ಚಿಟ್‌ಫಂಡ್ ಹಗರಣದಲ್ಲಿ ಬಂಧಿತ ಬಿಜೆಡಿ ಶಾಸಕ ಆಸ್ಪತ್ರೆಗೆ ದಾಖಲು

ಭುವನೇಶ್ವರ,ಸೆ.23: ಚಿಟ್‌ಫಂಡ್ ಹಗರಣವೊಂದರಲ್ಲಿ ಸಿಬಿಐನಿಂದ ಬಂಧಿಸಲ್ಪಟ್ಟಿದ್ದ ಹಿರಿಯ ಬಿಜೆಡಿ ಶಾಸಕ ಪರ್ವತ ರಂಜನ್ ಬಿಸ್ವಾಲ್ ಅವರನ್ನು ಜೈಲು ಆಸ್ಪತ್ರೆಯ ವೈದ್ಯರ ಸಲಹೆಯ ಮೇರೆಗೆ ಶುಕ್ರವಾರ ರಾತ್ರಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾಸಕರು ಹಲವಾರು ಅನಾರೋಗ್ಯಗಳ ಬಗ್ಗೆ ದೂರಿಕೊಂಡಿದ್ದರು, ಅವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದ್ದು, ವರದಿಗಳಿಗಾಗಿ ಕಾಯಲಾಗುತ್ತಿದೆ ಎಂದು ಕ್ಯಾಪಿಟಲ್ ಆಸ್ಪತ್ರೆಯ ನಿರ್ದೇಶಕ ಡಾಸಿ.ಆರ್.ದಾಸ್ ತಿಳಿಸಿದರು.
ಬಹುಕೋಟಿ ರೂ.ಗಳ ಸೀಶೋರ್ ಗ್ರೂಪ್ ಚಿಟ್‌ಫಂಡ್ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಸೆ.18ರಂದು ಬಿಸ್ವಾಲ್‌ರನ್ನು ವಿಚಾರಣೆಗಾಗಿ ತನ್ನ ಕಚೇರಿಗೆ ಕರೆಸಿಕೊಂಡಿತ್ತು ಮತ್ತು ಬಳಿಕ ಅವರನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು.
Next Story





