ಮೊಹಾಲಿ:ಪತ್ರಕರ್ತ ಮತ್ತು ತಾಯಿಯ ಹತ್ಯೆ

ಮೊಹಾಲಿ(ಪಂಜಾಬ್),ಸೆ.23: ಪಂಜಾಬಿನ ಹಿರಿಯ ಪತ್ರಕರ್ತ ಕೆ.ಜೆ.ಸಿಂಗ್ ಮತ್ತು ಅವರ ತಾಯಿ ಗುರಚರಣ್ ಕೌರ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವುದು ಶನಿವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ. ಈ ಜೋಡಿ ಕೊಲೆಗಳು ಅವರ ನಿವಾಸದಲ್ಲಿಯೇ ನಡೆದಿವೆ.
ಸಿಂಗ್ ಅವರ ಕತ್ತನ್ನು ಸೀಳಲಾಗಿದ್ದರೆ, ಕೌರ್ ಅವರನ್ನು ಉಸಿರುಗಟ್ಟಿಸಿ ಕೊಲ್ಲಲಾಗಿದೆ, ಸಿಂಗ್ ಅವರ ಫೋರ್ಡ್ ಐಕಾನ್ ಕಾರು ನಾಪತ್ತೆಯಾಗಿದೆ ಎಂದು ಮೊಹಾಲಿಯ ಎಸ್‌ಎಸ್‌ಪಿ ಕುಲದೀಪ್ ಚಹಲ್ ತಿಳಿಸಿದರು.
ಸಿಂಗ್ ಅವರು ಚಂಡಿಗಡದಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್, ದಿ ಟ್ರಿಬ್ಯೂನ್ ಮತ್ತು ದಿ ಟೈಮ್ಸ್ ಆಫ್ ಇಂಡಿಯಾದ ಸುದ್ದಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು.
Next Story





