ಹೆಬ್ರಿ : ಬಾವಿಗೆ ಬಿದ್ದು ಮಹಿಳೆ ಮೃತ್ಯು
ಹೆಬ್ರಿ, ಸೆ.20: ಮಹಿಳೆಯೊಬ್ಬರು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಸೆ.18ರಂದು ರಾತ್ರಿ 9ಗಂಟೆ ಸುಮಾರಿಗೆ ಕಳ್ತೂರು ಗ್ರಾಮದ ಹೊಯಿಗೆ ಬೆಳ್ಳಾರ್ ಎಂಬಲ್ಲಿ ನಡೆದಿದೆ.
ಮೃತರನ್ನು ಹೊಯಿಗೆ ಬೆಳಾರು ನಿವಾಸಿ ಲಕ್ಷ್ಮಣ ನಾಯ್ಕ ಎಂಬವರ ಪತ್ನಿ ರುಕ್ಕ್ಮಿಣಿ ಬಾಯಿ(65) ಎಂದು ಗುರುತಿಸಲಾಗಿದೆ. ಇವರು ಮಗನ ಮನೆಯಲ್ಲಿ ಊಟ ಮಾಡಿ ಮಲಗಲು ಅಲ್ಲೇ ಸಮೀಪದ ತನ್ನ ಮನೆಗೆ ಹೋಗುವಾಗ ಅಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story