ಮೀನುಗಾರನ ಮೃತದೇಹ ಪತ್ತೆ
ಗಂಗೊಳ್ಳಿ, ಸೆ.19: ಗಂಗೊಳ್ಳಿ ಬಂದರಿನಲ್ಲಿ ನಿಲ್ಲಿಸಿದ್ದ ಸಾಯಿಪಂಚರಿ ಬೋಟಿನಿಂದ ಸೆ.17ರ ಅಪರಾಹ್ನದಿಂದ ನಾಪತ್ತೆಯಾಗಿದ್ದ ಭಟ್ಕಳದ ಕೃಷ್ಣಕುಮಾರ್ ಎಂಬವರ ಮೃತದೇಹ ಇಂದು ಬೆಳಗ್ಗೆ 6:30ರ ಸುಮಾರಿಗೆ ಸಮುದ್ರದಲ್ಲಿ ಪತ್ತೆಯಾಗಿದೆ.
ಇವರು ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದಾಗ ಆಕಸ್ಮಿಕ ವಾಗಿ ಗಂಗೊಳ್ಳಿ ಧಕ್ಕೆಯ ಪಂಚಗಂಗಾ ಹೊಳೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇವರ ಮೃತದೇಹ ಗಂಗೊಳ್ಳಿ ಲೈಟ್ಹೌಸ್ ಸಮುದ್ರ ಕಿನಾರೆ ಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





