ಎನ್.ಡಿ.ತಿವಾರಿಗೆ ಮಿದುಳಿನ ಆಘಾತ,ಆಸ್ಪತ್ರೆಗೆ ದಾಖಲು

ಹೊಸದಿಲ್ಲಿ,ಸೆ..20: ಮಾಜಿ ಕೇಂದ್ರ ಸಚಿವ ಎನ್.ಡಿ.ತಿವಾರಿ(91)ಯವರು ಬುಧವಾರ ಮಿದುಳಿನ ಆಘಾತಕ್ಕೊಳಗಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾ ಗಿದೆ.
ಉತ್ತರ ಪ್ರದೇಶ ಮತ್ತು ಉತ್ತರಾಖಂಡಗಳ ಮಾಜಿ ಮುಖ್ಯಮಂತ್ರಿಯೂ ಆಗಿರುವ ತಿವಾರಿ ಅವರ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮ್ಯಾಕ್ಸ್ ಹಾಸ್ಪಿಟಲ್‌ನ ಮೂಲಗಳು ತಿಳಿಸಿದವು.
ತಿವಾರಿಯವರು ಇಲ್ಲಿಯ ತನ್ನ ನಿವಾಸದಲ್ಲಿ ಬೆಳಿಗ್ಗೆ ಚಹಾ ಕುಡಿಯುತ್ತಿದ್ದಾಗ ಕುಸಿದು ಬಿದ್ದು ಪ್ರಜ್ಞಾಹೀನರಾಗಿದ್ದರು ಎಂದು ಅವರ ಪುತ್ರ ಶೇಖರ್ ತಿವಾರಿ ತಿಳಿಸಿದ್ದಾರೆ.
Next Story





