ವಾರಸುದಾರರಲ್ಲಿ ಮನವಿ
ಮಂಗಳೂರು, ಸೆ. 19: ನಗರದ ಉರ್ವ ಸ್ಟೋರ್ ಮೈದಾನದಲ್ಲಿ ಕಾಲು ನೋವಿನಿಂದ ಬಳಲುತ್ತಿದ್ದು, ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಯೊಬ್ಬರು ಸೋಮವಾರ ಮೃತಪಟ್ಟಿದ್ದಾರೆ.
ಮನೋಜ್ (54) ಎಂಬವರು ಉರ್ವ ಸ್ಟೋರ್ ಮೈದಾನದಲ್ಲಿ ಸೆ. 16ರಂದು ಕಾಲು ನೋವಿನಿಂದ ಬಳಲುತ್ತಿದ್ದು, ಇವರನ್ನು ಟೆಂಪೊ ಪಾರ್ಕಿನವರು ಉಪಚರಿಸಿ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಸೆ. 18ರಂದು ಅವರು ಮೃತಪಟ್ಟಿದ್ದಾರೆ.
ವಾರಸುದಾರರಿದ್ದಲ್ಲಿ ಉರ್ವಾ ಪೊಲೀಸ್ ಠಾಣೆ ಅಥವಾ ಪೊಲೀಸ್ ನಿಯಂತ್ರಣ ಕೋಣೆಗೆ ಸಂಪರ್ಕಿಸುವಂತೆ ಕೋರಲಾಗಿದೆ. ದೂ.ವಾ. 0824-2220521 ಅಥವಾ 0824-2220514 ಸಂಖ್ಯೆಯನ್ನು ಸಂಪರ್ಕಿಸುವಂತೆ ಪ್ರಕಟನೆ ಕೋರಿದೆ.
Next Story





