Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಯಶಸ್ಸಿಗೆ ಅವರದೇ ಆದ ‘ಫಾರ್ಮುಲಾ’...

ಯಶಸ್ಸಿಗೆ ಅವರದೇ ಆದ ‘ಫಾರ್ಮುಲಾ’ ಇರಬೇಕು: ರಾಜಮೌಳಿ

'ವಿದ್ಯಾರ್ಥಿಗಳ ಮನಗೆದ್ದ ಬಾಹುಬಲಿಯ ರಾಜಮೌಳಿ'

ವಾರ್ತಾಭಾರತಿವಾರ್ತಾಭಾರತಿ22 Sept 2017 10:11 PM IST
share
ಯಶಸ್ಸಿಗೆ ಅವರದೇ ಆದ ‘ಫಾರ್ಮುಲಾ’ ಇರಬೇಕು: ರಾಜಮೌಳಿ

ಮಣಿಪಾಲ, ಸೆ. 22: ನಾನು ಮಾಡಿದ ಚಲನಚಿತ್ರಗಳ ಅಭೂತಪೂರ್ವ ಯಶಸ್ಸಿಗೆ ನಿಜವಾದ ಕಾರಣ ನನಗಿನ್ನೂ ಗೊತ್ತಾಗಿಲ್ಲ. ಪ್ರಾಯಶಃ ನನ್ನ ಕಠಿಣ ಶ್ರಮ ಇರಬಹುದು, ನನ್ನ ಪ್ರಾಮಾಣಿಕತೆ ಇರಬಹುದು. ಆದರೆ ಪ್ರತಿಯೊಬ್ಬನೂ ತನ್ನ ಕೆಲಸದಲ್ಲಿ ಯಶಸ್ಸು ಕಾಣಲು ಆತನದೇ ಆದ ‘ಫಾರ್ಮುಲಾ’ ಇರಬೇಕು. ಅದನ್ನು ‘ಅರ್ಜುನ ರೆಡ್ಡಿ’ ಫಾರ್ಮುಲಾ ಎಂದು ಬೇಕಿದ್ದರೆ ಕರೆಯಿರಿ ಎಂದು ತೆಲುಗು ಚಿತ್ರರಂಗದ ಖ್ಯಾತನಾಮ ನಿರ್ದೇಶಕ, ನಿರ್ಮಾಪಕ, ಚಿತ್ರಕಥಾ ಲೇಖಕ ಎಸ್.ಎಸ್.ರಾಜಮೌಳಿ ಹೇಳಿದ್ದಾರೆ.

ಮಣಿಪಾಲದ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ವಜ್ರಮಹೋತ್ಸವದ ಅಂಗವಾಗಿ ಏರ್ಪಡಿಸಲಾಗಿರುವ ವಜ್ರಮಹೋತ್ಸವ ಉಪನ್ಯಾಸ ಸರಣಿಯಲ್ಲಿ ಇಂದು ಸಂಜೆ ವಿಶೇಷ ಉಪನ್ಯಾಸ ನೀಡಿ ‘ಈಗ’, ‘ಮಗಧೀರ’, ‘ಬಾಹುಬಲಿ’, ‘ಬಾಹುಬಲಿ 2’ ಚಿತ್ರಗಳ ನಿರ್ದೇಶಕ ರಾಜಮೌಳಿ ಮಾತನಾಡುತಿದ್ದರು.

‘ಸ್ಟುಡೆಂಟ್ ನಂ.1’ ಚಿತ್ರದ ನಂತರ ನಾನು ನನ್ನ ಯಶಸ್ಸಿನ ಫಾರ್ಮುಲಾವನ್ನು ಕಂಡುಕೊಂಡೆ. ಪ್ರತಿಯೊಬ್ಬರ ಯಶಸ್ಸಿಗೆ ಅವರದೇ ಆದ ಫಾರ್ಮುಲಾ ಇರುತ್ತದೆ ಎಂದು ನಾನು ತಿಳಿದಿದ್ದೇನೆ. ನೀವು ನಿಮ್ಮ ಯಶಸ್ಸಿನ ಫಾರ್ಮುಲಾವನ್ನು ಕಂಡುಕೊಳ್ಳಿ ಎಂದು ತನ್ನ ಪ್ರತಿಯೊಂದು ಮಾತಿಗೂ, ನಡೆಗೂ ಮುಗಿಲು ಮುಟ್ಟುವಂತೆ ಹರ್ಷೋದ್ಗಾರ ಮಾಡುತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಹೇಳಿದರು.

ಹೀಗಾಗಿ ನಾನು ನನ್ನ ವೈಯಕ್ತಿಕ ಬದುಕಿನಂತೆ, ವೃತ್ತಿಪರ ಬದುಕಿನಲ್ಲೂ ಭಾರೀ ಯಶಸ್ಸನ್ನು ಕಂಡುಕೊಂಡಿದ್ದೇನೆ. ನನ್ನ ಪತ್ನಿಗೆ ನಾನು ಜಗತ್ತಿನ ಅತ್ಯುತ್ತಮ ಪತಿ ಎಂದು ಮನವರಿಕೆ ಮಾಡಿದ್ದೇನೆ. ಅದೇ ರೀತಿ ವೃತ್ತಿ ಬದುಕಿನಲ್ಲಿ ನನ್ನ ಚಿತ್ರಗಳು ‘ದಿ ಬೆಸ್ಟ್’ ಎಂದು ಪ್ರೇಕ್ಷಕರನ್ನು ನಂಬಿಸಿದ್ದೇನೆ ಎಂದು ರಾಜಮೌಳಿ, ಯಶಸ್ಸಿಗೆ ಪ್ರಮುಖ ಕಾರಣ ಕಠಿಣ ಶ್ರಮ ಹಾಗೂ ಪ್ರಾಮಾಣಿಕತೆ ಎಂದರು.

ನಿಮ್ಮ ಯಶಸ್ಸಿನ ಫಾರ್ಮುಲಾದಲ್ಲಿ ‘ಪ್ರಾಮಾಣಿಕತೆ’ಗೆ ಉನ್ನತ ಸ್ಥಾನ ಇರಬೇಕು. ಇದಕ್ಕಾಗಿ ನೀವು ಸತ್ಯ ಹರಿಶ್ಚಂದ್ರರಾಗಿರಬೇಕಿಲ್ಲ. ಸಣ್ಣ, ಸಣ್ಣ ಸುಳ್ಳುಗಳನ್ನು -ಅಧ್ಯಾಪಕರು, ಹೆತ್ತವರೊಂದಿಗೆ- ಹೇಳಿ ಪರವಾಗಿಲ್ಲ. ಆದರೆ ನಿಮಗೆ ನೀವು ಸುಳ್ಳು ಹೇಳಿಕೊಳ್ಳಬೇಡಿ. ಅಲ್ಲಿ ಪ್ರಾಮಾಣಿಕತೆ ಇರಲಿ. ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇರಬೇಕು ಹಾಗೂ ಅಲ್ಲಿ ಪ್ರಾಮಾಣಿಕತೆ ಇರಬೇಕು ಎಂದು ರಾಜಮೌಳಿ ಹೇಳಿದರು.

ಬಳಿಕ ಎಂಐಟಿಯ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸರಾಗವಾಗಿ ಉತ್ತರಿಸಿದ ಅವರು, ತನ್ನ ಚಿತ್ರ ನಿರ್ಮಾಣ, ಕಥೆಯ ಆಯ್ಕೆ, ಜಾಹೀರಾತು ನಿರ್ಮಾಣದಿಂದ ಆರಂಭಿಸಿ, ಟಿವಿ ಧಾರಾವಾಹಿಗಳ ನಿರ್ದೇಶನದ ಮೂಲಕ ತಾನು ಚಿತ್ರರಂಗಕ್ಕೆ ಕಾಲಿರಿಸಿದ ನೆನಪುಗಳನ್ನು ತಿಳಿಹಾಸ್ಯದೊಂದಿಗೆ, ಚುರುಕಿನ ಮಾತುಗಳ ಮೂಲಕ ಹಂಚಿಕೊಂಡ ರಾಜಮೌಳಿ, ಜೀವನದಲ್ಲಿ ನಾನು ತೋರಿದ ಪ್ರಾಮಾಣಿಕತೆ ನನ್ನನ್ನು ಚಿತ್ರ ನಿರ್ದೇಶಕನಾಗಿ ಮುನ್ನಡೆಸಿತು ಎಂದರು.

ಪ್ರತಿಯೊಂದು ಚಿತ್ರ ನಿರ್ದೇಶನ ಆರಂಭಿಸುವಾಗ ನನ್ನ ಮನಸ್ಸು ಯಶಸ್ಸು ಮತ್ತು ವೈಫಲ್ಯಗಳ ನಡುವೆ ತೂಗೂಯ್ಯಲೆಯಾಡುತ್ತಾ ಇರುತ್ತದೆ. ನನ್ನ ಚಿತ್ರ ಯಶಸ್ವಿಯಾಗೇ ಆಗುತ್ತದೆ ಎಂದು ನಂಬಿಕೊಂಡವನು ಒಂದೊ ಜೀನಿಯಸ್ ಆಗಿರಬೇಕು ಅಥವಾ ಶತಮೂರ್ಖ ಆಗಿರಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮೊದಲ ಚಿತ್ರ ‘ಸ್ಟುಡೆಂಟ್ ನಂ.1 ಮೊದಲ ಶಾಟ್ ವೇಳೆ ನನ್ನ ಸ್ಥಿತಿ ಚಿಂತಾಜನಕವಾಗಿತ್ತು. ಆಗ ಸೆಟ್‌ಗೆ ಬಂದ ನಿರ್ಮಾಪಕನ ಎದುರು ಇದನ್ನು ತೋರಿಸಿಕೊಳ್ಳದೇ ನಾನು ಭಾರೀ ಕೆಲಸ ಮಾಡುವವನಂತೆ ನಟಿಸಿ ಬಚಾವಾದೆ ಎಂದು ನಗುತ್ತಾ ಹೇಳಿದರು.

ಪ್ರೇಕ್ಷಕರೇ ದೇವರು: ಚಿತ್ರವೊಂದರ ಯಶಸ್ಸಿಗೆ ಯಾರು ಕಾರಣರು ಎಂದು ಕೇಳಿದಾಗ, ಅದಕ್ಕೆ ನಟನಾಗಲೀ, ನಿರ್ದೇಶಕನಾಗಲಿ, ವಿತರಕನಾಗಲಿ, ಸಿನಿಮಾ ಟೋಗ್ರಾಫರ್ ಆಗಲಿ ಅಲ್ಲ. ದುಡ್ಡುಕೊಟ್ಟು ಸಿನಿಮಾ ನೋಡುವ ಪ್ರೇಕ್ಷಕರಿಂದ ಮಾತ್ರ ಚಿತ್ರವೊಂದು ಯಶಸ್ವಿಯಾಗಲು ಸಾಧ್ಯ. ಪ್ರೇಕ್ಷಕರು ನೋಡಿದರೆ ಮಾತ್ರ ಸಿನಿಮಾ ಒಂದು ಯಶಸ್ವಿಯಾಗುತ್ತದೆ. ಅದಕ್ಕಾಗಿ ಅದು ಕಮರ್ಷಿಯಲ್ ಚಿತ್ರವೇ ಇರಲಿ, ಕಲಾತ್ಮಕ ಚಿತ್ರವೇ ಇರಲಿ ಅದು ಪ್ರೇಕ್ಷಕರ ಮನಮುಟ್ಟುವಂತಿರಬೇಕು. ಅದರಲ್ಲಿ ಆತ ಒಳಗೊಳ್ಳುವಂತಿರಬೇಕು ಎಂದು ಹೇಳಿದರು.

ಕಥೆಗೆ ಸೂಕ್ತ ಪಾತ್ರದ ಆಯ್ಕೆ: ನಿರ್ದೇಶಕ ಮೊದಲು ಕಥೆಯನ್ನು ಬರೆದು, ತಿದ್ದಿತೀಡಿ ಚಿತ್ರಕಥೆಯನ್ನು ಸಿದ್ಧಪಡಿಸಿದ ಬಳಿಕ ಅದಕ್ಕೆ ಸೂಕ್ತ ನಟರನ್ನು ಆಯ್ಕೆ ಮಾಡಬೇಕು. ನನಗೆ ಈಗ ಕಥೆಗೆ ತಕ್ಕ ನಟರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ದೊರಕಿದೆ. ಹೀಗಾಗಿ ನಾನು ನನಗೊಪ್ಪುವಂತೆ ಕಥೆ ಸಿದ್ಧವಾದ ಬಳಿಕ ತಾರಕ (ಜೂನಿಯರ್ ಎನ್‌ಟಿಆರ್) ಆ ಪಾತ್ರಕ್ಕೆ ಸೂಕ್ತ ಎನಿಸಿದರೆ ಆತನನ್ನೇ ಹಾಕಿಕೊಂಡು ಚಿತ್ರ ಮಾಡುತ್ತೇನೆ ಎಂದು ಈ ಕುರಿತು ವಿದ್ಯಾರ್ಥಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಪೌರಾಣಿಕತೆ ನನ್ನ ರಕ್ತದಲ್ಲಿದೆ: ಪೌರಾಣಿಕ ಕತೆಗಳ ಬಗ್ಗೆ ತಮಗೆ ವಿಶೇಷ ಮೋಹ ಏಕೆ ಎಂದು ಪ್ರಶ್ನಿಸಿದಾಗ, ಪೌರಾಣಿಕ ಕತೆಗಳನ್ನು ನಾನು ಅಜ್ಜಿ ಕೇಳುತ್ತಾ, ಪುಸ್ತಕಗಳನ್ನು ಓದುತ್ತಾ ಬೆಳೆದವನು. ಪ್ಯಾಂಟಸಿ ಕತೆಗಳು ಸಹ ನನಗೆ ಚಿಕ್ಕಂದಿನಿಂದಲೂ ಸ್ಪೂರ್ತಿ ನೀಡುತಿದ್ದವು. ಆದುದರಿಂದ ಪೌರಾಣಿಕತೆ ನನ್ನ ರಕ್ತದಲ್ಲಿದೆ. ಅದೀಗ ಚಿತ್ರದ ಮೂಲಕ ಹೊರಬರುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಎಂಐಟಿಯ ನಿರ್ದೇಶಕ ಡಾ.ಜಿ.ಕೆ.ಪ್ರಭು, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಎಂ.ಪಾಟೀಲ್ ಹಾಗೂ ಇತರು ಉಪಸ್ಥಿತರಿದ್ದರು.

ಕರ್ಣ ನೆಚ್ಚಿನ ಪಾತ್ರ
ಪೌರಾಣಿಕ ಕತೆಗಳನ್ನು ನಾನು ಚಿಕ್ಕಂದಿನಿಂದಲೂ ಹೆಚ್ಚು ಓದುತ್ತಿದ್ದೆ. ಕರ್ಣ ಈಗಲೂ ನನ್ನ ನೆಚ್ಚಿನ ಪಾತ್ರವಾಗಿದೆ. ಈಗಲೂ ಮಹಾಭಾರತದ ಯಾವುದೇ ಪುಸ್ತಕವನ್ನು ಓದುವಾಗ ದಾನಶೂರ ಕರ್ಣನ ಪಾತ್ರ ನನ್ನ ಕಣ್ಣಲ್ಲಿ ನೀರು ತರಿಸುತ್ತದೆ ಎಂದು ರಾಜಮೌಳಿ ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X