ಲೊರೆಟ್ಟೊ ಪದವು: ಚರಂಡಿಯ ಮೆಲ್ಭಾಗ ಮುಚ್ಚುವಂತೆ ಎಸ್‌ಡಿಪಿಐ ಒತ್ತಾಯ
ಬಂಟ್ವಾಳ, ಸೆ. 22: ಬಂಟ್ವಾಳ ಪುರಸಭಾ ವ್ಯಾಪ್ತಿಯ 1ನೇ ವಾರ್ಡ್‌ನ ಲೊರೆಟ್ಟೊ ಪದವು ಟಿಪ್ಪುನಗರದಲ್ಲಿ ನಿರ್ಮಿಸಿರುವ ಚರಂಡಿಯ ಮೆಲ್ಭಾಗವನ್ನು ಮುಚ್ಚುವಂತೆ ಒತ್ತಾಯಿಸಿ ಸೋಶಿಯಲ್ ಡೆಮಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಟಿಪ್ಪುನಗರದ ಘಟಕದ ವತಿಯಿಂದ ಪುರಸಭಾ ಮುಖ್ಯಾಧಿಕಾರಿ ಅವರಿಗೆ 2ನೇ ಬಾರಿ ಮನವಿ ಸಲ್ಲಿಸಲಾಯಿತು.
ಈ ಚರಂಡಿ ರಸ್ತೆ ಬದಿ ಇರುವುದರಿಂದ ಎಲ್ಲ ಮನೆಯ ಕೊಳಕು ನೀರು ಚರಂಡಿಯಲ್ಲಿ ಹರಿದುಹೋಗದೇ ರಸ್ತೆಯಲ್ಲಿ ಹರಿಯುತ್ತಿದೆ. ಇದರಿಂದ ಕೊಳೆತ ದುರ್ವಾಸನೆ ಬೀರುತ್ತಿದೆ. ಅಲ್ಲದೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಆದ್ದರಿಂದ ಇದನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡ ಬೇಕು ಎಂದು ಮನವಿಯಲ್ಲಿ ತಿಳಿಸಿಲಾಗಿದೆ.
ಮುಂದಿನ 15 ದಿನಗಳೊಳಗೆ ಕ್ರಮ ಜರಗಿಸದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಇದೇ ವೇಳೆ ಎಸ್‌ಡಿಪಿಐ ಪುರಸಭಾ ಅಧ್ಯಕ್ಷ ಯೂಸುಫ್ ಆಲಡ್ಕ, ಆತಿಕ್, ಲೊರೆಟ್ಟೊ ಪದವು 1ನೇ ವಾರ್ಡ್‌ನ ಅಧ್ಯಕ್ಷ ಅಲ್ಮಾನ್ ಫಾರಿಶ್, ಕಾರ್ಯದರ್ಶಿ ಶಫೀಕ್, ಉಪಾಧ್ಯಕ್ಷ ರಫೀರ್, ಆಶಿಕ್ ಪದವು, ಟಿ.ಎಂ. ರಿಯಾಝ್ ಇದ್ದರು.





