ಐಟಿ ಅಧಿಕಾರಿ ಪುತ್ರನ ಕೊಲೆ ಪ್ರಕರಣ: ಆರೋಪಿಗಳು ಪೊಲೀಸ್ ವಶಕ್ಕೆ

ಬೆಂಗಳೂರು, ಸೆ.23: ಆದಾಯ ತೆರಿಗೆ ಅಧಿಕಾರಿ ಪುತ್ರ ಶರತ್ ಅಪಹರಣ, ಕೊಲೆ ಪ್ರಕರಣ ಸಂಬಂಧ ಬಂಧಿತ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿ ಮೂರು ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.
ಶನಿವಾರ ನೃಪತುಂಗ ರಸ್ತೆಯಲ್ಲಿರುವ 7ನೆ ಎಸಿಎಂಎಂ ಕೋರ್ಟ್‌ಗೆ ಕೊಲೆಯಾದ ಶರತ್ ಅಕ್ಕನ ಸ್ನೇಹಿತ ವಿಶಾಲ್ ಸೇರಿದಂತೆ ಕರಣ್, ವಿನಯ್, ವಿನೋದ್‌ನನ್ನು ಪೊಲೀಸರು ಹಾಜರು ಪಡಿಸಿದರು.
ಈ ಪ್ರಕರಣದ ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಪೊಲೀಸರು ಮನವಿ ಮಾಡಿದ್ದರು. ಹೀಗಾಗಿ ನ್ಯಾಯಾಲಯ ನಾಲ್ವರು ಆರೋಪಿಗಳನ್ನು ಮೂರು ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸುವಂತೆ ಅನುಮತಿ ನೀಡಿದೆ.
ಹಣದ ಆಸೆಗಾಗಿ ಶರತ್‌ನನ್ನು ಸೆ.13 ರಂದು ಕಿಡ್ನಾಪ್ ಮಾಡಿ ನಂತರ ಪೊಲೀಸರ ಭಯದಿಂದ ಆರೋಪಿಗಳು ಕೊಲೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅನುಮಾನದ ಮೇಲೆ ವಿಶಾಲ್‌ನನ್ನು ವಿಚಾರಣೆಗೊಳಪಡಿಸಿದಾಗ ಇಡೀ ಪ್ರಕರಣ ಬೆಳಕಿಗೆ ಬಂದಿತ್ತು.
Next Story





