ಸೆ.24ರಂದು ಆರೋಗ್ಯ ಕಾರ್ಡ್ ವಿತರಣೆ
ಉಡುಪಿ, ಸೆ.19: ಉಡುಪಿ ಧರ್ಮಪ್ರಾಂತ ಕೆಥೊಲಿಕ್ ಸಭಾ ವತಿಯಿಂದ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ವಿತರಣೆ ಹಾಗೂ ಶಿರ್ವ ವಲಯ ಸಮಿತಿಯ ವಾರ್ಷಿಕ ಸಹಮಿಲನ ಸೆ.24ರಂದು ಶಿರ್ವ ಚರ್ಚಿನ ಸಾವುದ್ ಸಭಾಭವನದಲ್ಲಿ ಜರಗಲಿದೆ.
ಉಡುಪಿ ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಕಾಪು ಶಾಸಕ ವಿನಯ ಕುಮಾರ್ ಸೊರಕೆ, ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಕೊಡಗು ಜಿಲ್ಲಾಧಿಕಾರಿ ರಿಚ್ಚರ್ಡ್ ವಿನ್ಸೆಂಟ್ ಡಿಸೋಜ, ಶಿರ್ವ ಜಿಪಂ ಸದಸ್ಯ ವಿಲ್ಸನ್ ರೊಡ್ರಿಗಸ್, ತಾಪಂ ಸದಸ್ಯ ಮೈಕಲ್ ರಮೇಶ್ ಡಿಸೋಜ, ವೈಲೆಟ್ ಬರೆಟ್ಟೊ ಭಾಗವಹಿಸಲಿರುವರು ಎಂದು ಕೆಥೊಲಿಕ್ ಸಭಾ ಅಧ್ಯಕ್ಷ ವಲೇರಿ ಯನ್ ಫೆರ್ನಾಂಡಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





