ಹಾಡುಗಾರರಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ಬ್ಲ್ಯಾಕ್‌ಮೇಲ್: ದೂರು
ಪಡುಬಿದ್ರೆ, ಸೆ. 23: ಬ್ಯಾರಿ ಹಾಡುಗಾರರಿಬ್ಬರಿಗೆ ಸಾಮಾಜಿಕ ಜಾಲತಾಣವಾದ ವಾಟ್ಸ್‌ಅಪ್ ಮತ್ತು ಫೇಸ್‌ಬುಕ್‌ಗಳಲ್ಲಿ ಮಾನಹಾನಿಕರ ಅವಹೇಳನಕಾರಿ ಬರಹ ಹಾಕಿ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪಡುಬಿದ್ರೆ ಠಾಣೆಗೆ ಶೌಕತ್ ಪಡುಬಿದ್ರೆ ಮತ್ತು ಶಮೀರ್ ಮುಲ್ಕಿ ದೂರು ನೀಡಿದ್ದಾರೆ.
ನಾನು 16ವರ್ಷಗಳಿಂದ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ನೀಡಿ ಜೀವನ ಸಾಗಿಸುತಿದ್ದೇವೆ. ಇದೇ 20 ಮತ್ತು 21ರಂದು ಸಾಮಾಜಿಕ ಜಾಲತಾಣವಾದ ವಾಟ್ಸ್‌ಅಪ್ ಮತ್ತು ಫೇಸ್‌ಬುಕ್‌ಗಳಲ್ಲಿ ಶೌಕತ್ ಪಡುಬಿದ್ರೆ ಮತ್ತು ಶಮೀರ್ ಮುಲ್ಕಿ ಎಂಬ ಹೆಸರಿನಲ್ಲಿ ಪ್ರತ್ಯೇಕವಾಗಿ ಮಾನಹಾನಿಕರವಾದ ಬರಹಗಳನ್ನು ಹಾಕಿ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರಗಿಸಿ ನ್ಯಾಯ ಒದಗಿಸಿ ಕೊಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪಡುಬಿದ್ರೆ ಠಾಣೆಗೆ ದೂರು ನೀಡಿದ್ದಾರೆ.
Next Story





