ಮ್ಯಾನ್ಮಾರ್ ಗೆ ಜಾಗತಿಕ ದಿಗ್ಬಂಧನ ಹೇರಲು ಸಲಫಿ ಮೂವ್'ಮೆಂಟ್ ಆಗ್ರಹ
ಮಂಗಳೂರು,ಸೆ.20: ಶಾಂತಿಗಾಗಿ ನೋಬೆಲ್ ಪ್ರಶಸ್ತಿ ಪಡೆದ ಆಂಗ್ ಸಾನ್ ಸೂಕಿ ನೇತೃತ್ವದ ಮ್ಯಾನ್ಮಾರ್ ಸರಕಾರದ ಭದ್ರತಾ ಪಡೆ ರೋಹಿಂಗ್ಯ ಮುಸ್ಲಿಮರ ಮೇಲೆ ನಡೆಸುತ್ತಿರುವ ಹಿಂಸೆಯನ್ನು ತಡೆಯಲು ಮತ್ತು ಆ ದೇಶಕ್ಕೆ ಜಾಗತಿಕ ದಿಗ್ಬಂಧನ ಹೇರಲು ವಿಶ್ವಸಂಸ್ಥೆ ಮತ್ತು ಪ್ರಮುಖ ರಾಷ್ಟ್ರಗಳು ಮುಂದಾಗಬೇಕೆಂದು ಸೌತ್ ಕರ್ನಾಟಕ ಸಲಫಿ ಮೂವ್'ಮೆಂಟ್ ನ ಕೇಂದ್ರೀಯ ಮಂಡಳಿ ಉಪಾಧ್ಯಕ್ಷ ಜನಾಬ್:ಇಸ್ಮಾಯಿಲ್ ಶಾಫಿ ಆಗ್ರಹಿಸಿದ್ದಾರೆ.
ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಮಾನವಹಕ್ಕುಗಳ ಸಂಘಟನೆಗಳ ಮನವಿಯನ್ನು ಕಡೆಗಣಿಸಿ, 350 ವರ್ಷಗಳಷ್ಟು ಕಾಲ ಮ್ಯಾನ್ಮಾರ್ ದೇಶವನ್ನಾಳಿದ ಮುಸ್ಲಿಮರನ್ನು ವಲಸೆ ಬಂದವರು, ಬಂಡುಕೋರರೆಂದು ಚಿತ್ರೀಕರಿಸಿ ಅವರ ಜನಾಂಗೀಯ ನಿರ್ಮೂಲನೆಯಲ್ಲಿ ನಿರತವಾಗಿರುವ ಮ್ಯಾನ್ಮಾರ್ ಸರಕಾರಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಜಗತ್ತಿನ ಪ್ರಮುಖ ದೇಶಗಳು ದಿಗ್ಬಂಧನ ವಿಧಿಸಬೇಕು ಮತ್ತು ಆಂಗ್ ಸಾನ್ ಸೂಕಿಯ ನೋಬೆಲ್ ಪ್ರಶಸ್ತಿಯನ್ನು ಹಿಂಪಡೆದು ಆಕೆಯ ವಿರುಧ್ಧ ಜಾಗತಿಕ ಕೋರ್ಟ್ ನಲ್ಲಿ ಮೊಕದ್ದಮೆ ದಾಖಲಿಸಬೇಕು, ಈ ನಿಟ್ಟಿನಲ್ಲಿ ಭಾರತ ಮಾನವೀಯ ಹೆಜ್ಜೆಗಳನ್ನಿಡಬೇಕೆಂದು ಇಸ್ಮಾಯಿಲ್ ಶಾಫಿ ಒತ್ತಾಯಿಸಿದ್ದಾರೆ.





