ್ದರು. ಮತ್ತೆ ಇಂದು ಅಂಗಡಿಗಳನ್ನು ಖಾಲಿ ಮಾಡಿ ಬೀಗ ಹಾಕಲು ಪುರಸಭೆಯ ಅಧಿಕಾರಿಗಳು, ಸಿಬ್ಬಂದಿ ಬೆಳಗ್ಗೆ 4:30ಕ್ಕೆ ಬಂದಿದ್ದರು. ಅಲ್ಲದೆ, ಕೆಲವು ಅಂಗಡಿಗಳಿಗೆ ಬೀಗ ಹಾಕಿದ್ದರು. ಇದನ್ನು ಕಂಡ ರಾಮಚಂದ್ರಪ್ಪ ನಾಯ್ಕರು ತಮ್ಮ ಅಂಗಡಿಯ ಲ್ಲಿಯೇ ಇದ್ದ ಸೀಮೆ ಎಣ್ಣೆ ಹಾಗೂ ಕತ್ತಿಯನ್ನು ಹಿಡಿದುಕೊಂಡು ಪುರಸಭಾ ಕಚೇರಿಗೆ ತೆರಳಿದ್ದಾರೆ. ಅಲ್ಲಿದ್ದ ಕೆಲವರು ತಡೆಯಲು ಬಂದರಾದರೂ ಬೆದರಿಸಿದ ರಾಮಚಂದ್ರಪ್ಪ, ಅವರ ಎದುರಿನಲ್ಲಿಯೇ ಸೀಮೆ ಎಣ್ಣೆ ಮೈ ಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ವಿಷಯ ತಿಳಿದು ಆತನ ಸಹೋದರ ಧಾವಿಸಿ ಬಂದು ಬೆಂಕಿಯನ್ನು ಆರಿಸಲು ಪ್ರಯತ್ನಿಸಿದರಾದರೂ ಆಗಲೇ ದೇಹದ ಬಹುತೇಕ ಭಾಗ ಸುಟ್ಟು ಕರಕಲಾಗಿತ್ತು ಎನ್ನಲಾಗಿದೆ.

ಪುರಸಭೆಯ 150ಕ್ಕೂ ಅಧಿಕ ಅಂಗಡಿ ಮಳಿಗೆಗಳಲ್ಲಿ 102 ಅಂಗಡಿಗಳಿಗೆ ಕಳೆದ ವರ್ಷ ಆಗಸ್ಟ್ 20, 2016 ರಂದು ಅಂಗಡಿ ಕಬಜಾ ಪಡೆಯದೇ ಹರಾಜು ಪ್ರಕ್ರಿಯೆ ನಡೆಸಲಾಗಿತ್ತು. ಹರಾಜು ಪ್ರಕ್ರಿಯೆಯಲ್ಲಿ ಕೆಲವು ಅಂಗಡಿಕಾರರು ಭಾಗವಹಿಸಿ ಅಂಗಡಿಗಳನ್ನು ಹೆಚ್ಚಿನ ಬಾಡಿಗೆಗೆ ಪಡೆದಿದ್ದಾರೆ. ಕೆಲವರು ಹರಾಜಿನಲ್ಲಿ ಭಾಗವಹಿಸಿದ್ದರೂ ಬಾಡಿಗೆ ದುಪ್ಪಟ್ಟು ಹೆಚ್ಚಾಗಿದ್ದರಿಂದ ಪಡೆಯಲು ಸಾಧ್ಯವಾಗಿಲ್ಲ. ಇನ್ನೂ ಕೆಲವರು ಹರಾಜಿನಲ್ಲಿ ಪಾಲ್ಗೊಳ್ಳದೇ ಉಳಿದರು. ಹರಾಜು ಪ್ರಕ್ರಿಯೆ ಅವೈಜ್ಞಾನಿಕವಾಗಿ ನಡೆದಿದೆ ಎನ್ನುವ ಮಾತುಗಳೂ ಕೂಡ ಅದೇ ದಿನ ಕೇಳಿ ಬಂದಿತ್ತು.

ವಿಫಲಗೊಂಡ ಸಂಚು: ಪುರಸಭೆ ಅಂಗಡಿ ಮಳಿಗೆಗಳ ತೆರವು ಕಾರ್ಯಾಚರಣೆಯ ಸಂದರ್ಭ ತಾನು ಅಂಗಡಿ ಕಳೆದುಕೊಳ್ಳುವ ಭೀತಿಯಲ್ಲಿ ಆವೇಶದಿಂದ ರಾಮಚಂದ್ರ ನಾಯ್ಕ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆ, ಇತ್ತ ಭಟ್ಕಳದ ಕೆಲ ರಾಜಕೀಯ ಪುಡಾರಿಗಳು ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು ರಾಮಚಂದ್ರ ನಾಯ್ಕರ ಚಿತೆಯನ್ನೇ ಒಲೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಈ ಘಟನೆಯನ್ನು ಹಿಂದೂ-ಮುಸ್ಲಿಂ ಗಲಭೆಗೆ ಬಳಸಿಕೊಳ್ಳುವ ಎಲ್ಲಾ ಪ್ರಯತ್ನ ಮಾಡಿದ್ದರಾದರೂ ಪೊಲೀಸರ ಮುಂದಾಲೋಚನೆ ಹಾಗೂ ಸಮಯ ಪ್ರಜ್ಞೆಯಿಂದಾಗಿ ಇದು ಅಷ್ಟಕ್ಕೇ ತಣ್ಣಗಾಯಿತು.

ಪೊಲೀಸರ ಎದುರಲ್ಲೇ ಪುರಸಭೆಯ ಕಟ್ಟಡದ ಮೇಲೆ ಕಲ್ಲು ತೂರಾಟ ನಡೆಸಿದ್ದ ಗುಂಪು ಪೊಲೀಸ್ ಅಧಿಕಾರಿಗಳ ಮೇಲೂ ಹಲ್ಲೆ ಮಾಡಿದ್ದಾರೆ. ಈ ಕುರಿತಂತೆ ದೂರು ಕೂಡ ದಾಖಲಾಗಿದೆ. ಗುಂಪಿನಲ್ಲಿ ಕಲ್ಲು ಹೊಡೆಯುವ ಮಂದಿ ಭಟ್ಕಳದಲ್ಲಿ ಹೇಗಾದರೂ ಮಾಡಿ ಅರಾಜಕತೆ ಸೃಷ್ಟಿಸಿ ಅಧಿಕಾರ ಪಡೆಯುವ ಕನಸು ಕಾಣುತ್ತಿದ್ದಾರೆ ಎಂದು ಜನತೆ ದೂರಿದ್ದಾರೆ.

share
ಎಂ.ಆರ್.ಮಾನ್ವಿ
ಎಂ.ಆರ್.ಮಾನ್ವಿ
Next Story
X