ಕೃಷ್ಣ ಸ್ವಾಮಿರವರು ಬಡವ, ಶೋಷಿತರ ಬಗ್ಗೆ ಅಪಾರ ಕಾಳಜಿ ಹೊಂದಿದವರು: ಸಂಸದ ಧ್ರುವನಾರಾಯಣ್

ಕೊಳ್ಳೇಗಾಲ, ಸೆ.23: ದಿ.ಕೃಷ್ಣಸ್ವಾಮಿರವರು ಹುಟ್ಟು ಹೋರಾಟಗಾರ ಜೊತೆಗೆ ಬಡವರ ಶೋಷಿತರ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದವರು ಅವರ ಸಮಾಜಸೇವೆ ಕಾರ್ಯವನ್ನು ಅವರ ಕುಟುಂಬ ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದು ಸಂಸದ ಆರ್.ಧ್ರುವನಾರಾಯಣ್ ಅವರು ತಿಳಿಸಿದ್ದಾರೆ.
ಪಟ್ಟಣದ ನ್ಯಾಷನಲ್ ಮೈದಾನದಲ್ಲಿ ಶನಿವಾರ ಎಚ್.ಕೆ.ಟ್ರಸ್ಟ್ ವತಿಯಿಂದ ಎಚ್.ಕೃಷ್ಣಸ್ವಾಮಿರವರ 13ನೆ ಸ್ಮರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಉಚಿತ ಬೃಹತ್ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃಷ್ಣಸ್ವಾಮಿರವರು ಬಸಲಿಂಗಪ್ಪರವರ ಅನುಯಾಯಿಯಾಗಿ ಈ ಭಾಗದಲ್ಲಿ ಸಾಕಷ್ಟು ಬಡವರು ಹಾಗೂ ದೀನದಲಿತರ ಸೇವೆ ಮಾಡಿಕೊಂಡು ಬಂದವರು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಸವಲಿಂಗಪ್ಪ ಹೆಸರಿನಲ್ಲಿ ವಿದ್ಯಾಸಂಸ್ಥೆಯನ್ನು ತೆರದು ಉತ್ತಮ ಸೇವೆ ಮಾಡಿದವರು ಎಂದರು.
ಅವರ ಸ್ಮರಣಾರ್ಥ ಅವರ ಕುಟುಂಬ ವರ್ಗ ಕೃಷ್ಣಸ್ವಾಮಿರವರ ಹೆಸರಿನಲ್ಲಿ ಮೆಡಿಕಲ್ ಕ್ಯಾಂಪ್ ಸೇರಿದಂತೆ ಪ್ರತಿವರ್ಷ ಬಹಳಷ್ಟು ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಜನರಿಗೆ ಬಹಳ ಅನುಕೂಲವಾಗಿದೆ ಎಂದು ಹೇಳಿದರು.
ಶಾಸಕ ಎಸ್.ಜಯಣ್ಣ ಮಾತನಾಡಿ, ದಿ.ಕೃಷ್ಣಸ್ವಾಮಿರವರ ನೆನಪಿನಲ್ಲಿ ವರ್ಷಕ್ಕೊಮ್ಮೆ ಉತ್ತಮ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಅವರ ನೆನಪಿನಲ್ಲಿ ಜನಸೇವೆ ಮಾಡುತ್ತಿರುವುದಕ್ಕೆ ಅಂಭಿನಂದಿಸಿದರು.
ಈ ಸಂಧರ್ಭದಲ್ಲಿ ಮಾಜಿಶಾಸಕ ಜಿ.ಎನ್.ನಂಜುಂಡಸ್ವಾಮಿ, ಎಚ್.ಕೆ.ಟ್ರಸ್ಟ್ ಪ್ರೇಮಲತಾ ಕೃಷ್ಣಸ್ವಾಮಿ, ನಗರಸಭೆಯ ಅಧ್ಯಕ್ಷ ಶಾಂತರಾಜು, ಉಪಾಧ್ಯಕ್ಷ ನಂಜುಂಡ, ತಾ.ಪಂ ಅಧ್ಯಕ್ಷ ರಾಜು, ಹಾಗೂ ಇನ್ನಿತರರು ಹಾಜರಿದ್ದರು.







