ಅಶೋಕ್ ಲೇಲ್ಯಾಂಡ್‌ನ ‘ದೋಸ್ತ್ ಪ್ಲಸ್’ ಮಾರುಕಟ್ಟೆಗೆ

ಮಂಗಳೂರು, ಸೆ. 21: ವಾಹನ ತಯಾರಿಕೆಯಲ್ಲಿ ಪ್ರಸಿದ್ಧಿ ಪಡೆದಿರುವ ಅಶೋಕ್ ಲೇಲ್ಯಾಂಡ್‌ನ ಅಧಿಕೃತ ವಿತರಕ ಮತ್ತು ಸೇವಾ ಸೆಂಟರ್ ನಗರದ ಕಣ್ಣೂರಿನಲ್ಲಿರುವ ಕಾಂಚನಾ ಆಟೊಮೋಟಿವ್‌ನಲ್ಲಿ ಶುಕ್ರವಾರ ನಡೆದ ಸರಳ ಕಾರ್ಯಕ್ರಮದಲ್ಲಿ ‘ದೋಸ್ತ್ ಪ್ಲಸ್’ವಾಹನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.
ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಸಾದ್‌ರಾಜ್ ಕಾಂಚನ್ ನೂತನ ವಾಹನವನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅತ್ಯುತ್ತಮ ಮೈಲೇಜ್ ಮತ್ತು ಅಧಿಕ ಭಾರವನ್ನು ಹೊರುವ ಸಾಮರ್ಥ್ಯವನ್ನು ಹೊಂದಿದೆ. ಈಗಾಗಲೇ ‘ದೋಸ್ತ್’ ವಾಹನವು ಮಾರುಕಟ್ಟೆಯಲ್ಲಿ ಉತ್ತಮ ಹೆಸರನ್ನು ಪಡೆದುಕೊಂಡಿದೆ. ಇದೀಗ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ‘ದೋಸ್ತ್ ಪ್ಲಸ್’ಮಾರುಕಟ್ಟೆಗೆ ಪರಿಚಯಿಸಲಾಗಿದೆ ಎಂದರು.
ಕಾಂಚನಾ ಆಟೊಮೋಟಿವ್ ಇದರ ಪ್ರಧಾನ ವ್ಯವಸ್ಥಾಪಕ ವಿವಾನ್ ಸೋನ್ಸ್, ಸೇಲ್ಸ್ ಮ್ಯಾನೇಜರ್ ಕನಕ ಕುಮಾರ್, ಸರ್ವಿಸ್ ಮ್ಯಾನೇಜರ್ ವಿಜೇತ್ ಕುಮಾರ್ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಪ್ರಥಮ ಗ್ರಾಹಕರಾದ ಮೋಹನ್, ಮುತ್ತಪ್ಪ, ಅಸ್ಲಂ, ಅಶೋಕ್ ಜಿ., ರಾಮನಾಥ್ ಮತ್ತು ಶ್ರೀನಿವಾಸ ದೇವಾಡಿಗ ಅವರಿಗೆ ‘ದೋಸ್ತ್ ಪ್ಲಸ್’ ವಾಹನದ ಕೀಯನ್ನು ಹಸ್ತಾಂತರಿಸಲಾಯಿತು.





