Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಮೂರುದಿನದಲ್ಲಿ 'ಭರ್ಜರಿ' 16 ಕೋಟಿ

ಮೂರುದಿನದಲ್ಲಿ 'ಭರ್ಜರಿ' 16 ಕೋಟಿ

ಶಶಿಕರ ಪಾತೂರುಶಶಿಕರ ಪಾತೂರು19 Sept 2017 6:24 PM IST
share
ಮೂರುದಿನದಲ್ಲಿ ಭರ್ಜರಿ 16 ಕೋಟಿ

ಭರ್ಜರಿ ಚಿತ್ರ ಭರ್ಜರಿ ಕಲೆಕ್ಷನ್ ಮಾಡುತ್ತಿರುವುದಾಗಿ ನಿರ್ಮಾಪಕ ಆರ್ ಶ್ರೀನಿವಾಸ್ ಹೇಳಿದ್ದಾರೆ. ಅವರು ಚಿತ್ರದ ಗೆಲುವಿನ ಖುಷಿಯನ್ನು ಹಂಚಿಕೊಳ್ಳಲು ಕರೆಯಲಾದ ಪ್ರೆಸ್ಮೀಟ್ ನಲ್ಲಿ ಮಾತನಾಡುತ್ತಿದ್ದರು.

'ಏಳುಕೋಟಿ ಜನ ಚಿತ್ರವನ್ನು ಬ್ಲಾಕ್ ಬಸ್ಟರ್ ಮಾಡಿದ್ದಾರೆ. ಸಮುದ್ರದ ಅಲೆಯಂತೆ ಗೆಲುವಿನ ಅಲೆ ಎದ್ದಿದೆ' ಎಂದರು. ವಿತರಕ ಭಾಷಾ ಮಾತನಾಡಿ, 'ಇಡೀ ಚಿತ್ರವನ್ನು ಧ್ರುವ ತಮ್ಮ ಹೆಗಲ ಮೇಲೆ ಹೊತ್ತುಕೊಂಡಿರುವುದು ಚಿತ್ರ ನೋಡಿದವರಿಗೂ ಗೊತ್ತಾಗುವಂತಿದೆ' ಎಂದು  ಸಂತೃಪ್ತಿಯಿಂದ ಧ್ರುವನತ್ತ ದೃಷ್ಟಿಹರಿಸಿದರು. ಬೆಂಗಳೂರು, ಮೈಸೂರು ಮಾತ್ರವಲ್ಲ, ಉತ್ತರ ಕರ್ನಾಟಕ ಭಾಗಗಳಲ್ಲಿ ಕೂಡ ಚಿತ್ರಕ್ಕೆ ಒಳ್ಳೆಯ ಪ್ರಶಂಸೆ ದೊರಕಿದೆ. 211ಸೆಂಟರ್ಗಳಲ್ಲಿ ಸತತ ಮೂರು ದಿನ ನಿರಂತರವಾಗಿ ಹೌಸ್‌ ಫುಲ್ ಬೋರ್ಡ್ ಬಿದ್ದಿದೆ ಎಂದು  ಅವರು ತಿಳಿಸಿದರು. ನಿರ್ದೇಶಕ ಚೇತನ್ ಪ್ರಕಾರ ಬಾಹುಬಲಿ ಬಳಿಕ ಉತ್ತರ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಪ್ರೇಕ್ಷಕರನ್ನು ಸೆಳೆಯುವ ಚಿತ್ರ ಇದಂತೆ.

ಹ್ಯಾಟ್ರಿಕ್ ಆ್ಯಕ್ಷನ್ ಪ್ರಿನ್ಸ್ ಮಾತು

ನನ್ನ ಮೂರನೆಯ ಚಿತ್ರದ ಗೆಲುವನ್ನು ಪರಿಗಣಿಸಿ ಅಭಿಮಾನಿಗಳು "ಹ್ಯಾಟ್ರಿಕ್ ಹೀರೋ" ಎಂದು ಕರೆಯುತ್ತಿದ್ದಾರೆ. ಆದರೆ ನಾನು ಕೂಡ ಶಿವಣ್ಣನ ಅಪ್ಪಟ ಅಭಿಮಾನಿಯಾಗಿದ್ದುಕೊಂಡು ಅವರ ಬಿರುದನ್ನು ಬಯಸುವುದಿಲ್ಲ. ಬದಲಿಗೆ "ಹ್ಯಾಟ್ರಿಕ್ ಆ್ಯಕ್ಷನ್ ಪ್ರಿನ್ಸ್" ಎಂದು ನನ್ನನ್ನು ಕರೆಯಬಹುದು ಎಂದಿದ್ದಾರೆ. ಚಿತ್ರ ಈ ಮಟ್ಟಿಗೆ ಗೆಲುವು ಕಾಣಲು, ನಿರ್ದೇಶಕರ, ಕಲಾವಿದರ, ನಿರ್ಮಾಪಕರ, ತಂತ್ರಜ್ಞರ ಸಹಕಾರ ಮುಖ್ಯವಾಗಿತ್ತು. ಇದು ನೂರೊಂದು ವಿಘ್ನಗಳನ್ನು ದಾಟಿ ಬಂದ ಚಿತ್ರ. ಕನ್ನಡಿಗರೇ ನನಗೆ ದಾರಿ ತೋರಿಸಿದ್ದಾರೆ ಎಂದರು.

ಸಮಸ್ಯೆ ಮುಗಿದಿಲ್ಲ!

ಚಿತ್ರದಲ್ಲಿ ನಟಿಸಿದ ಉದಯ್, ಅನಿಲ್ ರನ್ನು ಕಳೆದುಕೊಂಡಿದ್ದೇವೆ. ವೈಯಕ್ತಿಕವಾಗಿ ಉದಯ್ ನನಗೆ ಆತ್ಮೀಯರಾಗಿದ್ದರು. ಅವರೆಲ್ಲರ ಪ್ರಯತ್ನದಿಂದ ಚಿತ್ರ ಚೆನ್ನಾಗಿ ಓಡುತ್ತಿದೆ. ಆದರೆ ಎರಡೇ ದಿನಕ್ಕೆ ಚಿತ್ರದ ಪೈರಸಿ ಬಿಡುಗಡೆಯಾಗಿದೆ. ಡಿ‌ಬೀಟ್ಸ್ ಕಡೆಯಿಂದ ಸಾವಿರಾರು ಪೈರಸಿ ಲಿಂಕ್ ಗಳನ್ನು ಪತ್ತೆ ಹಚ್ಚಲಾಗಿದೆ. ದಯವಿಟ್ಟು ಎಲ್ಲರೂ ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡಿ‌ ಸಹಕರಿಸಿ ಎಂದರು ಧ್ರುವ ಸರ್ಜ. ಡಿಸ್ಟ್ರಿಬ್ಯೂಟರ್ ಗಳಲ್ಲೋರ್ವರಾದ ಸುಪ್ರೀತ್ ಮಾತನಾಡಿ ಇದೇ ರೀತಿಯ ಕಲೆಕ್ಷನ್ ಮುಂದುವರಿದರೆ ಮೊದಲ ವಾರದಲ್ಲೇ ಅಂದಾಜು 25 ಕೋಟಿ ಒಟ್ಟು ಕಲೆಕ್ಷನ್ ನಿರೀಕ್ಷಿಸಬಹುದು ಎಂದರು. ನಾಯಕಿ ರಚಿತಾ ರಾಮ್ ಪಾತ್ರವು ಪ್ರೇಕ್ಷಕರಿಗೆ ಇಷ್ಟವಾಗಿದ್ದು ಖುಷಿ ತಂದಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮತ್ತೋರ್ವ ನಾಯಕಿ ವೈಶಾಲಿ ದೀಪಕ್ ಉಪಸ್ಥಿತರಿದ್ದರು. ಬಳಿಕ ಗೆಲುವಿನ ಕೇಕ್ ಕತ್ತರಿಸಿ ಸಂಭ್ರಮಾಚರಿಸಲಾಯಿತು.

ಧ್ರುವನ 'ಪೊಗರು'

ಧ್ರುವ ಮುಂದಿನ‌ ಚಿತ್ರವಾಗಿ ನಂದಕಿಶೋರ್ ನಿರ್ದೇಶನದ 'ಪೊಗರು' ಚಿತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರಂತೆ. ಅಂದಹಾಗೆ ಈ ಚಿತ್ರಕ್ಕೆ ಹಿಂದೆ ಹಯಗ್ರೀವ ಎಂದು ಹೆಸರಿಡಲಾಗಿತ್ತು. ಈಗ ಪೊಗರು ಎಂದು ಬದಲಾಯಿಸಲಾಗಿದೆ.

share
ಶಶಿಕರ ಪಾತೂರು
ಶಶಿಕರ ಪಾತೂರು
Next Story
X