ಮಂಗಳೂರು ವಿವಿ ಕಾಲೇಜಿನಲ್ಲಿ ‘ಮಾಧ್ಯಮ ವೇದಿಕೆ’ ಉದ್ಘಾಟನೆ

ಮಂಗಳೂರು, ಸೆ.21: ಪತ್ರಿಕೋದ್ಯಮ ಎಂಬುದು ಸತ್ಯದ ಸಂಶೋಧನೆಯಾಗಿರಬೇಕು. ಇಲ್ಲಿ ಅಪ್ರಿಯವಾದ ಸತ್ಯಕ್ಕೆ ಎಡೆಮಾಡಿಕೊಡಬಾರದು ಎಂದು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಡಾ. ಸದಾನಂದ ಹೊಳ್ಳ ಹೇಳಿದರು.
ಮಂಗಳೂರು ವಿವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ‘ಮಾಧ್ಯಮ ವೇದಿಕೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಳೂರು ವಿವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ವಹೀದಾ ಸುಲ್ತಾನಾ ಮಾತನಾಡಿ ಹಲವು ಅಪರಾಧ ದೃಷ್ಠಾಂತಗಳನ್ನು ನೀಡುತ್ತಾ ಪತ್ರಿಕೋದ್ಯಮವು ಪತ್ತೆದಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಉದಯಕುಮಾರ್ ಮಾತನಾಡಿ ಪತ್ರಿಕೋದ್ಯಮವು ಅನಗತ್ಯ ವಿಷಯಕ್ಕೆ ಒತ್ತು ನೀಡದೆ ಸಮಾಜದಲ್ಲಿ ಉತ್ತಮ ಬದಲಾವಣೆ ತರಬೇಕು ಎಂದರು.
ವಿಭಾಗದ ಪ್ರಭಾರ ಮುಖ್ಯಸ್ಥ ಡಾ.ಗಣಪತಿ ಗೌಡ, ಉಪನ್ಯಾಸಕರಾದ ದೀಪ್ತಿ, ಮಹಂತೇಶ್ ರೇಮಠ ಹಾಗೂ ಮಾಧ್ಯಮ ವೇದಿಕೆಯ ಕಾರ್ಯದರ್ಶಿ ಭರತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
Next Story





