ರಂಗಮಂದಿರಗಳ ಕೊರತೆ ನೀಗಿಸುವ ಪ್ರಯತ್ನ ನಡೆಯಲಿ: ಈಶ್ವರಯ್ಯ

ಉಡುಪಿ, ಸೆ.19: ಉಡುಪಿಯ ನಾದವೈಭವಂ ಸಂಗೀತ ಶಿಕ್ಷಣ ಸಂಶೋಧನ ಸಂಸ್ಥೆಯ ವತಿಯಿಂದ ಗುರುವಂದನ- ಸಂಸ್ಥಾಪನಾ ದಿನವನ್ನು ಇತ್ತೀಚೆಗೆ ಕಡಿಯಾಳಿಯ ಕಾತಾ್ಯಯಿನಿ ಮಂಟಪದಲ್ಲಿ ಆಚರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಕಲಾ ವಿಮರ್ಶಕ ಎ.ಈಶ್ವರಯ್ಯ ಮಾತನಾಡಿ, ಶಾಸ್ತ್ರೀಯ ಸಂಗೀತವನ್ನು ಆಲಿಸುವ, ಕಲಿಸುವ ಮತ್ತು ನೃತ್ಯಾಭಿನಯಗೊಳಿಸುವ ಪ್ರತ್ಯೇಕ ರಂಗ ಮಂದಿರಗಳ ಕೊರತೆ ನಮ್ಮನ್ನು ಕಾಡುತ್ತಿದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಯಕ್ಷಗಾನ ವಿಮರ್ಶಕ ಡಾ.ಎಂ.ಪ್ರಭಾಕರ ಜೋಶಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೃಷಿ ತಜ್ಞ ಮಣಿಕ್ಕಾರ ಗೋಪಾಲಕೃಷ್ಣ ಶ್ಯಾನುಭಾಗ್ ಬೆಳ್ಳಾರೆ ಹಾಗೂ ಸಂಗೀತ ಗುರು ಪಲಿಮಾರು ಯಶೋದಾ ರಾವ್ ರಾಜೀವನಗರ ಅವರಿಗೆ ‘ನಾದವೈಭವಂ’ ಪ್ರಶಸ್ತಿಯನ್ನು ಪ್ರದಾನ ಮಾಡ ಲಾಯಿತು. ಲೇಖಕರಾದ ಕು.ಗೋ. ಹಾಗೂ ಶಾಂತರಾಜ ಐತಾಳ್ ಮುಖ್ಯ ಅತಿಥಿಗಳಾಗಿದ್ದರು.
ಕವಿ ಅಂಶುಮಾಲಿ ಸ್ವಾಗತಿಸಿದರು. ಉಡುಪಿ ವಾಸುದೇವ ಭಟ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಎಂ.ಎಸ್.ಗಿರಿಧರ್ ವಂದಿಸಿದರು. ಅನಸೂಯ ಬಿ. ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪಲಿಮಾರು ಯಶೋಧಾ ರಾವ್ ಹಾಗೂ ಶಿಷ್ಯರಿಂದ ಸಂಗೀತಗಾನ ನಮನ, ನಾದವೈಭವಂ ಬಳಗದಿಂದ ಗೀತ ಗಾಯನ ನಡೆಯಿತು.





