ಗೂಡ್ಸ್ ವ್ಯಾನ್ ಪಲ್ಟಿ: ಇಬ್ಬರು ಗಂಭೀರ
ಚಿಕ್ಕಮಗಳೂರು, ಸೆ.22: ವೇಗವಾಗಿ ಚಲಿಸುತ್ತಿದ್ದ ಗೂಡ್ಸ್ ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾದ ಪರಿಣಾಮ 2 ಮಂದಿಗೆ ಗಂಭೀರ ಗಾಯವಾಗಿದ್ದು, ಇತರೆ 23 ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಸಮೀಪದ ಶುಕ್ರವಾರ ನಡೆದಿದೆ.
ಗಾಯಾಳುಗಳು ಕಡೂರು ತಾಲೂಕಿನ ಬಿಸಲರೆ ಗ್ರಾಮದವರಾಗಿದ್ದಾರೆ. ಕಲ್ಲತ್ತಿ ಪಾಲ್ಲತ್ತಿಗಿರಿ ದೇವಾಲಯಕ್ಕೆ ಹೋಗುವಾಗ ಈ ಘಟನೆನಡೆದಿದೆ ಎನ್ನಲಾಗಿದೆ.
ಗಾಯಾಳನ್ನು ಲಿಂಗದಹಳ್ಳಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಶಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಈ ಕುರಿತು ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story





