ಸಮುದ್ರದಲ್ಲಿ ಮೃತದೇಹ ಪತ್ತೆ
ಕಾಪು, ಸೆ.19: ಕಟಪಾಡಿಯ ಮಟ್ಟು ಗ್ರಾಮದ ಮಟ್ಟು ಕೊಪ್ಲದ ಸಮುದ್ರ ದಲ್ಲಿ ಸೆ.18ರಂದು ಸಂಜೆ ಸುಮಾರು 30 ರಿಂದ 40 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತ ದೇಹದ ಮೇಲೆ ತಿಳಿ ಕಂದು ಬಣ್ಣದ ತುಂಬು ತೋಳಿನ ಶರ್ಟ್ ಮತ್ತು ವಿ ಆಕಾರದ ನೀಲಿ ಬಣ್ಣದ ಕೆಂಪು ಎಲಾಸ್ಟಿಕ್ ಇರುವ ನಿಕ್ಕರ್ ಇದ್ದು, ಈ ವ್ಯಕ್ತಿ ಸುಮಾರು 15-20 ದಿನಗಳ ಹಿಂದೆ ಸಮುದ್ರದ ನೀರಿಗೆ ಬಿದ್ದು ಮೃತ ಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





