1,500 ಶೌಚಾಲಯಗಳನ್ನು ನಿರ್ಮಿಸಿ ಮಾದರಿಯಾದ ಯುವತಿಯರು
'ಬಯಲುಶೌಚ ಮುಕ್ತ ಜಿಲ್ಲೆ'ಯೆಡೆಗೆ ಹೆಜ್ಜೆ

ಸಹರಾನ್ಪುರ, ಸೆ.20: ಜಿಲ್ಲೆಯನ್ನು ಬಯಲುಶೌಚ ಮುಕ್ತವನ್ನಾಗಿಸುವ ಉದ್ದೇಶದಿಂದ ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯ ಯುವತಿಯರು 1,500 ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಮಾದರಿಯಾಗಿದ್ದಾರೆ,.
ಸಹರಾನ್ಪುರವನ್ನು ಬಯಲುಶೌಚ ಮುಕ್ತ ಜಿಲ್ಲೆಯಾಗಿ ಪರಿವರ್ತಿಸುವ ಉದ್ದೇಶದಿಂದ ಈ ಯುವತಿಯರು ಜಿಲ್ಲೆಯ 11 ಬ್ಲಾಕ್ ಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿದ್ದಾರೆ.
ಆರಂಭದಲ್ಲಿ ಸರಕಾರದ ಯಾವುದೇ ಸಹಾಯವಿಲ್ಲದೆ ಎರಡು ವರ್ಷಗಳ ಶ್ರಮದಿಂದ ಈ ಸಾಧನೆ ಮಾಡಿದ್ದಾರೆ. “1500 ಶೌಚಾಲಯಗಳ ನಿರ್ಮಾಣಕ್ಕೆ ಯುವತಿಯರ ಪರಿಶ್ರಮವೇ ಕಾರಣ. 167 ಶೌಚಾಲಯಗಳನ್ನು ಸರಕಾರದಿಂದ ಯಾವುದೇ ಸಹಾಯ ಪಡೆಯದೆ ನಿರ್ಮಿಸಲಾಗಿತ್ತು” ಎಂದು ಕೌನ್ಸಿಲರ್ ಡಿ.ಬಿ. ಪಾಂಡೆ ಹೇಳಿದ್ದಾರೆ.
2015ರ ಸೆಪ್ಟಂಬರ್ ನಲ್ಲಿ ಈ ಆಂದೋಲನ ಆರಂಭವಾಗಿತ್ತು. ಆ ಸಂದರ್ಭ ಕೇವಲ 11 ಮಂದಿಯಿದ್ದರು. ಈಗ 110 ಯುವತಿಯರು ಈ ತಂಡದಲ್ಲಿದ್ದಾರೆ.
Next Story





