ಪಿಕಪ್ ವ್ಯಾನ್- ಬೈಕ್ ಢಿಕ್ಕಿ: ಗಾಯಾಳು ಯುವಕ ಮೃತ್ಯು
ಮಂಜೇಶ್ವರ, ಸೆ. 19: ಬಂದ್ಯೋಡು ಬಳಿ ಪಿಕಪ್ ವ್ಯಾನ್ ಹಾಗೂ ಬೈಕ್ ಢಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನೋರ್ವ ಮೃತಪಟ್ಟ ಘಟನೆ ವರದಿಯಾಗಿದೆ.
ಮೃತ ಯುವಕನನ್ನು ಮೂಲತ ಹೊಸಂಗಡಿ ನಿವಾಸಿ ಅಡ್ಕದ ಅಜ್ಮಲ್ ಕ್ವಾರ್ಟರ್ಸ್ ನಲ್ಲಿ ವಾಸವಿರುವ ಅಬ್ದುಲ್ ಗಫೂರ್(32) ಎಂದು ಗುರುತಿಸಲಾಗಿದೆ.
ಸೆ. 9ರಂದು ಗಫೂರ್ ಚಲಾಯಿಸುತ್ತಿದ್ದ ಸ್ಕೂಟರ್ ಗೆ ಪಿಕಪ್ ವ್ಯಾನ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಅಪಘಾತದಿಂದ ತಲೆಗೆ ಗಂಭೀರ ಗಾಯಗೊಂಡ ಈತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಮದ್ಯಾಹ್ನ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
Next Story





