ಕೊಲ್ಲೂರು: ಹೊರ ರಾಜ್ಯದ 15 ಭಿಕ್ಷುಕರು ವಶಕ್ಕೆ
ಕೊಲ್ಲೂರು, ಸೆ.22: ಕಳೆದ ಹಲವು ವರ್ಷಗಳಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಎದುರು ಭಿಕ್ಷೆ ಬೇಡುತ್ತಿದ್ದ ಹೊರ ರಾಜ್ಯದ 15 ಮಂದಿ ಭಿಕ್ಷುಕರನ್ನು ಕೊಲ್ಲೂರು ಪೊಲೀಸರು ಇಂದು ವಶಕ್ಕೆ ತೆಗೆದುಕೊಂಡ ತಮ್ಮ ಊರಿಗೆ ಹಾಗೂ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಕೊಲ್ಲೂರು ದೇವಸ್ಥಾನದಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಎಂ.ಪಾಟೀಲ್ ನಿರ್ದೇಶನದಲ್ಲಿ ಕೊಲ್ಲೂರು ಪೊಲೀಸ್ ಠಾಣಾ ಉಪನಿರೀಕ್ಷಕ ಶೇಖರ್ ನೇತೃತ್ವದ ತಂಡ ಇಂದು ಬೆಳಗಿನ ಜಾವ 6ಗಂಟೆ ಸುಮಾರಿಗೆ ಈ ಕಾರ್ಯಾಚರಣೆ ನಡೆಸಿದೆ.
ತಮಿಳುನಾಡು ಹಾಗೂ ಕೇರಳ ಮೂಲದ 15 ಮಂದಿ ಭಿಕ್ಷುಕರನ್ನು ಕೊಲ್ಲೂರು ದೇವಳದಿಂದ ಠಾಣೆಗೆ ಕರೆದುಕೊಂಡು ಬಂದ ಪೊಲೀಸರು ಅವರಲ್ಲಿ 10 ಮಂದಿಯನ್ನು ಅವರವರ ಊರಿಗೆ ಕಳುಹಿಸಿಕೊಟ್ಟಿದ್ದು, ಉಳಿದ ಐದು ಮಂದಿಯನ್ನು ಮಂಗಳೂರಿನ ಪುನವರ್ಸತಿ ಕೇಂದ್ರಕ್ಕೆ ಸೇರಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಪಾಟೀಲ್ ತಿಳಿಸಿದ್ದಾರೆ.
Next Story





