ಪುಳ್ಕೂರು: ಗೃಹಿಣಿಯ ಮೃತದೇಹ ಬಾವಿಯಲ್ಲಿ ಪತ್ತೆ
.gif)
ಕಾಸರಗೋಡು, ಸೆ.21: ಗೃಹಿಣಿಯೋರ್ವರ ಮೃತದೇಹ ಆವರಣವಿಲ್ಲದ ಬಾವಿಯಲ್ಲಿ ಪತ್ತೆಯಾದ ಘಟನೆ ಗುರುವಾರ ಬೆಳಗ್ಗೆ ಮಧೂರು ಪುಳ್ಕೂರಿನಲ್ಲಿ ನಡೆದಿದೆ.
ಮೃತಪಟ್ಟರನ್ನು ಪುಳ್ಕೂರು ಭಗವತಿ ಕ್ಷೇತ್ರ ಸಮೀಪದ ಉದಯ ಎಂಬವರ ಪತ್ನಿ ಶಶಿಕಲಾ(34) ಎಂದು ಗುರುತಿಸಲಾಗಿದೆ.
ಮನೆ ಸಮೀಪದ ತರಕಾರಿ ತೋಟಕ್ಕೆ ತೆರಳಿದ್ದ ಶಶಿಕಲಾ ಬಳಿಕ ನಾಪತ್ತೆಯಾಗಿದ್ದು, ಮನೆಯವರು ಶೋಧ ನಡೆಸಿದಾಗ ಆವರಣವಿಲ್ಲದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಕಾಸರಗೋಡಿನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹ ಮೇಲಕ್ಕೆತ್ತಿದರು.
ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು.
Next Story





