ದೇಶದ ಪ್ರಗತಿಗೆ ಕಾಣಿಕೆ ನೀಡುವತ್ತ ವಿದ್ಯಾರ್ಥಿಗಳು ಗಮನಹರಿಸಬೇಕು: ಕೆ.ಅಣ್ಣಾಮಲೈ

ಚಿಕ್ಕಮಗಳೂರು, ಸೆ.18: ಸ್ಪರ್ಧಾತ್ಮಕ ಯುಗದಲ್ಲಿ ವೈವಿಧ್ಯಮಯವಾದ ವಿಷಯಗಳ ಕಲಿಕೆಗೆ ಇರುವ ಅವಕಾಶಗಳನ್ನು ಬಳಸಿಕೊಂಡು ದೇಶದ ಪ್ರಗತಿಗೆ ಕಾಣಿಕೆ ನೀಡುವತ್ತ ವಿದ್ಯಾರ್ಥಿಗಳು ಗಮನಹರಿಸಬೇಕೆಂದು ಎಸ್ಪಿ ಕೆ.ಅಣ್ಣಾಮಲೈ ಕರೆ ನೀಡಿದರು.
ಅವರು ಡಾ.ಮೀರಾ ನರಸಿಂಹಮಹಾಲೆ ಎಜ್ಯುಕೇಷನಲ್ ಚಾರಿಟಿ ಟ್ರಸ್ಟ್ ನಗರದ ಶ್ರೀಭುವನೇಂದ್ರ ವಿದ್ಯಾಸಂಸ್ಥೆಯ ಶ್ರೀಮತಿ ಬಿ.ಎಚ್.ಸೀತಾಡಿ.ಪೈ ಮೊಮೇರಿಯಲ್‍ಹಾಲ್‍ನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾಪುರಸ್ಕಾರ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಕಷ್ಟಪಟ್ಟು ಓದಿ ಜೀವನದಲ್ಲಿ ಪ್ರಗತಿ ಹೊಂದುವ ಮನೋಭಾವ ರೂಢಿಸಿಕೊಳ್ಳಬೇಕು. ಹುಟ್ಟಿದ ಊರಿನಲ್ಲೆ ಶಿಕ್ಷಣ, ಉದ್ಯೋಗ, ಪ್ರಗತಿ ಕಷ್ಟ. ಹತ್ತುವರ್ಷಗಳ ಶಿಕ್ಷಣ ತರಬೇತಿ ಪ್ರೌಢ ವಿದ್ಯಾರ್ಥಿಜೀವನದ ಅತ್ಯಂತ ಪ್ರಮುಖ ಘಟ್ಟ. ಹೇಗೆ ಓದಬೇಕೆಂಬ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು. ಇಂದು ಎಲ್ಲ ರಂಗಗಳಲ್ಲೂ ಸ್ಪರ್ಧೆ ಅಗಾಧವಾಗಿದೆ. ಎಲ್ಲ ವಿಷಯಗಳ ಬಗ್ಗೆಯೂ ಸಾಕಷ್ಟು ಅಧ್ಯಯನ-ತರಬೇತಿ ನಡೆಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ವಿಶೇಷವಾದ ವಿಭಿನ್ನವಾದ ಅಧ್ಯಯನಕ್ಕೆ ಮನ್ನಣೆ ನಿರೀಕ್ಷಿಸಬಹುದು.
1970ರ ದಶಕದಲ್ಲಿ ಸ್ಪರ್ಧೆ ಇರಲಿಲ್ಲ. ನಂತರದ ದಶಕಗಳಲ್ಲಿ ಹಂತ ಹಂತವಾಗಿ ಸ್ಪರ್ಧೆ ಹೆಚ್ಚುತ್ತಿದೆ. ಲಕ್ಷಾಂತರ ಇಂಜಿನಿಯರ್‍ಗಳು, ವೈದ್ಯರುಗಳು, ಪ್ರತಿವರ್ಷ ಹೊರಬರುತ್ತಿದ್ದಾರೆ. ಹಿಂದೆ ಒಳ್ಳೆಯ ಅಂಕ ಜೊತೆಗೆ ಸ್ವಲ್ಪಹಣ, ಚುರುಕಾದ ಪೋಷಕರ ನೆರವಿದ್ದರೆ ಯುವಕರು ಮೇಲೆ ಬರಬಹುದಾಗಿತ್ತು. ಆದರೆ ಇಂದಿನ ಪರಿಸ್ಥಿತಿ ವಿಭಿನ್ನವಾಗಿದೆ ಎಂದು ಎಸ್ಪಿ, ಬಿಇ, ಎಂಬಿಬಿಎಸ್ ಓದಿದರಷ್ಟೇ ಇಂದು ಸಾಲದು. ಅದರಲ್ಲೂ ಸ್ಪೆಷಲೈಸೇಶನ್ ಅನಿವಾರ್ಯವಾಗಿದೆ. ಐಎಎಸ್, ಐಪಿಎಸ್, ಐಎಟಿ ಶಿಕ್ಷಣ ನಮ್ಮ ಆದ್ಯತೆಯಾದರೆ ಒಳ್ಳೆಯದೆಂದರು.
ಉನ್ನತ ಶಿಕ್ಷಣ ತರಬೇತಿ ಪಡೆದವರು ವಿದೇಶಕ್ಕೆ ತೆರಳಿ ಅಲ್ಲಿ ನೆಲಸುವ ಬದಲು ಹುಟ್ಟಿದ ದೇಶಕ್ಕೆ ಮರಳಿ ಇಲ್ಲಿಯ ಅಭಿವೃದ್ಧಿಗೆ ಶ್ರಮಿಸುವಂತಾಗಬೇಕೆಂದ ಅಣ್ಣಾಮಲೈ, ಉನ್ನತವಾದ ಉತ್ಕøಷ್ಟವಾದ ಕನಸು ಕಾಣುವಂತೆ ವಿದ್ಯಾರ್ಥಿಗಳಿಗೆ ಕರೆನೀಡಿದರು.
ಐಡಿಎಸ್‍ಜಿ ಸರ್ಕಾರಿ ಕಾಲೇಜಿನ ಮುಖ್ಯಗ್ರಂಥಾಲಯಾಧಿಕಾರಿ ಎ.ನರೇಂದ್ರ ಟ್ರಸ್ಟಿ ಬಿ.ಎಚ್.ನರೇಂದ್ರಪೈ, ಪ್ರದೀಪಪೈ, ಅನಿಲ್‍ಸವೂರು, ಪ್ರಾಚಾರ್ಯ ವೀರಪ್ಪಯ್ಯ ಮತ್ತಿತರರಿದ್ದರು.







