Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. 14 ತಿಂಗಳ ಗುಲಾಮಗಿರಿಯಿಂದ ಬಿಡುಗಡೆ ಪಡೆದ...

14 ತಿಂಗಳ ಗುಲಾಮಗಿರಿಯಿಂದ ಬಿಡುಗಡೆ ಪಡೆದ ಜೆಸಿಂತಾ

ಉಡುಪಿ: ಮಾನವ ಕಳ್ಳ ಸಾಗಣಿಕಾ ಪ್ರಕರಣದ ಘೋರ ಕಥಾನಕ

ವಾರ್ತಾಭಾರತಿವಾರ್ತಾಭಾರತಿ23 Sept 2017 9:35 PM IST
share
14 ತಿಂಗಳ ಗುಲಾಮಗಿರಿಯಿಂದ ಬಿಡುಗಡೆ ಪಡೆದ ಜೆಸಿಂತಾ

ಉಡುಪಿ, ಸೆ. 23: ಮುಂಬೈಯ ಮಾನವ ಕಳ್ಳ ಸಾಗಾಣಿಕೆ ಜಾಲದ ಮೂಲಕ ಸೌದಿ ಅರೇಬಿಯಾಕ್ಕೆ ಸಾಗಿಸಲ್ಪಟ್ಟು ಯಾಂಬೂ ಪಟ್ಟಣದ ಅರಬ್ಬಿಯೊಬ್ಬರ ಮನೆಯಲ್ಲಿ ಗುಲಾಮಳಾಗಿ ದಿನದೂಡುತಿದ್ದ ಮುದರಂಗಡಿಯ ಜೆಸಿಂತಾ ಇದೀಗ ಅರೆಜೀವ ಸ್ಥಿತಿಯಲ್ಲಿ ಭಾರತಕ್ಕೆ ಮರಳಿ ಬಂದಿದ್ದಾರೆ.

ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಕಳೆದ ಏಪ್ರಿಲ್ ತಿಂಗಳಲ್ಲಿ ಜೆಸಿಂತಾಳ ರಕ್ಷಣೆಗಾಗಿ ಗಲ್ಘ್ ಕನ್ನಡಿಗರಿಗೆ ನೀಡಿದ ಕರೆಗೆ ಸ್ಪಂದಿಸಿದ  ಜಿದ್ದಾದ ಎನ್‌ಆರ್‌ಐ ಪೋರಂನ ಅಧ್ಯಕ್ಷ ರೋಶನ್ ರಾಡ್ರಿಗಸ್ ಮತ್ತವರ ಸಂಗಡಿಗರ ಸತತ ಪ್ರಯತ್ನದ ಫಲವಾಗಿ ಜೆಸಿಂತಾ 14 ತಿಂಗಳ ಬಳಿಕ ತನ್ನ ಮಕ್ಕಳನ್ನು ಸೇರಿಕೊಂಡಿದ್ದಾಳೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ್ ಶ್ಯಾನ್‌ಭಾಗ್ ಇಂದಿಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಕರಣದ ಹಿನ್ನೆಲೆ: ಮುದರಂಗಡಿಯ ಜೆಸಿಂತಾಳ ಗಂಡ ಕಳೆದ ವರ್ಷ ತೀರಿಕೊಂಡಾಗ ತನ್ನ ಮೂರು ಮಕ್ಕಳ ಪಾಲನೆ ಹಾಗೂ ವಿದ್ಯಾಬ್ಯಾಸಕ್ಕಾಗಿ ಆಕೆ ಉದ್ಯೋಗದ ಹುಡುಕಾಟದಲ್ಲಿದ್ದರು. ಕತರ್‌ನ ಭಾರತೀಯ ಕುಟುಂಬವೊಂದಕ್ಕೆ ಮಕ್ಕಳ ಪಾಲನೆಗಾಗಿ ಮಹಿಳೆಯೋರ್ವಳ ಅಗತ್ಯವಿದೆ ಎಂದು ಸ್ಥಳೀಯ ಪತ್ರಿಕೆಯೊಂದರಲ್ಲಿ ಪ್ರಕಟವಾದ ಜಾಹೀರಾತಿನಿಂದ ತಿಳಿದ ಜೆಸಿಂತಾ ಮುಂಬೈಯ ರಿಕ್ರೂಟ್‌ಮೆಂಟ್ ಎಜೆನ್ಸಿಯನ್ನು ಸಂಪರ್ಕಿಸಿದಳು. ತಿಂಗಳಿಗೆ 25,000 ರೂ. ಕೊಡಿಸುವುದಾಗಿ ಎಜೆನ್ಸಿಯ ಮಾಲಕ ಶಾಬಾಝ್ ಖಾನ್ ಎಂಬಾತ ಜೆಸಿಂತಾಗೆ ಆಮಿಷವೊಡ್ಡಿದ್ದ. ಯಾವುದೇ ಖರ್ಚುಗಳನ್ನು ತೆಗೆದುಕೊಳ್ಳದೇ ಪ್ರಯಾಣಕ್ಕೆ ಬೇಕಾಗಿರುವ ಪಾಸ್‌ಪೋರ್ಟ್ ಹಾಗೂ ವೀಸಾಗಳನ್ನು ಮಂಗಳೂರಿನಲ್ಲಿರುವ ತನ್ನ ಪ್ರತಿನಿಧಿಯ ಮೂಲಕ ಮಾಡಿಸುವ ಭರವಸೆಯನ್ನೂ ನೀಡಿದ್ದ. 

ಆತನ ಮಾತಿನ ಮೇಲಿನ ವಿಶ್ವಾಸದಿಂದ ಮುಂಬೈಗೆ ತೆರಳಿದ ಜೆಸಿಂತಾಳನ್ನು ಕೆಲವು ದಿನಗಳ ಕಾಲ ಮುಂಬೈಯ ಡೊಂಗ್ರಿ ಎಂಬಲ್ಲಿ ಮನೆಯೊಂದರಲ್ಲಿ ಇರಿಸಲಾಗಿತ್ತು. ಅಲ್ಲಿಂದ ಗೋವಾ ಹಾಗೂ ದಿಲ್ಲಿಯ ಮೂಲಕ ಇನ್ನಿಬ್ಬರು ಯುವತಿಯರೊಂದಿಗೆ ಜೂ.19ರಂದು ದುಬೈಗೆ ಸಾಗಿಸಲಾಯಿತು. ಅಲ್ಲಿಂದ ಯಾವ ದೇಶದ ವಿಮಾನವನ್ನೇರಿದೆ ಎಂದು ಆಕೆಗೆ ತಿಳಿಯಲೇ ಇಲ್ಲ. ಮರುದಿನ ಯಾವುದೋ ಒಂದು ನಿಲ್ದಾಣದಲ್ಲಿ ವಿಮಾನ ಇಳಿದಾಗ ತಾನು ಬಂದಿದ್ದು ಕತರ್ ದೇಶಕ್ಕಲ್ಲ, ಸೌದಿ ಅರೇಬಿಯಾಕ್ಕೆ ಎಂದು ತಿಳಿದ ಜೆಸಿಂತಾರಿಗೆ ಆಕಾಶವೇ ಕಳಚಿ ಬಿದ್ದಂತಾಯಿತು.

ವಿಮಾನ ನಿಲ್ದಾಣಕ್ಕೆ ಬಂದಿದ್ದ ಉದ್ಯೋಗದಾತನ ಡ್ರೈವರನೊಂದಿಗೆ ವಿಚಾರಿಸಿದಾಗ ಅವಳನ್ನು ಕರೆದುಕೊಂಡು ಹೋಗುತ್ತಿರುವ ಊರಿನ ಹೆಸರು ಯಾಂಬು ಎಂದು ತಿಳಿಯಿತಾದರೂ ಉದ್ಯೋಗದಾತನ ಹೆಸರೇನು, ಆತ ಯಾರು ಎಂದು ತಿಳಿಯಲೇ ಇಲ್ಲ.
ನರಕಯಾತನೆ:  ಅಲ್ಲಿ ಯಜಮಾನನ ತಾಯಿ, ಆತನ ಮೂವರು ಮಡದಿಯರು ಹಾಗೂ ಹತ್ತಾರು ಮಕ್ಕಳಿದ್ದ ಮೂರು ಬೃಹತ್ ಬಂಗ್ಲೆಗಳಲ್ಲಿ ಬೆಳಗ್ಗೆ ಆರು ಗಂಟೆಯಿಂದ ರಾತ್ರಿ ಎರಡು ಗಂಟೆ ತನಕ ಎಲ್ಲರ ಚೌಕರಿ ಮಾಡಬೇಕಾಗಿತ್ತು. ಅವರೆಲ್ಲರ ಊಟ ಮುಗಿದ ಮೇಲೆ ಆಹಾರ ಉಳಿದರೆ ಮಾತ್ರ ಜೆಸಿಂತಾಳಿಗೆ ಊಟ! ಇಲ್ಲದಿದ್ದಲ್ಲಿ ಉಪವಾಸದಿಂದ ಮಲಗಬೇಕಾಗುತಿತ್ತು. ದಿನಕ್ಕೆ 16 ಗಂಟೆಗೂ ಅಧಿಕ ಕಾಲದ ದುಡಿತದಿಂದಾಗಿ ಆಕೆಯ ಆರೋಗ್ಯ ಕೆಡುತ್ತಾ ಬಂತು. ದಿನವಿಡೀ ಹಸಿವೆಯಿಂದ ಬಳಲಿದರೆ, ರಾತ್ರಿ ಜ್ವರದಿಂದ ನರಳಿದ್ದರು. ತನ್ನ ಆರೋಗ್ಯ ಸರಿಯಿಲ್ಲ, ತನ್ನಿಂದ ಕೆಲಸ ಮಾಡಲು ಸಾಧ್ಯವಿಲ್ಲ, ದಯವಿಟ್ಟು ತನ್ನನ್ನು ಹಿಂದಕ್ಕೆ ಕಳುಹಿಸಿ ಎಂದು ಆಕೆ ಪರಿಪರಿಯಾಗಿ ಗೋಗರೆದರೂ ಕೇಳುವವರೇ ಇರಲಿಲ್ಲ.

‘ನಿನ್ನ ನೌಕರಿಗಾಗಿ ಮಾಡಿರುವ ಕಂಟ್ರಾಕ್ಟ್ ಮುಗಿಯುವ ತನಕ ಯಾವ ಕಾರಣಕ್ಕೂ ನಿನ್ನನು ಕಳುಹಿಸುವುದಿಲ್ಲ’ ಎಂದು ಯಜಮಾನ ಗುಡುಗುತ್ತಿದ್ದ. ಕಂಟ್ರಾಕ್ಟ್ ಮಾಡಿದ್ದು ಯಾರು, ಯಾವಾಗ, ಎಷ್ಟು ವರ್ಷಕ್ಕೆ, ಶರ್ತಗಳೇನು ಮುಂತಾದವು ಆಕೆಗೆ ತಿಳಿಯಲೇ ಇಲ್ಲ. ಮಾಡಿದ ಕೆಲಸ ಸರಿಯಾಗಲಿಲ್ಲ ಎಂಬ ಕಾರಣಕ್ಕೆ ಅನೇಕ ಬಾರಿ ಆಕೆಗೆ ದೈಹಿಕವಾಗಿ ಹಿಂಸಿಸಿದ್ದೂ ಇದೆ.

ಈ ನರಕದಲ್ಲಿರುವುದಕ್ಕಿಂತ ಶಿಕ್ಷೆಯಾದರೂ ಚಿಂತೆಯಿಲ್ಲ ಎಂದು ಕಳೆದ ನವೆಂಬರ್ 28ರ ರಾತ್ರಿ ಜಸಿಂತಾ ಮನೆಯಿಂದ ಓಡಿಹೋಗಿ ಭಾರತಕ್ಕೆ ಬರಲು ಪ್ರಯತ್ನಿಸಿದಳು. ಸ್ಥಳಿಯನೋರ್ವ ಆಕೆಗೆ ಭಾರತೀಯ ರಾಯಬಾರಿ ಕಚೇರಿಗೆ ಕೊಂಡೊಯ್ಯುವ ನೆಪದಲ್ಲಿ ಪೊಲೀಸ್ ಠಾಣೆ ಸೇರಿಸಿದ. ಆಕೆಯನ್ನು ವಿಚಾರಿಸಿದ ಪೊಲೀಸರು ಪುನಃ ಅದೇ ಉದ್ಯೋಗದಾತನ ಮನೆಗೆ ಸೇರಿಸಿದರು. ಆ ದಿನ ಮನೆಯ ಗಂಡಸರೆಲ್ಲ ಸೇರಿ ಆಕೆಗೆ ಹಿಗ್ಗಾಮುಗ್ಗಾ ಥಳಿಸಿದರು. ಪರಿಣಾಮ ಆಕೆ ಸ್ಮೃತಿಯನ್ನು ಕಳೆದುಕೊಂಡಿದ್ದರು.

ಪ್ರತಿಷ್ಠಾನದ ಪ್ರಯತ್ನ: ಕಳೆದ ಡಿಸೆಂಬರ್ ತಿಂಗಳ ಮೊದಲ ವಾರ ಅದೇ ಊರಿನಲ್ಲಿ ಕೆಲಸ ಮಾಡುವ ಭಾರತೀಯ ಕಾರು ಚಾಲಕನೋರ್ವನ ನೆರವಿನಿಂದ ಜೆಸಿಂತಾ ಕಾರ್ಕಳದಲ್ಲಿರುವ ತನ್ನ ಮಕ್ಕಳನ್ನು ಸಂಪರ್ಕಿಸಿ ತಾನು ಮೋಸ ಹೋಗಿರುವ ಕುರಿತು ಮಾಹಿತಿ ನೀಡಿ ಹೇಗಾದರೂ ಮಾಡಿ ತನ್ನನ್ನು ಬಿಡುಗಡೆಗೊಳಿಸುವಂತೆ ಕೋರಿದಳು.

2016ರ ಡಿ.30ರಂದು ಜೆಸಿಂತಾಳ ಮೂವರು ಮಕ್ಕಳೂ ಧರ್ಮಗುರುಗಳ ನೆರೆವಿನಿಂದ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನಕ್ಕೆ ದೂರು ನೀಡಿ ಸಹಾಯ ಮಾಡುವಂತೆ ಮನವಿ ಮಾಡಿದರು. ಆದರೆ ಅವರ ಬಳಿ ತಾಯಿ ಕೆಲಸ ಮಾಡುವ ಮನೆಯ ವಿಳಾಸ, ಪೋನ್ ನಂಬ್ರ ಯಾವುದೂ ಇರಲಿಲ್ಲ. ಆಕೆಯನ್ನು ಸೌದಿಗೆ ಕಳುಹಿಸಿದ ಎಜೆಂಟರ ವಿವರಗಳೂ ಇರಲಿಲ್ಲ.

ಕೊನೆಗೆ ಮನೆಯಲ್ಲಿ ಮುಂಬೈಯ ಶಾಬಾಝ್ ಖಾನ್ ನ ಪ್ರಕಟಣೆ, ವಿಳಾಸ ಹಾಗೂ ಮೂರು ಪೋನ್ ನಂಬರ್ ಸಿಕ್ಕಿ, ಜೆಸಿಂತಾಳ ಪಾಸ್‌ಪೋರ್ಟ್, ಆಕೆ ಪ್ರಯಾಣಿಸಿದ ದಿನಾಂಕ ಇತ್ಯಾದಿಗಳ ಮೂಲಕ ವೆಬ್‌ಸೈಟ್‌ ಪರಿಶೀಲನೆ ನಡೆಸಿದಾಗ ಆಕೆ 90 ದಿನಗಳ ‘ವಿಸಿಟಿಂಗ್ ವೀಸಾ’ದಲ್ಲಿ ಸೌದಿ ಪ್ರವೇಶಿಸಿ ರುವುದು ತಿಳಿಯಿತು. ಆಕೆಯ ವೀಸಾವನ್ನು ದಿಲ್ಲಿಯ ಒಂದು ಏಜೆನ್ಸಿಯಿಂದ ಪಡೆಯಲಾಗಿತ್ತು. ವಿದೇಶಾಂಗ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಈ ಎಜೆನ್ಸಿಯನ್ನು ಕಪ್ಪು ಪಟ್ಟಿಗೆ ಸೇರಿಸಿರುವುದು ತಿಳಿಯಿತು. ಆಗ ಇದೊಂದು ಮಾನವ ಕಳ್ಳಸಾಗಣಿಕೆ ಜಾಲವಿರಬಹುದೇ ಎಂಬ ಸಂಶಯ ಬರತೊಡಗಿತು.

ಇದೇ ವೇಳೆ ಜೆಸಿಂತಾರ ಉದ್ಯೋಗದಾತ (ಅಬ್ದುಲ್ಲ ಅಲ್ಮುತಾರಿ)ನ ವಿಳಾಸ ಹಾಗೂ ವಿವರ ದೊರೆತವು. ಅಬ್ದುಲ್ಲ ಅಲ್ಮುತಾರಿಯನ್ನು ನೇರವಾಗಿ ವಿಚಾರಿಸಿದಾಗ ಎರಡು ವರ್ಷಗಳ ಕಾಲ ತನ್ನ ಮನೆಯಲ್ಲಿ ಕೆಲಸ ಮಾಡಲು ಜೆಸಿಂತಾ ಒಪ್ಪಂದ ಮಾಡಿಕೊಂಡಿದ್ದು, ಇದಕ್ಕಾಗಿ ಭಾರತೀಯ ಎಜೆಂಟ್ ನನ್ನಿಂದ 24,000 ಸೌದಿ ರಿಯಾಲ್ (ಸುಮಾರು 5ಲಕ್ಷ ರೂ.) ಪಡೆದಿರುವುದಾಗಿ ತಿಳಿದುಬಂತು. ಅದನ್ನು ಹಿಂದಿರುಗಿಸಿದಲ್ಲಿ ಜೆಸಿಂತಾಳನ್ನು ಭಾರತಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದ.

ಇದರಿಂದ ಬೇಸತ್ತು ಕಳೆದ ಎ.6ರಂದು ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಅವರಿಗೆ ವಿವರವಾದ ಪತ್ರ ಬರೆದು ಟ್ವಿಟರ್ ಮೂಲಕವೂ ಅವರ ಗಮನ ಸೆಳೆಯಲಾಯಿತು. ಕೊನೆಗೂ ಕೆಲವು ಬೆಳವಣಿಗೆಗಳಾದವು. ಆದರೆ ಮುಂಬೈಯ ಪೊಲೀಸರು ನಾಲ್ಕು ತಿಂಗಳು ಕಳೆದರೂ ತನಿಖೆ ನಡೆಸಲಿಲ್ಲ.

ಗಲ್ಫ್ ಕನ್ನಡಿಗರಿಗೆ ಕರೆ: ಎಲ್ಲಾ ಸರಕಾರಿ ಇಲಾಖೆಗಳು ನಿಷ್ಪ್ರಯೋಜಕವೆನಿಸಿದ ಮೇಲೆ ಜೆಸಿಂತಾಳ ಉದ್ಯೋಗದಾತನೊಂದಿಗೆ ವ್ಯವಹರಿಸಲು ಸಹಾಯ ಮಾಡುವಂತೆ ಗಲ್ಫ್ ಕನ್ನಡಿಗರಿಗೆ ಕರೆ ನೀಡಲಾಯಿತು. ಅದಾಗಲೇ ಜೆಸಿಂತಾಳ ಆರೋಗ್ಯ ಸಂಪೂರ್ಣ ಹಾಳಾಗಿತ್ತು. ಕೊನೆಗೆ ನಮ್ಮ ಕರೆಗೆ ಒಗೊಟ್ಟ ಮಂಗಳೂರು ಮೂಲದ ಎನ್‌ಆರ್‌ಐ ಪೋರಂನ ಸ್ಥಾಪಕ ಬಿ.ಕೆ. ಶೆಟ್ಟಿ ಹಾಗೂ ಇಂದಿನ ಅಧ್ಯಕ್ಷ ರೋಶನ್ ರಾಡ್ರಿಗಸ್ ಪ್ರಕರಣದ ಸಂಪೂರ್ಣ ಮಾಹಿತಿ ಪಡೆದು ಹಂತ ಹಂತವಾಗಿ ಅಬ್ದುಲ್ ಅಲ್ಮುತಾರಿಯೊಂದಿಗೆ ವ್ಯವಹರಿಸಿ ಆತನಿಗೆ ನೀಡಬೇಕಾದ ಮೊತ್ತವನ್ನು ಕಡಿಮೆಗೊಳಿಸಿದರು.

ಕೊನೆಗೂ ಸೆ.16ರಂದು ಜೆಸಿಂತಾಳನ್ನು ಯಾಂಬುವಿನಿಂದ ಬಿಡುಗಡೆಗೊಳಿಸಿ ಜಿದ್ದಾ ತಲುಪಿಸಿದರು. ಅನಂತರ ಇನ್ನೊಂದು ಸಮಸ್ಯೆ ಎದುರಾಯಿತು. ಜೆಸಿಂತಾ ಅರಬ್ಬಿಯಿಂದ ಬಿಡುಗಡೆಗೊಂಡರೂ ಭಾರತಕ್ಕೆ ಬರುವಂತಿರಲಿಲ್ಲ. ಏಕೆಂದರೆ ಅವರಿಗೆ ಉದ್ಯೋಗದ ಅನುಮತಿ ಇರಲಿಲ್ಲ. ಜೆಸಿಂತಾಳನ್ನು ಮಾನವ ಕಳ್ಳ ಸಾಗಾಣಿಕಾ ಜಾಲದವರಿಂದ ನೇರವಾಗಿ ಅಬ್ದುಲ್ಲಾ ಖರೀದಿಸಿದ್ದರಿಂದ ವರ್ಕ್‌ ಪರ್ಮಿಟ್ ಮಾಡದೆಯೇ ಕೆಲಸಕ್ಕಿಟ್ಟುಕೊಂಡಿದ್ದರು ! ಈ ಪರಿಸ್ಥಿತಿಯಲ್ಲಿ ಯಾವುದೇ ಸಮಯದಲ್ಲಿ ಜೆಸಿಂತಾಳನ್ನು ಬಂಧಿಸಿ ಶಾಶ್ವತವಾಗಿ ಜೈಲಿಗೆ ತಳ್ಳುವ ಸಾಧ್ಯತೆ ಇತ್ತು.

ರೋಶನ್ ಹಾಗೂ ಅವರ ಸಂಗಡಿಗರು ಆರು ದಿನಗಳ ಕಾಲ ಕಾರ್ಮಿಕ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಕೊನೆಗೂ ವರ್ಕ್ ಪರ್ಮಿಟ್ ಪಡೆಯುವಲ್ಲಿ ಸಫಲರಾದರು. ಮಾನವ ಕಳ್ಳ ಸಾಗಾಣಿಕಾದಾರರ ಜಾಲಕ್ಕೆ ಸಿಕ್ಕಿ ನ್ಯಾಯಬಾಹಿರವಾಗಿ ಸೌದಿ ಅರೇಬಿಯಾಕ್ಕೆ ಸಾಗಿಸಲ್ಪಟ್ಟ ಜೆಸಿಂತಾ ಕೊನೆಗೆ ಹೃದಯವಂತರಿಂದ ರಕ್ಷಿಸಲ್ಪಟ್ಟು ನ್ಯಾಯ ಮಾರ್ಗದಲ್ಲೆ ಹೊರಬಂದು ಗೌರವ ಪೂರ್ವಕವಾಗಿ ಸೆ.22ರಂದು ಭಾರತ ಪ್ರವೇಶಿಸಿದ್ದಾರೆ ಎಂದು ಶ್ಯಾನ್‌ಭಾಗ್ ವಿವರಿಸಿದರು.

ಭಾವುಕರಾದ ಜಸಿಂತಾ
ದೂರದ ಊರಿನಲ್ಲಿ ನರಕಯಾತನೆಯಿಂದ ಕೊನೆಗೂ ಬಿಡುಗಡೆ ಪಡೆದು, 14 ತಿಂಗಳ ಬಳಿಕ ಕುಟುಂಬದವರನ್ನು, ಮಕ್ಕಳನ್ನು ಸೇರಿಕೊಂಡ ಜೆಸಿಂತಾ ಭಾವುಕರಾಗಿ ಮಾತನಾಡಿದರು. ‘ಇನ್ನು ಮುಂದೆ ಯಾವುದೇ ಕೆಲಸವಾದರೂ ಸರಿ ಇಲ್ಲಿಯೇ ಮಾಡಿಕೊಂಡು ಮಕ್ಕಳೊಂದಿಗೆ ಇರುತ್ತೇನೆ. ಹುಟ್ಟೂರಿಗೆ ಮರಳುವ, ಮಕ್ಕಳನ್ನು ಮತ್ತೆ ನೋಡುವ ಭರವಸೆಯನ್ನೇ ಕಳೆದುಕೊಂಡಿದ್ದ ನನಗೆ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶ್ಯಾನ್‌ಭಾಗ್ ತುಂಬಾ ಸಹಾಯ ಮಾಡಿದರು. ಅವರ ಸಹಾಯವನ್ನು ನಾನೆಂದೂ ಮರೆಯಲಾರೆ’ ಎಂದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X