ಉಡುಪಿ : ಮರಳು ಸಾಗಾಟ ದೋಣಿ,ಲಾರಿಗೆ ಜಿಪಿಎಸ್ ಅಳವಡಿಕೆ
ಉಡುಪಿ, ಸೆ.20: ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದಲ್ಲಿ ಮರಳನ್ನು ಸಾಗಾಣಿಕೆ ಮಾಡುವ ದೋಣಿ ಹಾಗೂ ವಾಹನಗಳಿಗೆ ಜಿಪಿಎಸ್ ಅಳವಡಿಸಲು ಅಗತ್ಯ ತಂತ್ರಾಂಶಗಳನ್ನು ಒದಗಿಸಿ ಮತ್ತು ಅಂತರ್ಜಾಲ ವೆಬ್‌ಸೈಟ್ ಮೂಲಕ ಮರಳು ಸಾಗಾಣಿಕಾ ದೋಣಿ ಹಾಗೂ ವಾಹನಗಳ ಚಲನವಲನಗಳ ಸಂಪೂರ್ಣ ಮಾಹಿತಿ ನೀಡುವ ಮತ್ತು ನಿಯಂತ್ರಿಸುವ ಸಂಬಂಧ ಸೇವೆ ನೀಡಲು ಅಲ್ಪಾವಧಿ ಟೆಂಡರ್‌ನ್ನು ಕರೆಯಲಾಗಿತ್ತು.
ಟೆಂಡರ್‌ನ ಷರತ್ತು ಹಾಗೂ ನಿಯಮಾವಳಿಯಂತೆ U4W ಸಂಸ್ಥೆಗೆ ಪ್ರತೀ ದೋಣಿಗೆ 19000 ರೂ. ಹಾಗೂ ಪ್ರತಿ ಮರಳು ಸಾಗಾಟ ವಾಹನಕ್ಕೆ 9,700 ರೂ. ದರದಂತೆ ಜಿಪಿಎಸ್ ಅಳವಡಿಸಲು ಕಾರ್ಯಾದೇಶ ನೀಡಲಾಗಿದೆ.
ದೋಣಿಗಳಿಗೆ ಅಳವಡಿಸುವ ಜಿಪಿಎಸ್ ಸಾಮಾನ್ಯವಾಗಿ ನೀರಿನಲ್ಲಿ ಮುಳುಗುವ ಸ್ಯಾತೆಇರುವುದರಿಂದಜಲನಿರೋಕ ಗುಣವುಳ್ಳ ಉಪಕರಣವಾಗಿದ್ದು, ಬ್ಯಾಟರಿ ಹಾಗೂ ಇತರೆ ಉಪಕರಣ ಒದಗಿಸುವ ಸೇವೆ ಸೇರಿ ಪ್ರತೀ ದೋಣಿಗೆ ಒಟ್ಟು 19,000 ರೂ. ದರವನ್ನು ನಿಗದಿ ಪಡಿಸಲಾಗಿದೆ. ಈ ಉಪಕರಣಗಳಿಗೆ ಒಂದು ವರ್ಷದ ವಾರೆಂಟಿಯನ್ನು ಸಹ ನೀಡಲಾಗಿದೆ. ಪ್ರತೀ ವಾಹನಗಳಿಗೆ (ಲಾರಿ) ಅಳವಡಿಸುವ ಜಿಪಿಎಸ್ ಉಪಕರಣ ಹಾಗೂ ಒದಗಿಸುವ ಸೇವೆ ಸೇರಿ ಒಟ್ಟು 9,700 ರೂ. ನಿಗದಿಪಡಿಸಲಾಗಿದೆ. ಈ ಉಪಕರಣಕ್ಕೂ ಒಂದು ವರ್ಷದ ವಾರೆಂಟಿಯನ್ನು ನೀಡಲಾಗಿದೆ.
ಪ್ರತೀ ವಾಹನಗಳಿಗೆ (ಲಾರಿ) ಅಳವಡಿಸುವ ಜಿಪಿಎಸ್ ಉಪಕರಣ ಹಾಗೂ ಒದಗಿಸುವ ಸೇವೆ ಸೇರಿ ಒಟ್ಟು 9,700 ರೂ. ನಿಗದಿಪಡಿಸಲಾಗಿದೆ. ಈ ಉಪಕರಣಕ್ಕೂ ಒಂದು ವರ್ಷದ ವಾರೆಂಟಿಯನ್ನು ನೀಡಲಾಗಿದೆ. ಮೇಲಿನ ದರದಲ್ಲಿ ಮರಳು ಪರವಾನಿಗೆದಾರರು ದೋಣಿ ಹಾಗೂ ವಾಹನ ಗಳಿಗೆ ಸ್ವಇಚ್ಛೆಯಿಂದ ಜಿಪಿಎಸ್ ಅಳವಡಿಸಿಕೊಳ್ಳುತಿದ್ದಾರೆ. ಮರಳು ಪರವಾನಿಗೆ ದಾರರು ಜಿಪಿಎಸ್ ದರದ ಬಗ್ಗೆ ಯಾವುದೇ ಆಕ್ಷೇಪಣೆ ಎತ್ತಿಲ್ಲ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.







