ಲಿಬಿಯ: ದೋಣಿ ಮುಳುಗಿ 100 ವಲಸಿಗರ ಸಾವು
ಟ್ರಿಪೋಲಿ, ಸೆ. 21: ವಲಸಿಗರನ್ನು ಯುರೋಪ್ಗೆ ಒಯ್ಯುತ್ತಿದ್ದ ದೋಣಿಯೊಂದು ಪಶ್ಚಿಮ ಲಿಬಿಯ ಸಮುದ್ರದಲ್ಲಿ ಮುಳುಗಿ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಲಿಬಿಯ ನೌಕಾಪಡೆ ಗುರುವಾರ ತಿಳಿಸಿದೆ.
ನೌಕಾ ಪಡೆ ಸಿಬ್ಬಂದಿ ಬುಧವಾರ ಕನಿಷ್ಠ ಏಳು ಮಂದಿಯನ್ನು ರಕ್ಷಿಸಿದೆ. ಅವರು ಮೂರು ದಿನಗಳಿಂದ ಸಮುದ್ರದಲ್ಲಿ ತೇಲುತ್ತಿದ್ದರು ಎಂದು ಅದು ಹೇಳಿದೆ.
ಲಿಬಿಯದಿಂದ ವಲಸಿಗರು ಮೆಡಿಟರೇನಿಯನ್ ಸಮುದ್ರವನ್ನು ಅಪಾಯಕರ ರೀತಿಯಲ್ಲಿ ದಾಟಿ ಯುರೋಪ್ಗೆ ಹೋಗುತ್ತಿದ್ದಾರೆ.
Next Story