ಮಹಿಳೆ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಅಪಹರಣ
ಮೈಸೂರು, ಸೆ.23: ಹಾಡುಹಗಲೇ ಮಹಿಳೆಯ ಗಮನ ಬೇರೆಡೆಗೆ ಸೆಳೆದು ಚಿನ್ನಾಭರಣವನ್ನು ಕಳ್ಳಿಯರು ಎಗರಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ನಗರದ ಹಾರ್ಡಿಂಗ್ ವೃತ್ತ ಬಳಿ ಮಹಿಳೆಯ ಗಮನ ಬೇರೆಡೆಗೆ ಸೆಳೆದು ಸುಮಾರು 130 ಗ್ರಾಂ ಚಿನ್ನಾಭರಣವವನ್ನು ಕಳ್ಳಿಯರು ಕಸಿದು ಪರಾರಿಯಾಗಿದ್ದಾರೆ. ಆಭರಣವನ್ನು ಕಳೆದುಕೊಂಡ ಮಹಿಳೆಯನ್ನು ನಂಜನಗೂಡು ತಾಲೂಕು ಕಣೇನೂರು ಗ್ರಾಮದ ನಿವಾಸಿ ಉಮಾ ಎಂದು ಹೇಳಲಾಗಿದೆ.
ವೈಯಕ್ತಿಕ ಕಾರ್ಯಕ್ರಮಕ್ಕೆ ಉಮಾ ಮೈಸೂರಿಗೆ ಬಂದಿದ್ದರು. ಇದೇ ಸಂದರ್ಭ ಕಳ್ಳತನ ನಡೆದಿದೆ. ಈ ಸಂಬಂಧ ಉಮಾ ದೇವರಾಜ ಪೋಲಿಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು, ದಸರಾ ಕಾರ್ಯಕ್ರಮಗಳು ನಡೆಯುತ್ತಿರುವ ಕಡೆ ಮಫ್ತಿಯಲ್ಲಿ ಹೆಚ್ಚಿನ ಪೊಲೀಸರುನ್ನು ನಿಯೋಜಿಸಿದ್ದಾರೆ.
Next Story





