ತೆಂಕನಿಡಿಯೂರು: ವಿದ್ಯಾರ್ಥಿವೇತನ ವಿತರಣೆ- ಸನ್ಮಾನ

ಉಡುಪಿ, ಸೆ.20: ತೆಂಕನಿಡಿಯೂರು ಶ್ರೀಕಾಳಿಕಾಂಬಾ ಭಜನಾ ಸಂಘ, ಶ್ರೀದೇವಿ ಮಹಿಳಾ ಮಂಡಳಿ ಹಾಗೂ ಬಾಲ ಸಂಸ್ಕಾರ ಕೇಂದ್ರದ ಸಹಯೋಗ ದಲ್ಲಿ ಇತ್ತೀಚೆಗೆ ನಡೆದ ಶ್ರೀ ವಿಶ್ವಕರ್ಮ ಪೂಜೆಯ ಸಂದರ್ಭದಲ್ಲಿ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಉದ್ಯಾವರ ವಿಶ್ವನಾಥ ಪುರೋಹಿತ್ ಅವರ ಪೌರೋಹಿತ್ಯದಲ್ಲಿ ಪೂಜೆ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಾರಕೂರು ಶ್ರೀಕಾಳಿಕಾಂಬಾ ದೇವಸ್ಥಾನದ ಎರಡನೇ ಮೊಕ್ತೇಸರ ದಯಾನಂದ ಕರಂಬಳ್ಳಿ, ಡಾ.ಜ್ಯೋತಿ ದಯಾನಂದ ಆಚಾರ್ಯ ಕೆಳಾರ್ಕಳಬೆಟ್ಟು ಭಾಗ ವಹಿಸಿದ್ದರು.
ಅಧ್ಯಕ್ಷತೆಯನ್ನು ಶ್ರೀಕಾಳಿಕಾಂಬಾ ಭಜನಾ ಸಂಘದ ಅಧ್ಯಕ್ಷ ಟಿ.ಕೃಷ್ಣ ಆಚಾರ್ಯ ವಹಿಸಿದ್ದರು. ಭಜನಾ ಸಂಘದ ಗೌರವಾಧ್ಯಕ್ಷ ಟಿ.ವಾದಿರಾಜ ಆಚಾರ್ಯ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಎಂ.ಮಂಜುನಾಥ ಆಚಾರ್ಯ, ಶ್ರೀದೇವಿ ಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ಅಪಿ್ಪ ಶಿವಯ್ಯ ಆಚಾರ್ಯ ಉಪಸ್ಥಿತರಿದ್ದರು.
ವಿದ್ಯಾನಿಧಿ ವಿವಿಧ ದತ್ತಿನಿಧಿಗಳ ಪ್ರಾಯೋಜಕತ್ವದಿಂದ ತೆಂಕನಿಡಿಯೂರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಉಡುಪಿ ಪುತ್ತೂರಿನ ಕಾಷ್ಠಶಿಲ್ಪಿಮಾಧವ ಆಚಾರ್ಯ, ಶ್ರೀಕಾಳಿಕಾಂಬಾ ಭಜನಾ ಸಂಘದ ಹಿರಿಯ ಸದಸ್ಯ ಚಂದ್ರಯ್ಯ ಆಾರ್ಯ ಅವರನ್ನು ಸನ್ಮಾನಿಸಲಾಯಿತು.
ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ದಯಾನಂದ ಆಚಾರ್ಯ ಸ್ವಾಗತಿಸಿದರು. ಬಾಲ ಸಂಸ್ಕಾರ ಕೇಂದ್ರದ ಕಾರ್ಯದರ್ಶಿ ಸುಷ್ಮಾ ರಾಜೇಶ್ ಆಚಾರ್ಯ ವಂದಿಸಿದರು. ಉಮೇಶ್ ಆಚಾರ್ಯ ಕಾರ್ಯಕ್ರಮ ನಿರೂ ಪಿಸಿದರು.







