ಬ್ಯಾರೀಸ್ ಸ್ಪೋರ್ಟ್ಸ್ ಪ್ರೊಮೋಟರ್ಸ್ ಸ್ಥಾಪನೆ

ಮಂಗಳೂರು,ಸೆ.21: ಬ್ಯಾರೀಸ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ (ಬಿಸಿಸಿಐ) ಇದರ ಸಹಬಾಗಿತ್ವದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡಲು ನಗರದ ಓಷಿಯನ್ ಪರ್ಲ್ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಬ್ಯಾರೀಸ್ ಸ್ಪೋರ್ಟ್ಸ್ ಪ್ರೊಮೋಟರ್ಸ್ ಸ್ಥಾಪನೆ ಮಾಡಲಾಯಿತು.
2017 – 2018 ನೇ ಸಾಲಿಗೆ ಗೌರವ ಅಧ್ಯಕ್ಷರಾಗಿ ನಿಯಾಝ್ ಎ.ಕೆ., ಅಧ್ಯಕ್ಷರಾಗಿ ನೂರ್, ಉಪಾಧ್ಯಕ್ಷರಾಗಿ ರೈಝ ಪಿ.ಸಿ., ಕಾರ್ಯದರ್ಶಿಯಾಗಿ ಶಹನವಾಝ್, ಜೊತೆ ಕಾರ್ಯದರ್ಶಿಯಾಗಿ ಖಾಲಿಬ್, ಕೋಶಾಧಿಕಾರಿಯಾಗಿ ರಿಯಾಝ್, ಸದಸ್ಯರುಗಳಾಗಿ ರಹ್ಮಾತ್ ಬಿ.ಎ.,ಶಮೀರ್, ಫಝಲಿ, ಸಮರ್ ರವರನ್ನು ಆಯ್ಕೆ ಮಾಡಲಾಯಿತು.
2017 ನೇ ಇಸವಿಯ ನವೆಂಬರ್ ತಿಂಗಳ 5ನೇ ತಾರೀಕಿನಂದು ಯು. ಎಸ್. ಮಲ್ಯ ಕ್ರೀಡಾಂಗನದಲ್ಲಿ ಜಿಲ್ಲಾ ಮಟ್ಟದ ಬ್ಯಾಡ್ ಮಿಂಟನ್ ಪಂದ್ಯ ಆಯೋಜಿಸಲು ತೀರ್ಮಾನಿಸಲಾಯಿತು.
Next Story





