ಪಿಲಿಕುಳ: ಅಭಿವೃದ್ಧಿ ಕಾಮಗಾರಿಗೆ 690 ಲಕ್ಷ ರೂ. ಮಂಜೂರು
ಮಂಗಳೂರು, ಸೆ.21: ಪಿಲಿಕುಳ ನಿಸರ್ಗಧಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ರಾಜ್ಯ ಸರಕಾರ 690 ಲಕ್ಷ ರೂ. ವನ್ನು ಮಂಜೂರು ಮಾಡಿದೆ ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದ್ದಾರೆ.
ಆ ಪೈಕಿ ವಾಮಂಜೂರು ಜಂಕ್ಷನ್‌ನಿಂದ ಪಿಲಿಕುಳ ನಿಸರ್ಗಧಾಮದ ಮುಖ್ಯದ್ವಾರದವರೆಗೆ 1.5 ಕಿ.ಮೀ. ಚತುಷ್ಪಥ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲು 490 ಲಕ್ಷ ರೂ.ಮಂಜೂರು ಮಾಡಿದೆ. ಅಲ್ಲದೆ ಪಿಲಿಕುಳ ನಿಸರ್ಗಧಾಮದ ಒಳಗಡೆ ವಿವಿಧ ರಸ್ತೆಗಳ ಡಾಮರೀಕರಣಕ್ಕೆ 200 ಲಕ್ಷ ರೂ.ವನ್ನು ಒದಗಿಸಿದೆ ಎಂದು ಪ್ರಕಟನೆ ತಿಳಿಸಿದೆ.
Next Story





