ಬೈಕ್ ಢಿಕ್ಕಿ: ಪಾದಚಾರಿ ಗಾಯ
ಮುಂಡಗೋಡ, ಸೆ.20: ಬೈಕೊಂದು ಪಾದಚಾರಿಗೆ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಗಾಯಗೊಂಡ ಘಟನೆ ಪಟ್ಟಣದಲ್ಲಿ ನಡೆದಿದೆ.
ಗಾಯಾಳನ್ನು ಗಾಂಧಿನಗರದ ನಿವಾಸಿ ಲಕ್ಷ್ಮವ್ವ ಮಾರುತಿ ಕೊರವರ ಎಂದು ಗುರುತಿಸಲಾಗಿದೆ.
ಲಕ್ಷ್ಮವ್ವ ಅವರು ಬಂಕಾಪುರ ರಸ್ತೆಯ ಮಹಾಲಕ್ಷ್ಮೀ ಹೊಟೇಲ್ ಹತ್ತಿರ ರಸ್ತೆ ದಾಟುತ್ತಿದ್ದಾಗ ವೇಗದಿಂದ ಬಂದ ಬೈಕ್ ಲಕ್ಷ್ಮವ್ವರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಈ ಬಗ್ಗೆ ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





