ಮಜೂರು: ಎಸ್ಸೆಸ್ಸೆಫ್ ಧ್ವಜ ದಿನ ಸಂದೇಶ ಕಾರ್ಯಕ್ರಮ

ಕಾಪು, ಸೆ.21: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್(ಎಸ್ಸೆಸ್ಸೆಫ್) ಇದರ ಸ್ಥಾಪನ ದಿನ ಪ್ರಯುಕ್ತ ಎಸ್ಸೆಸ್ಸೆಫ್ ಮಜೂರು ಶಾಖೆ ವತಿಯಿಂದ ಧ್ವಜ ದಿನ ಸಂದೇಶ ಕಾರ್ಯಕ್ರಮವು ಇತ್ತೀಚೆಗೆ ಮಜೂರು ಸರ್ಕಲ್ ಬಳಿ ಜರಗಿತು.
ಮಜೂರು ಬದ್ರಿಯ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮೋನು ಕರಂದಾಡಿ ಧ್ವಜಾರೋಹಣ ನೆರವೇರಿಸಿದರು. ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಮುಹಮ್ಮದ್ ರಕೀಬ್ ಕನ್ನಂಗಾರ್ ಉದ್ಘಾಟಿಸಿದರು. ಎಸ್ಸೆಸ್ಸೆಫ್ ಉಡುಪಿ ಜಿಲ್ಲಾಧ್ಯಕ್ಷ ಪಿ.ಎಂ.ಎ.ಮುಹಮ್ಮದ್ ಅಶ್ರಫ್ ರಝಾ ಅಂಜದಿ ಧ್ವಜ ದಿನ ಸಂದೇಶ ನೀಡಿದರು.
ಮಜೂರು ಗ್ರಾಪಂ ಅಧ್ಯಕ್ಷ ಸಂದೀಪ್ ರಾವ್, ಕಾಪು ಧರಣಿ ಸಮಾಜ ಸೇವಾ ಸಂಘ ಅಧ್ಯಕ್ಷ ಲೀಲಾಧರ ಶೆಟ್ಟಿ, ಮಜೂರು ಗ್ರಾಪಂ ಸದಸ್ಯ ಭಾಸ್ಕರ ಕುಮಾರ್ ಮಾತನಾಡಿದರು. ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ಮಜೂರು ಶಾಖಾಧ್ಯಕ್ಷ ಹುಸೈನ್ ಮೊಯ್ಯೆಟ್ಟು ವಹಿಸಿದ್ದರು.
ಎಸ್ಸೆಸ್ಸೆಫ್ ಕಾಪು ಡಿವಿಷನ್ ಅಧ್ಯಕ್ಷ ಮುಹಿಯ್ಯುದ್ದೀನ್ ಸಖಾಫಿ ಪಯ್ಯೆರು, ಎಸ್‌ವೈಎಸ್ ಕಾಪು ಸೆಂಟರ್ ಪ್ರಧಾನ ಕಾರ್ಯದರ್ಶಿ ಅಹ್ಮದ್ ಶಬೀರ್ ಸಖಾಫಿ, ಅಬ್ದುಲ್ ಮಜೀದ್ ಹನೀಫಿ, ಎ.ಎಚ್.ಅಬ್ದುಲ್ ಹಮೀದ್ ಮಜೂರು, ಅಬ್ದುಲ್ಲ, ಶಾಹುಲ್ ಹಮೀದ್ ನಈಮಿ, ಅಬ್ದುಲ್ ಹಮೀದ್ ಕರಂದಾಡಿ, ಮುಹಮ್ಮದ್ ಕರಂದಾಡಿ, ಅಬ್ದುರ್ರಝಾಕ್ ಕೊಪ್ಪಲತೋಟ, ಜಮಾಲುದ್ದೀನ್ ಚಂದ್ರನಗರ, ಮೂಸ ಮಜೂರು, ಆಶಿಕ್ ಅಹ್ಮದ್, ನೌಶಾದ್ ಮಜೂರು, ಉನೈಸ್ ಕರಂದಾಡಿ, ಅಬ್ದುಲ್ ಖಾದರ್, ರಾಹಿಝ್ ಮಜೂರು ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಎಸ್ಸೆಸ್ಸೆಫ್ ಮಾಧ್ಯಮ ವಿಭಾಗದ ಅಧ್ಯಕ್ಷ ಎಂ.ಕೆ.ಇಬ್ರಾಹಿಂ ಸ್ವಾಗತಿಸಿ, ಶಾಖಾ ಸದಸ್ಯ ಶಾಹಿಲ್ ಎಂ.ಎಚ್.ಮಜೂರು ಕಾರ್ಯಕ್ರಮ ನಿರೂಪಿಸಿದರು.







