ದ.ಕ.,ಕೊಡಗು: ಸೆ.21ರಿಂದ ಅ.5ರವರೆಗೆ ದಸರಾ ರಜೆ

ಮಂಗಳೂರು, ಸೆ. 19: ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ದಸರಾ ರಜೆಯನ್ನು ಸೆ.21 ರಿಂದ ಅಕ್ಟೋಬರ್ 5 ರವರೆಗೆ ನಿಗದಿಪಡಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಅ.6 ರಂದು ಶಾಲಾ ಕಾಲೇಜುಗಳು ಪುನರಾರಂಭಗೊಳ್ಳಲಿದೆ. ಪ್ರಾಥಮಿಕ, ಪ್ರೌಢಶಾಲೆ ಮತ್ತು ಪಿಯುಸಿ ವಿದ್ಯಾಸಂಸ್ಥೆಗಳಿಗೆ ಈ ರಜೆ ಅನ್ವಯವಾಗಲಿದೆ. ದಸರಾ ರಜೆಯನ್ನು ನವರಾತ್ರಿ ಸಂದರ್ಭದಲ್ಲಿಯೇ ನೀಡುವಂತೆ ಸಾರ್ವಜನಿಕರ, ಶಿಕ್ಷಣ ಸಂಸ್ಥೆಗಳ ಮನವಿಗೆ ಸ್ಪಂದಿಸಿ ರಾಜ್ಯ ಸರಕಾರ ದಸರಾ ರಜೆ ಬದಲಾಯಿಸಿದೆ ಎಂದು ಅರಣ್ಯ, ದ.ಕ. ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ.
Next Story





