ಸಂಘದ ಸದಸ್ಯತ್ವ ಹೆಚ್ಚಿಸಲು ಸದಸ್ಯರು ಶ್ರಮಿಸಬೇಕು: ಶಾಸಕ ನರೇಂದ್ರ ರಾಜೂಗೌಡ

ಕೊಳ್ಳೇಗಾಲ, ಸೆ.23: ಸದಸ್ಯರು ಹೆಚ್ಚಾದಲ್ಲಿ ಸಂಘವು ಬೆಳವಣಿಗೆಯಾಗಲಿದೆ, ಸಂಘದ ಎಲ್ಲಾ ಸದಸ್ಯತ್ವನ್ನು ಹೆಚ್ಚಿಸಲು ಶ್ರಮಿಸಬೇಕು ಎಂದು ಒಕ್ಕಲಿಗರ ಸಂಘದ ಗೌರವಧ್ಯಕ್ಷ ಹಾಗೂ ಹನೂರು ಶಾಸಕ ನರೇಂದ್ರ ರಾಜೂಗೌಡ ಅವರು ತಿಳಿಸಿದ್ದಾರೆ.
ಪಟ್ಟಣದ ಜಿ.ವಿ.ಗೌಡ ಸಭಾಂಗಣದಲ್ಲಿ ಶನಿವಾರ ಕೊಳ್ಳೇಗಾಲ ಹಾಗೂ ಯಳಂದೂರು ತಾಲೂಕು ಒಕ್ಕಲಿಗರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ನಮ್ಮ ಸಂಘವು ಉತ್ತಮ ಆದಾಯದೊಂದಿಗೆ ಮುನ್ನಡೆಯುತ್ತಿದೆ. ಇನ್ನಷ್ಟೂ ಉತ್ತಮವಾಗಿ ಮುನ್ನಡಯಲು ಸಂಘದಲ್ಲಿ ಹೆಚ್ಚಾಗಿ ಸದಸ್ಯತ್ವವನ್ನು ಮಾಡಬೇಕಿದೆ. ಸಂಘದ ಕಟ್ಟಡದಲ್ಲಿ ನಡೆಯುತ್ತಿರುವ ಶಾಲೆಯಲ್ಲಿ ಮಕ್ಕಳನ್ನು ಹೆಚ್ಚಿಸುವ ಪ್ರಯತ್ನವನ್ನು ಸದಸ್ಯರು ಮಾಡಬೇಕಿದೆ. ಶಾಲೆಯಲ್ಲಿ ಪ್ರತಿಯೊಂದು ಮಕ್ಕಳು ಹಾಗೂ ಸಿಬ್ಬಂದಿಗಳ ಬಗ್ಗೆ ಹೆಚ್ಚಿನ ಜವಾಬ್ದಾರಿಯು ಸಂಘದ ಪದಾಧಿಕಾರಿಗಳ ಮೇಲೆ ಇದೆ ಎಂದು ತಿಳಿಸಿದರು.
ಈ ವೇಳೆ ಒಕ್ಕಲಿಗರ ಸಂಘದ ಗೌರವಧ್ಯಕ್ಷ ಹಾಗೂ ಹನೂರು ಶಾಸಕ ನರೇಂದ್ರ ರಾಜೂಗೌಡರವರಿಗೆ ಸಂಘದ ವತಿಯಿಂದ ಸನ್ಮಾನಿಸಿ ಗೌರವಸಲಾಯಿತು.
ಸಭೆಯಲ್ಲಿ ಸಂಘದ ಅಧ್ಯಕ್ಷ ರಾಜೂಗೌಡ, ಕಾರ್ಯದರ್ಶಿ ರಾಜು, ಪದಾಧಿಕಾರಿಗಳಾದ ಆನಂದ, ಕುಮಾರ, ರಾಜಪ್ಪ, ವೆಂಕಟೇಶ್, ಮಹದೇ, ಕೃಷ್ಣೇಗೌಡ, ಮರಿಸ್ವಾಮಿ ಗೌಡ, ರಮೇಶ ಹಾಗೂ ಸದಸ್ಯರುಗಳು ಹಾಜರಿದ್ದರು.





