ಕೂಟವಾಣಿ ಮಾಸಪತ್ರಿಕೆಯ ದಶಮಾನೋತ್ಸವ
ಮಂಗಳೂರು, ಸೆ.21: ಕೂಟ ಮಹಾಜಗತ್ತು (ರಿ) ಅಂಗ ಸಂಸ್ಥೆ ಮಂಗಳೂರು ಇದರ ವತಿಯಿಂದ ಹೊರಡುವ ‘ಕೂಟವಾಣಿ’ ಮಾಸಪತ್ರಿಕೆಯ ದಶಮಾನೋತ್ಸವದ ಸಮಾರೋಪ ಸಮಾರಂಭವು ಇತ್ತೀಚೆಗೆ ನಗರದ ಪಾಂಡೇಶ್ವರದ ಗುರು ನರಸಿಂಹ ಸಭಾಭವನದಲ್ಲಿ ಜರಗಿತು.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಪತ್ರಿಕೆಯ ಗೌರವ ಸಂಪಾದಕ ಪಿ. ಶೇಷಗೀರಿ ರಾವ್ ಹಾಗೂ ಪ್ರಧಾನ ಸಂಪಾದಕ ನಿತ್ಯಾನಂದ ಕಾರಂತ ಪೊಳಲಿ, ದ.ಕ. ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ. ಸತ್ಯನಾರಾಯಣ, ಪುತ್ತಿಗೆ ರಘುರಾಮ ಭಾಗವಂತರು, ಎ. ಪರಮೇಶ್ವರ ನಾವಡ, ಐ. ರಘುರಾಮ ರಾವ್, ಕೃಷ್ಣಮಯ್ಯ, ಶಿವರಾಮಯ್ಯ, ಶಿವರಾಮ ರಾವ್ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಪಿ. ಶೇಷಗಿರಿ ರಾವ್ ಸ್ವಾಗತಿಸಿದರು. ಕೂಟವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ನಿತ್ಯಾನಂದ ಕಾರಂತ ಪೊಳಲಿ ವಂದಿಸಿದರು.
Next Story





