ವಿಲಾಸಿ ಜೀವನ ನಡೆಸಿದ್ದ ಗುರ್ಮೀತ್ ಗೆ ಜೈಲಿನಲ್ಲಿ ಸಿಕ್ಕ ಕೆಲಸವೇನು?, ಆತನಿಗೆ ಸಿಗುವ ದಿನಗೂಲಿ ಎಷ್ಟು ಗೊತ್ತೇ?

ಚಂಡೀಗಢ, ಸೆ.19: ಇಬ್ಬರು ಸಾಧ್ವಿಗಳ ಮೇಲೆ ಅತ್ಯಾಚಾರಗೈದ ಪ್ರಕರಣದಲ್ಲಿ ಈಗಾಗಲೇ ಜೈಲು ಸೇರಿರುವ ಡೇರಾ ಸಚ್ಚಾ ಸೌಧಾದ ಮುಖ್ಯಸ್ಥ ಗುರ್ಮೀತ್ ಸಿಂಗ್ ಒಂದು ಕಾಲದಲ್ಲಿ ವಿಲಾಸಿ ಜೀವನ ನಡೆಸಿದ್ದಾತ. ಕೋಟ್ಯಂತರ ರೂ.ಗಳ ಆಸ್ತಿಪಾಸ್ತಿಗಳ ಒಡೆಯನಾಗಿದ್ದವ ಈಗ ಜೈಲಿನಲ್ಲಿ ತರಕಾರಿ ಬೆಳೆಯುತ್ತಿದ್ದಾನೆ. ಅದೂ ಕೇವಲ 20 ರೂ. ದಿನಗೂಲಿಗೆ!.
ಸಾಧ್ವಿಗಳನ್ನು ಅತ್ಯಾಚಾರಗೈದ ಪ್ರಕರಣದಲ್ಲಿ ಜೈಲು ಸೇರಿರುವ ಈ ಸ್ವಯಂಘೋಷಿತ ದೇವಮಾನವ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದಾನೆ. ತನ್ನ ಜೈಲು ಕೋಣೆಯ ಸಮೀಪದಲ್ಲಿರುವ ಸಣ್ಣ ಸ್ಥಳದಲ್ಲಿ ಆತ ತರಕಾರಿಗಳನ್ನು ಬೆಳೆಯುತ್ತಿದ್ದಾನೆ ಹಾಗೂ ಮರಗಳನ್ನು ಕಡಿಯುವ ಕೆಲಸ ಮಾಡುತ್ತಿದ್ದಾನೆ. ಪ್ರತಿದಿನ ಆತ 8 ಗಂಟೆಗಳ ಕಾಲ ಕೆಲಸ ಮಾಡುತ್ತಾನೆ ಎನ್ನುತ್ತಾರೆ ಹರ್ಯಾಣ ಡಿಜಿಪಿ ಕೆ.ಪಿ. ಸಿಂಗ್.
ಆತ ಈಗಾಗಲೇ ಕೆಲಸ ಆರಂಭಿಸಿದ್ದಾನೆ. ಆತ ಬೆಳೆದದ್ದನ್ನು ಜೈಲಿನ ಮೆಸ್ ಗೆ ಕಳುಹಿಸಲಾಗುತ್ತದೆ. ತನ್ನ ಕೋಣೆಯ ಹತ್ತಿರದಲ್ಲಿರುವ ಮರಗಳನ್ನೂ ಕಡಿಯುತ್ತಿದ್ದಾನೆ. ಇದಕ್ಕಾಗಿ 20 ರೂ. ದಿನಗೂಲಿ ನೀಡಲಾಗುತ್ತದೆ ಎಂದವರು ಹೇಳಿದ್ದಾರೆ.





