ಬಾಲಕಿಯರನ್ನು ಮದುವೆಯಾಗಲು ಬಂದ 8 ಅರಬ್ ಪ್ರಜೆಗಳ ಬಂಧನ

ಹೈದರಾಬಾದ್, ಸೆ.20: ಬಾಲಕಿಯರನ್ನು ಮದುವೆಯಾಗಲು ಯತ್ನಿಸಿದ 8 ಮಂದಿ ವಿದೇಶಿ ಪ್ರಜೆಗಳನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ಒಮಾನ್ ಮತ್ತು ಕತಾರ್ ದೇಶದವರಾಗಿದ್ದಾರೆ. ಈ ಮದುವೆಯನ್ನು ನಡೆಸಲು ಸಿದ್ಧತೆಯನ್ನು ಮಾಡಿಕೊಂಡಿದ್ದ ಧಾರ್ಮಿಕ ಗುರುವನ್ನೂ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ಈ ವಿದೇಶಿ ಪ್ರಜೆಗಳಿಗೆ ಆಶ್ರಯ ನೀಡಿದ ಹಾಗೂ ಅವರ ಚಟುವಟಿಕೆಗಳನ್ನು ಮುಚ್ಚಿಟ್ಟ ನಾಲ್ಕು ಲಾಡ್ಜ್ ಮಾಲಕರನ್ನು ಹಾಗೂ ಐವರು ಬ್ರೋಕರ್ ಗಳನ್ನು ಬಂಧಿಸಲಾಗಿದೆ. ಬ್ರೋಕರ್ ಗಳ ಮೂಲಕ ಬಾಲಕಿಯರ ಮದುವೆಗೆ ವಿದೇಶಿ ಪ್ರಜೆಗಳು ಸಿದ್ಧರಾಗಿದ್ದರು ಎಂದು ತಿಳಿದುಬಂದಿದೆ.
Next Story





