ಮೀನುಗಳ ಹರಾಜು ವಿಚಾರ: ದಲಿತ-ಸವರ್ಣೀಯರ ನಡುವೆ ಮಾರಾಮಾರಿ

ಚಿಕ್ಕಮಗಳೂರು, ಸೆ.20: ಕೆರೆಯಲ್ಲಿ ಮೀನುಗಳ ಹರಾಜು ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರ ನಡುವೆ ಮಾರಾಮಾರಿ ನಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮಳಲೂರು ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದೆ.
ಮಳೂಲೂರು ಗ್ರಾಪಂ ನಲ್ಲಿ ಆದಿಹಳ್ಳಿಯ ಕೆರೆಯಲ್ಲಿ ಇರುವ ಮೀನುಗಳ ಹರಾಜು ಪ್ರಕ್ರಿಯೆ ಬುಧವಾರ ನಡೆದಿತ್ತು. ಇದಕ್ಕೆ ಆದಿಹಳ್ಳಿಯ ಕೆಲ ದಲಿತ ಯುವಕರು ಕೆರೆಯಲ್ಲಿ ಅಳವಡಿಸಿದ್ದ ಪಂಪ್ ಸೆಟ್ ತೆಗೆಸುವಂತೆ ಮನವಿ ಮಾಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಸವರ್ಣೀಯರು ಮತ್ತು ದಲಿತರ ನಡುವೆ ಮಾತಿ ಚಕಮಕಿ ನಡೆದು ಬಳಿಕ ಕೈ ಕೈ ಮಿಲೈಸುವ ಹಂತಕ್ಕೆ ತಲುಪಿ ಹೋದ ಪರಿಣಾಮ ಗ್ರಾಪಂ ಪಿಡಿಒ ಜಗದೀಶ್ ಸೇರಿಸಂತೆ ನ್ವಾಲರು ದಲಿತ ಯುವಕರ ಮೇಲೆ ಸವರ್ಣೀಯರು ಹಲ್ಲೆ ಮಾಡಿ ಗಂಭೀರ ಗಾಯಗೊಳಿಸಿದ್ದಾರೆ ಎಂದು ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ದಲಿತ ಯುವಕರು ಆರೋಪ ಮಾಡುತ್ತಿದ್ದಾರೆ.
ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





