ಹಿರಿಯ ನಾಗರಿಕರಿಗೆ ಸಾಧನ ಸಲಕರಣೆಗೆ ತಪಾಸಣಾ ಶಿಬಿರ
ಉಡುಪಿ, ಸೆ.21: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಉಡುಪಿ, ಆರೋಗ್ಯ ಮತ್ತು ಕುಟುಂಬ ಇಲಾಖೆ ಹಾಗೂ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಹಿರಿಯ ನಾಗರಿಕರಿಗೆ ಅಗತ್ಯವಿರುವ ಸಾಧನ ಸಲಕರಣೆಗಳ (ಎಜೆಸ್ಟೇಬಲ್ ವಾಕಿಂಗ್ ಸ್ಟಿಕ್/ಟ್ರೈಪ್ಯಾಡ್, ಶ್ರವಣಸಾಧನ, ಕನ್ನಡಕ, ವಾಕರ್, ಕಮೋಡ್) ಗುರುತಿಸುವಿಕೆಯ ತಪಾಸಣಾ ಶಿಬಿರಗಳನ್ನು ಸೆ.25ರಂದು ತಾಲೂಕು ಆಸ್ಪತ್ರೆ ಕಾರ್ಕಳ, ಸೆ.26ರಂದು ಅಂಬೇಡ್ಕರ್ ಭವನ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಬಳಿ, ಭಂಡಾರ್‌ಕಾರ್ಸ್ ಕಾಲೇಜು ರಸ್ತೆ ಕುಂದಾಪುರ ಮತ್ತು ಸೆ.27ರಂದು ಸರಕಾರಿ ಜಿಲ್ಲಾ ಆಸ್ಪತ್ರೆಯ ಸಭಾಭವನ, ಅಜ್ಜರಕಾಡು ಉಡುಪಿ ಇಲ್ಲಿ ಬೆಳಿಗ್ಗೆ 10ರಿಂದ ಅಪರಾಹ್ನ 1:00 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.
ಬಡತನ ರೇಖೆಗಿಂತ ಕೆಳಗಿರುವ (ಪ್ರಮಾಣಪತ್ರ ಹೊಂದಿರುವ) ಜಿಲ್ಲೆಯಲ್ಲಿ 10 ವರ್ಷಗಳಿಂದ ವಾಸವಾಗಿರುವ ಹಿರಿಯ ನಾಗರಿಕರು ಶಿಬಿರಕ್ಕೆ ಬರುವಾಗ ಹಿರಿಯ ನಾಗರಿಕರ ಗುರುತು ಚೀಟಿ ಅಥವಾ ವಯಸ್ಸು ದೃಢೀಕರಿಸುವ ದಾಖಲೆ, ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಜೆರಾಕ್ಸ್, ಪೋಟೋ-1 ಮತ್ತು ಜಿಲ್ಲೆಯಲ್ಲಿ ಕನಿಷ್ಠ 10 ವರ್ಷಗಳಿಂದ ಜೀವಿಸುತ್ತಿರುವ ಬಗ್ಗೆ ಸಂಬಂಧಿಸಿದ ಪ್ರಾಧಿಕಾರದಿಂದ ದೃಢೀಕರಣ ಪ್ರಮಾಣ ಪತ್ರ ತರಬೇಕು.
ಈ ಶಿಬಿರದಲ್ಲಿ ಜಿಲ್ಲೆಯ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0820-2574810, 9164276061ನ್ನು ಸಂಪಕಿಸುವಂತೆ ಪ್ರಕಟಣೆ ತಿಳಿಸಿದೆ.







