Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಹುಟ್ಟೂರಿನ ಕಾಡುವಿಕೆಯೇ ಬರವಣಿಗೆಗೆ...

ಹುಟ್ಟೂರಿನ ಕಾಡುವಿಕೆಯೇ ಬರವಣಿಗೆಗೆ ಪ್ರೇರಣೆ: ಜಯಂತ್ ಕಾಯ್ಕಿಣಿ

​‘ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮ

ವಾರ್ತಾಭಾರತಿವಾರ್ತಾಭಾರತಿ23 Sept 2017 9:45 PM IST
share

ಬೆಂಗಳೂರು, ಸೆ.23: ಕಾಲೇಜಿನ ವಿದ್ಯಾಭ್ಯಾಸಕ್ಕಾಗಿ ಕುಮುಟಾದ ಹಾಸ್ಟೆಲ್‌ಗೆ ಸೇರಿದಾಗ ನನ್ನ ಹುಟ್ಟೂರು ಗೋಕರ್ಣ ತೀವ್ರವಾಗಿ ಕಾಡತೊಡಗಿತು. ನನಗೆ ಕಾಡಿದ ಆ ಭಾವನೆಗಳೇ ಬರವಣಿಗೆಗೆ ಪ್ರೇರೇಪಣೆ ನೀಡಿತು ಎಂದು ಕತೆಗಾರ ಜಯಂತ ಕಾಯ್ಕಿಣಿ ತಮ್ಮ ಬಾಲ್ಯದ ಅನುಭವಗಳನ್ನು ಹಂಚಿಕೊಂಡರು.

ಶನಿವಾರ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ಲೇಖಕಿಯರ ಸಂಘ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ‘ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ತಮ್ಮ ಬದುಕನ್ನು ರೂಪಿಸಿದ ಘಟನೆಗಳನ್ನು ಸಾಹಿತ್ಯಾಸಕ್ತರ ಮುಂದೆ ಬಿಚ್ಚಿಟ್ಟು ಮಾತನಾಡಿದ ಅವರು, ನನಗೆ ಹುಟ್ಟೂರು ಗೋಕರ್ಣವೆಂದರೇ ಅಪಾರವಾದ ಪ್ರೀತಿ. ಊರಲ್ಲಿದ್ದ ನೂರಾರು ದೇವಸ್ಥಾನಗಳು. ಪ್ರತಿದಿನ ಬರುವ ಯಾತ್ರಿಕರು, ಟೂರಿಸ್ಟ್ ಬಸ್‌ಗಳು, ಊರಿನ ಜನ ಎಲ್ಲವೂ, ಎಲ್ಲರೊಂದಿಗೆ ಸಂಬಂಧವನ್ನು ಏರ್ಪಡಿಸಿಕೊಂಡಿದ್ದೆ. ಇಂತಹ ಸಮಯದಲ್ಲಿ ವಿದ್ಯಾಭ್ಯಾಸಕ್ಕಾಗಿ ಗೋಕರ್ಣ ಬಿಟ್ಟು ಕುಮುಟಾದಲ್ಲಿ ಹಾಸ್ಟೆಲ್‌ನಲ್ಲಿ ಉಳಿಯಬೇಕಾಗಿತ್ತು. ಆ ಸಂದರ್ಭದಲ್ಲಿ ಕುಮುಟಾದಲ್ಲಿ ಕಾಣುತ್ತಿದ್ದ ನಮ್ಮೂರಿನ ಬಸ್‌ಗಳನ್ನು ನೋಡಿ ಊರನ್ನು ನೋಡಿದಷ್ಟೆ ಖುಷಿಯನ್ನು ಅನುಭವಿಸುತ್ತಿದ್ದೆ ಎಂದು ನೆನಪಿಸಿಕೊಂಡರು.

ಊರನ್ನು ಬಿಟ್ಟು ಹಾಸ್ಟೆಲ್‌ನಲ್ಲಿ ಸೆರೆಯಾಗಿದ್ದು, ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ನಾನು ಕಾಲೇಜಿನಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಜಿಗಿದಿದ್ದು ನನ್ನ ಭಾವನೆಗಳ ಮೇಲೆ ಸಾಕಷ್ಟು ಪರಿಣಾಮ ಬೀರಿತು. ಹೀಗಾಗಿ ಮನೆಯ ನೆನಪು, ಇಂಗ್ಲಿಷ್ ಕಾಟದಿಂದ ಸ್ವಲ್ಪಮಟ್ಟಿಗೆ ನಿರಾಳ ಪಡೆಯುವುದಕ್ಕಾಗಿ ‘ಸಂಕ್ರಮಣ’, ‘ಮಲ್ಲಿಗೆ’ ಪತ್ರಿಕೆಗಳಿಗೆ ಕವನ, ಕತೆಗಳನ್ನು ಬರೆಯುತ್ತಿದ್ದೆ. ಆ ಬರವಣಿಗೆ ನನ್ನನ್ನು ಇಲ್ಲಿಯವರೆಗೂ ತಂದು ನಿಲ್ಲಿಸಿದೆ ಎಂದ ಅವರು ತಮ್ಮ ಬರವಣಿಗೆಯ ಗುಟ್ಟನ್ನು ಬಿಚ್ಚಿಟ್ಟರು.

ಧಾರವಾಡದ ಸಾಹಿತ್ಯ ಕೂಟ: ಉನ್ನತ ಶಿಕ್ಷಣಕ್ಕಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಎಂಎಸ್ಸಿ ಬಯೋ ಕೆಮಿಸ್ಟ್ರಿ ಸೇರಿದೆ. ಅಲ್ಲಿನ ಸಾಹಿತ್ಯದ ವಿಶಾಲ ವಾತಾವರಣ, ಧಾರವಾಡದ ಸಂಸ್ಕೃತಿ ನನ್ನನ್ನು ಸೇರಿದಂತೆ ಎಂತಹವರಿಗೂ ಕೂಡ ಜೀವನಕ್ಕೆ ಆಗುವಷ್ಟು ಆತ್ಮವಿಶ್ವಾಸವನ್ನು ತಂದುಕೊಡಬಲ್ಲದು. ಅಲ್ಲಿದ್ದ ಹಿರಿಯ ಸಾಹಿತಿಗಳಾದ ಕೀರ್ತಿನಾಥ ಕುರ್ತಕೋಟಿ ಕಾವ್ಯವನ್ನು ಅರ್ಥ ಮಾಡಿಕೊಳ್ಳುವ ಬಗೆಯನ್ನು ಹೇಳಿಕೊಟ್ಟರು. ಕವಿತೆಯೆಂದರೆ ವಿಶಿಷ್ಟವಾದ ಅನುಭವ ಕೊಡುವಂತಹದ್ದು. ಅದರಲ್ಲಿ ಮತ್ತೇನನ್ನು ಹುಡುಕ ಹೋಗಬಾರದು ಎಂದು ನನ್ನೊಗಿದ್ದ ಕೆಲವೊಂದು ಗೊಂದಲಗಳನ್ನು ನಿವಾರಿಸಿದರು ಎಂದು ಅವರು ಸ್ಮರಿಸಿದರು.

ಮುಂಬೈನ ಮಾನವೀಯ ಮುಖ: ಕೆಲಸಕ್ಕಾಗಿ ಮುಂಬೈಗೆ ಹೋದ ನನಗೆ ಅಲ್ಲಿನ ವಿಸ್ಮಯ ಲೋಕಕ್ಕೆ ಮಾರುಹೋದೆ. ಜಾತಿ, ಮತ, ಪಂಥಗಳೆಂಬ ಯಾವುದೇ ಭೇದ ಭಾವವಿಲ್ಲದೆ ಎಲ್ಲರನ್ನು ಸಮಾನವಾಗಿ ಅಪ್ಪಿಕೊಳ್ಳುವ ಮುಂಬೈ ನನ್ನ ಬರವಣಿಗೆಗೆ ಮತ್ತಷ್ಟು ಕಸುವನ್ನು ತಂದಿಟ್ಟಿತು. ಅಲ್ಲಿನ ಸಿನೆಮಾಗಳು, ನಾಟಕಗಳು ನನ್ನೊಳಗಿನ ಚಿಂತನೆಗಳನ್ನು ಮತ್ತಷ್ಟು ಹೊಳಪನ್ನು ನೀಡಿತು ಎಂದು ಅವರು ಹೇಳಿದರು.

ನಾನು ಮುಂಬೈಯಲ್ಲಿರುವಾಗಲೇ ಉದಯವಾಣಿ ಕಥಾ ಸ್ಪರ್ಧೆಯಲ್ಲಿ ನನಗೆ ಪ್ರಥಮ ಬಹುಮಾನ ಸಿಕ್ಕಿತು. ಇದರಿಂದ ನನಗೆ ಅತೀವ ಆನಂದ ಆಯಿತು. ಈ ಸಂತೋಷವನ್ನು ಹಂಚಿಕೊಳ್ಳಲು ಹಿರಿಯ ಕತೆಗಾರ ಯಶವಂತ ಚಿತ್ತಾಲರ ಬಳಿಗೆ ಹೋದೆ. ನನ್ನ ಕತೆಯನ್ನು ಮೆಚ್ಚಿಕೊಳ್ಳುತ್ತಾ, ಈ ಪ್ರಶಸ್ತಿ ಬಂದಿರುವುದು ನಿನ್ನ ಕತೆಗೆ ಹೊರತು ನಿನಗಲ್ಲ ಎಂದರು. ಈ ಹೇಳಿಕೆ ನನ್ನ ರೂಢಿಗತ ಚಿಂತನೆಗಳನ್ನು ಬದಲಿಸಿಕೊಳ್ಳಲು ಸಾಧ್ಯವಾಯಿತು. ಹೀಗೆ ಬದುಕಿನ ಪ್ರಮುಖ ಘಟ್ಟಗಳಲ್ಲಿ ಹಿರಿಯ ಸಾಹಿತಿಗಳ ಸಲಹೆ, ಸೂಚನೆಗಳನ್ನು ಬದುಕನ್ನು ಸರಿಯಾದ ಧಿಕ್ಕಿನಲ್ಲಿ ರೂಪಿಸಿಕೊಳ್ಳಲು ಸಾಧ್ಯವಾಯಿತು ಎಂದು ಅವರು ಹೇಳಿದರು.

ಇವತ್ತು ನನಗೆ ಸಿನಿಮಾ ಸಾಹಿತ್ಯದಿಂದ ಸಾಕಷ್ಟು ಹೆಸರು ಬಂದಿದೆ. ಈ ಹೆಸರನ್ನು ಬಳಸಿಕೊಂಡೇ ಕಾಲೇಜು ವಿದ್ಯಾರ್ಥಿಗಳಿಗೆ ಜನಪರ ಚಿಂತನೆಗಳನ್ನು ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಸಾಮಾನ್ಯ ಜನತೆಯ ಬದುಕೇ ಸೃಜನಶೀಲ ಬರಣಿಗೆಯ ನಿಜವಾದ ಪ್ರೇರಕ ಶಕ್ತಿ. ಹೀಗಾಗಿ ಯುವ ಜನತೆ ಹಿರಿಯ ಸಾಹಿತಿಗಳ ಪುಸ್ತಕಗಳನ್ನು ಓದುತ್ತಾ, ಜನಸಾಮಾನ್ಯರ ಜೊತೆ ಬೆರೆತಾಗ ಸಾಹಿತ್ಯ ತಾನಾಗಿಯೇ ಹುಟ್ಟುತ್ತೆ ಎಂದು ಅವರು ತಮ್ಮ ಬರವಣಿಗೆಯ ಗುಟ್ಟನ್ನು ಬಿಚ್ಚಿಟ್ಟರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X