ಒಂದು ವರ್ಗ, ಜಾತಿಯವರು ಮಾತ್ರ ಕ್ರಿಮಿನಲ್‌ಗಳೇ: ಮಾಯಾವತಿ
ಉತ್ತರಪ್ರದೇಶ ಎನ್‌ಕೌಂಟರ್

ಲಕ್ನೊ, ಸೆ. 20: ಯೋಗಿ ಆದಿತ್ಯನಾಥ್ ನೇತೃತ್ವದ ಆಡಳಿತವಿರುವ ಉತ್ತರಪ್ರದೇಶದಲ್ಲಿ ನಡೆದಿರುವ ಎನ್‌ಕೌಂಟರ್ ಬಗ್ಗೆ ಬುಧವಾರ ಆಕ್ಷೇಪ ಎತ್ತಿರುವ ಬಿಎಸ್ಪಿಯ ಮುಖ್ಯಸ್ಥೆ ಮಾಯಾವತಿ, ಕೆಲವು ನಿರ್ದಿಷ್ಟ ಸಮುದಾಯ ಅಥವಾ ವರ್ಗ ಮಾತ್ರವೇ ಕ್ರಿಮಿನಲ್‌ಗಳೇ ಎಂದು ಪ್ರಶ್ನಿಸಿದ್ದಾರೆ.
ಕ್ರಿಮಿನಲ್‌ಗಳ ನಿಯಂತ್ರಣದ ಹೆಸರಲ್ಲಿ ಕಳೆದ 6 ತಿಂಗಳಿಂದ ನಡೆಯುತ್ತಿರುವ ಪೊಲೀಸ್ ಎನ್‌ಕೌಂಟರ್ ನಿರ್ದಿಷ್ಟ ವರ್ಗ ಅಥವಾ ಸಮುದಾಯಗಳು ಮಾತ್ರ ಅಪರಾಧದಲ್ಲಿ ತೊಡಗಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟಿಸಿದೆ ಎಂದರು.
ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರಕಾರ ಅಸ್ತಿತ್ವಕ್ಕೆ ಬಂದ ಒಂದು ದಿನ ಬಳಿಕ ಅಂದರೆ ಮಾರ್ಚ್ 20ರಿಂದ 17 ಮಂದಿ ಕ್ರಿಮಿನಲ್‌ಗಳನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ನಡೆಸಿದ್ದಾರೆ.
ಎನ್‌ಕೌಂಟರ್‌ನಲ್ಲಿ ಹತ್ಯೆಯಾದವರು ಸುನೀಲ್ ಶರ್ಮಾ, ಜೈಹಿಂದ್ ಯಾದವ್, ಸುಜಿತ್ ಸಿಂಗ್, ರಾಮ್‌ಜಿ ಪಾಸಿ, ಶಾರ್ದಾ ಕೋಲ್, ಅತಿಕ್, ಗುರ್ಮಿತ್, ಶಮ್ಶದ್, ನಿತಿನ್, ನದೀಮ್, ನೌಷದ್, ಸರ್ವರ್, ಇಕ್ರಾಂ, ರಾಜು, ಜಾನ್ ಮುಹಮ್ಮದ್, ಆದೇಶ್ ಯಾದವ್ ಹಾಗೂ ಬಾವಿಂದರ್. ಈ 17 ಮಂದಿ ಅಪರಾಧಿಗಳಲ್ಲಿ 8 ಮಂದಿ ಮುಸ್ಲಿಮರು, ಇಬ್ಬರು ಯಾದವರು, ಇಬ್ಬರು ದಲಿತರು.





