ವಿದ್ಯಾರ್ಥಿಗಳ ಏಳಿಗೆ ಬಗ್ಗೆ ಪೋಷಕರು ಮಹತ್ತರವಾದ ಕನಸು ಕಂಡಿರುತ್ತಾರೆ: ಕವಿತಾ ಶೇಖರ

ಚಿಕ್ಕಮಗಳೂರು, sಸೆ.18:ವಿದ್ಯಾರ್ಥಿಗಳ ಏಳಿಗೆ ಬಗ್ಗೆ ಪೋಷಕರು ಮಹತ್ತರವಾದ ಕನಸು ಕಂಡಿರುತ್ತಾರೆ. ಮಕ್ಕಳು ಅದಕ್ಕೆ ತಣ್ಣೀರೆರಚದೆ ಅವರ ಕನಸನ್ನು ನನಸು ಮಾಡು ನಿಟ್ಟಿನಲ್ಲಿ ಶ್ರಮ ಪಟ್ಟು ಕಲಿಯಬೇಕು ಎಂದು ನಗರಸಭೆ ಅಧ್ಯಕ್ಷೆ ಕವಿತಾ ಶೇಖರ್ ಕಿವಿಮಾತು ಹೇಳಿದರು.
ಅವರು ನಗರದ ಟಿಎಂಎಸ್ ಕಾಲೇಜಿನಲ್ಲಿ ನಡೆದ ಲಕ್ಷ್ಯ-ಏಮ್ ಟು ಸಕ್ಸಸ್ ಟಿಎಂಸ್ ಫೆಸ್ಟ್‍ನ ಸಮಾರೋಪದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಗುರು, ಹಿರಿಯನ್ನು ಗೌರವಿಸಿದಷ್ಟೂ ಜೀವನದಲ್ಲಿ ಶ್ರೇಯಸ್ಸನ್ನು ಸಾಧಿಸಬಹುದು. ಜಗತ್ತಿನಲ್ಲಿ ಗುರುಗಳಿಗೆ ಮಹತ್ತರವಾದ ಸ್ಥಾನ ಮಾನವಿದೆ. ಅವರ ಮಾರ್ಗದರ್ಶನವನ್ನು ಸರಿಯಾಗಿ ಪಾಲಿಸಿದಲ್ಲಿ ಅತ್ಯಂತ ಉನ್ನತ ಹುದ್ದೆಗಳನ್ನು ಗಳಿಸಬಹುದು ಎಂದರು.
ಟಿಎಂಸ್ ಕಾಲೇಜು ತನ್ನ ವಿದ್ಯಾರ್ಥಿಗಳೂ ಸೇರಿದಂತೆ ಇತರೆ ಕಾಲೇಜಿನ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಮೌಲ್ಯಾಧಾರಿತ ಕಾರ್ಯಕ್ರಮ ನಡೆಸುತ್ತಿರುವುದು ಸ್ವಾಗತಾರ್ಹ. ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮದ ಲಾಭ ಪಡೆಯಬೇಕು ಎಂದು ಸಲಹೆ ಮಾಡಿದರು.
ಆಲ್ದೂರಿನ ಮಾನಸ ಹೈಸ್ಕೂಲ್ ಆಡಳಿತಾಧಿಕಾರಿ ಚಂದ್ರಶೇಖರ್ ಬಹುಮಾನ ವಿತರಿಸಿ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಕಲಿಕೆಯ ಮಹತ್ವದ ಬಗ್ಗ ವಿದ್ಯಾರ್ಥಿಗಳಿಗೆ ತಿಳಿಹೇಳಿ, ಅವರನ್ನು ದೇಶದ ಅಭಿವೃದ್ಧಿ ಕಡೆಗೆ ಕೊಂಡೊಯ್ಯುವ ಜವಬ್ದಾರಿ ಹೊಂದಿರುತ್ತವೆ. ಹಾಗೆಯೇ ಈ ವಿಚಾರದಲ್ಲಿ ವಿದ್ಯಾರ್ಥಿಗಳ ಹೊಣೆಗಾರಿಕೆಯೂ ಬಹಳ ಮುಖ್ಯ ಎಂದು ತಿಳಿಸಿದರು.
ಟಿಎಂಸ್ ಅಧ್ಯಕ್ಷೆ ನಳಿನ ಡಿಸಾ ಮಾತನಾಡಿ, ಶೈಕ್ಷಣಿಕ ವಿಚಾರದಲ್ಲಿ ವಿದ್ಯಾರ್ಥಿಗಳೂ ಹೆಚ್ಚು ಆಸಕ್ತಿ ವಹಿಸಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುವುದರಿಂದ ಕಾಲೇಜಿನ ಕೀರ್ತಿಯೂ ಹೆಚ್ಚುತ್ತದೆ ಎಂದು ತಿಳಿಸಿದರು.
ಸಮಾರಂಭದ ಅಂಗವಾಗಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ನಗರದ ಎಂಇಎಸ್ ಕಾಲೇಜು ಛಾಂಪಿಯನ್ ಆಗಿ ಹೊರಹೊಮ್ಮಿತು. ಸಾಂಸ್ಕøತಿಕ ಕಲೆಗಳ ಪ್ರದರ್ಶನ ಸ್ಪರ್ಧೆಯಲ್ಲಿ ಕಳಸಾಪುರದ ಸರ್ಕಾರಿ ಪಿಯು ಕಾಲೇಜಿನ ನಾಗವೇಣಿ ಮತ್ತು ತಂಡ ಪ್ರಥಮ ಸ್ಥಾನಗಳಿಸಿದರೆ ನಗರ ಸರ್ಕಾರಿ ಜೂನಿಯರ್ ಕಾಲೇಜಿನ ಲಿಖಿತ ಮತ್ತು ತಂಡ ದ್ವಿತೀಯ ಸ್ಥಾನ ಗಳಿಸಿತು.
ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ಸಂತ ಜೊಜೆಸಫರ ಕಾನ್ವೆಂಟ್‍ನ ಕೆ.ಎನ್.ತನ್ಮಯ್, ಕೆ.ಕೆ.ಧನುಶ್, ಆರ್.ವರ್ಷಿತ್ ತಂಡ ಪ್ರಥಮ, ಮೌಟೆನ್‍ವ್ಯೂ ಕಾಲೇಜಿ ತಮೀಮ್ ಹುಸೇನ್, ಸನಾಹಕ್, ಅರ್ಷನ್ ಅಲಿಖಾನ್ ದ್ವಿತೀಯ ಸ್ಥಾನ ಗಳಿಸಿದರು.
ಸಮಾರಂಭದಲ್ಲಿ ಟಿಎಂಸ್‍ನ ಕಾರ್ಯದರ್ಶಿ ನೇತ್ರ ವೆಂಕಟೇಶ್, ಖಜಾಂಚಿ ಕವಿತಾ ಗೋಪಾಲ್ ಹಾಗೂ ಕಾಲೇಜಿನ ಪ್ರಾಂಶುಪಾಲ ಇಂದ್ರೇಶ್ ಉಪಸ್ಥಿತರಿದ್ದರು.







