ಹಾದಿಯಾಳಿಗೆ ಪತ್ರಗಳನ್ನು ತಲುಪಿಸಲು ಸಾಧ್ಯವಾಗುವುದಿಲ್ಲ: ವಿವಾದಕ್ಕೀಡಾದ ಅಂಚೆ ಇಲಾಖೆಯ ಹೇಳಿಕೆ

ಕಲ್ಲಿಕೋಟೆ,ಸೆ.23: ಪೊಲೀಸ್ ಸಂರಕ್ಷಣೆಯಲ್ಲಿರುವುದರಿಂದ ಹಾದಿಯಾಳಿಗೆ ನೇರವಾಗಿ ಪತ್ರವನ್ನು ಕೊಡಲು ಸಾಧ್ಯವಾಗುವುದಿಲ್ಲ ಎಂದು ಅಂಚೆ ಇಲಾಖೆ ನೀಡಿದ ಸ್ಪಷ್ಟೀಕರಣ ವಿವಾದಕ್ಕೀಡಾಗಿದೆ. ಕೇರಳ ಎಸ್‍ಐಒ ಅಧ್ಯಕ್ಷ ನುಹೈಬ್ ಸಿ.ಟಿ. ಹಾದಿಯಾಳಿಗೆ ಕಳುಹಿಸಿದ್ದ ರಿಜಿಸ್ಟರ್ಡ್ ಪತ್ರವನ್ನು ಹೆತ್ತವರನ್ನು ಪಡೆಯಲು ನಿರಾಕರಿಸಿದ್ದಾರೆ ಎಂದು ವಾಪಸ್ ಕಳುಹಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ ದೂರಿಗೆ ಅಂಚೆ ಇಲಾಖೆ ನೀಡಿದ ಸ್ಪಷ್ಟೀಕರಣ ವಿವಾದವಾಗಿದೆ.
ರಿಜಿಸ್ಟರ್ಡ್ ಪೋಸ್ಟ್‍ನಲ್ಲಿ ಕಳುಹಿಸಿದ ಪತ್ರಗಳನ್ನು ವ್ಯಕ್ತಿ ಸ್ಥಳದಲ್ಲಿರುವಾಗ ಅದನ್ನು ಬೇರೆಯಾರಿಗೂ ನಿರಾಕರಿಸುವ ಅಧಿಕಾರವಿಲ್ಲ. ಅಂಚೆ ಇಲಾಖೆಯ ಈ ನಿಯಮವನ್ನು ಇಲಾಖೆಯ ಕೆಲವು ಅಧಿಕಾರಿಗಳು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಆದರೆ ಸ್ಪಷ್ಟೀಕರಣವಾಗಿ ನೀಡಿದ ಉತ್ತರದಲ್ಲಿ ಹಾದಿಯಾ ಪೊಲೀಸ್ ಸಂರಕ್ಷಣೆಯಲ್ಲಿದ್ದಾರೆ. ಆದ್ದರಿಂದ ಪತ್ರವನ್ನು ತಂದೆಗೆ ಕೊಡಲಾಗಿದೆ. ನೇರವಾಗಿ ಕೊಡಲು ಸಾಧ್ಯವಿಲ್ಲ ಎನ್ನಲಾಗಿದೆ. ಅಂಚೆ ಅಧಿಕಾರಿಗೆ ಹಾದಿಯಾಳನ್ನು ಭೇಟಿಯಾಗಲು ಬಿಟ್ಟಿಲ್ಲ ಎಂದು ಸ್ಪಷ್ಟೀಕರಣ ಪತ್ರದಲ್ಲಿದೆ.
ಹಾದಿಯಾ ಎಲ್ಲ ಹಕ್ಕುಗಳನ್ನು ನಿಷೇಧಿಸಲಾದ ಅವಸ್ಥೆಯಲ್ಲಿದ್ದಾಳೆ. ತನಿಖೆಗಾಗಿ ಬಂದ ಅಂಚೆ ಅಧಿಕಾರಿಗಳಿಗೂ ಭೇಟಿಯಾಗಲು ಅವಕಾಶ ಕೊಡದ ಪೊಲೀಸರ ನುಹೈಬ್ ವಿರುದ್ಧ ಪ್ರತಿಭಟನೆ ನಡೆಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.







