ಶರೀಅತ್ ವಿಷಯದಲ್ಲಿ ಹಸ್ತಕ್ಷೇಪ ನಡೆಸಬಾರದು, ರೋಹಿಂಗ್ಯರಿಗೆ ನೆಲೆ ನೀಡಲು ಒತ್ತಾಯಿಸಿ ಎಸ್ಕೆಎಸ್ಸೆಸ್ಸೆಫ್ ಮನವಿ

ಮಂಗಳೂರು, ಸೆ. 18: ಇಸ್ಲಾಮಿಕ್ ಶರೀಅತ್ ವಿಷಯದಲ್ಲಿ ಕೇಂದ್ರ ಸರಕಾರ ಯಾವುದೇ ಹಸ್ತಕ್ಷೇಪ ನಡೆಸಬಾರದು ಹಾಗೂ ಮಾನವೀಯತೆಯ ನೆಲೆಯಲ್ಲಿ ರೋಹಿಂಗ್ಯ ಮುಸ್ಲಿಮರನ್ನು ಭಾರತದಿಂದ ಗಡೀಪಾರು ಮಾಡಬಾರದು ಎಂದು ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ಪ್ರಧಾನಮಂತ್ರಿ ಅವರಿಗೆ ಜಿಲ್ಲಾಧಿಕಾರಿಯ ಮೂಲಕ ಮನವಿ ನೀಡಲಾಯಿತು.
ನಿಯೋಗದಲ್ಲಿ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಇಸ್ಹಾಕ್ ಫೈಝಿ, ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಬ್ದುರ್ರಶೀದ್ ರಹ್ಮಾನಿ, ಕೋಶಾಧಿಕಾರಿ ಜಲೀಲ್ ಬದ್ರಿಯಾ, ಶರೀಫ್ ಮೂಸಾ ಕುದ್ದುಪದವು, ಮೊಯ್ದಿನಬ್ಬ ಪಲಿಮಾರ್, ಇಕ್ಬಾಲ್ ಮುಲ್ಕಿ, ನಝೀರ್ ಅಝ್ಹರಿ ಬೊಲ್ಮಿನಾರ್, ರಝಾಕ್ ದಾರಿಮಿ ಸುಲ್ತಾನ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
Next Story





