ಇಂಧನ ದರ ಏರಿಕೆ: ಪ್ರತಿಭಟನೆ
ಸಿದ್ದಾಪುರ, ಸೆ.23: ಇಂಧನ ದರ ಏರಿಕೆಯ ವಿರುದ್ಧ ಡಿವೈಎಫ್‌ಐ ಸಂಘಟನೆಯ ಕಾರ್ಯಕರ್ತರು ಸಿದ್ದಾಪುರದಲ್ಲಿ ಪ್ರತಿಭಟನೆ ನಡೆಸಿದರು.
ಸಿದ್ದಾಪುರ ಅಂಚೆ ಕಚೇರಿ ಮುಂದೆ ಜಮಾಯಿಸಿದ ಕಾರ್ಯಕರ್ತರು ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರ ಕೂಗಿ ಅಂಚೆ ಕಚೆೇರಿ ಮೂಲಕ ಪ್ರಧಾನ ಮಂತ್ರಿಗೆ ಮನವಿ ಪತ್ರ ರವಾನಿಸಿದರು.
ಇಂಧನ ದರ ಏರಿಕೆ ಸೇರಿದಂತೆ ಕೇಂದ್ರ ಸರಕಾರದ ಜನ ವಿರೋಧಿ ನೀತಿಯಿಂದ ಸಾಮಾನ್ಯ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದರೂ ಹೆಚ್ಚು ತೆರಿಗೆಯನ್ನು ಸಾಮಾನ್ಯ ವರ್ಗದ ಜನರ ಮೇಲೆ ಹೇರುವುದರ ಮೂಲಕ ಕೇಂದ್ರ ಸರಕಾರ ಜನ ವಿರೋಧಿ ಆಡಳಿತ ನಡೆಸುತ್ತಿದೆ ಎಂದು ಡಿವೈಎಫ್‌ಐ ಸಂಚಾಲಕ ಮಹೇಶ್ ಅರೋಪಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಅನಿಲ್ ಕುಟ್ಟಪ್ಪ, ರಮೇಶ್, ಮನ್ಸೂರ್‌ಮುಹಮ್ಮದ್, ಬೈಜು, ಶಾಫಿ, ರಫೀಕ್ ಸೇರಿದಂತೆ ಮತ್ತಿತರರಿದ್ದರು.
Next Story





