ಖಮರುಲ್ ಇಸ್ಲಾಂ ನಿಧನ: ಪಿಎಫ್‌ಐ ಸಂತಾಪ
ಮಂಗಳೂರು, ಸೆ. 19: ಮಾಜಿ ಸಚಿವರು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೂ ಆಗಿರುವ ಖಮರುಲ್ ಇಸ್ಲಾಂ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಆರು ಬಾರಿ ಶಾಸಕರಾಗಿ ಹಾಗೂ ಒಮ್ಮೆ ಸಂಸದರಾಗಿ ಆಯ್ಕೆಯಾಗಿದ್ದ ಖಮರುಲ್ ಇಸ್ಲಾಂ ಪೌರಾಡಳಿತ, ಅಲ್ಪ ಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವರಾಗಿ ಸೇವೆ ಸಲ್ಲಿಸಿದ್ದರು. ದುರ್ಬಲ ಜನರ ಬಗ್ಗೆ ತೀವ್ರ ಕಳಕಳಿಯನ್ನು ಹೊಂದಿದ್ದ ಖಮರುಲ್ ಇಸ್ಲಾಂ ಅತ್ಯಂತ ಜನಪ್ರಿಯ ಜನ ನಾಯಕರಾಗಿದ್ದರು. ಖಮರುಲ್ ಇಸ್ಲಾಂ ಹಠಾತ್ ನಿಧನವು ಸಮಾಜಕ್ಕೆ ದೊಡ್ಡ ನಷ್ಟವಾಗಿದೆ ಎಂದು ಅವರು ಸಂಚಾಪ ಸೂಚಿಸಿದ್ದಾರೆ.
ಉಳ್ಳಾಲ ದರ್ಗಾ ಸಮಿತಿ ಸಂತಾಪ: ಸಚಿವ ಖಮರುಲ್ ಇಸ್ಲಾಂ ಅವರ ನಿಧನಕ್ಕೆ ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ಸಂಚಾಪ ಸೂಚಿಸಿದ್ದಾರೆ. ಅಲ್ಪ ಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವರಾಗಿ ಸೇವೆ ಸಲ್ಲಿಸಿದ್ದ ಅವರು ಉಳ್ಳಾಲದ ದಾರ್ಗದ ಬಗ್ಗೆ ವಿಶೇಷ ಗೌರವವನ್ನು ಹೊಂದಿದ್ದರು ಎಂದವರು ತಿಳಿಸಿದ್ದಾರೆ.
Next Story





