Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಅಮರೇಶ ನುಗಡೋಣಿಯವರ ಬುತ್ತಿಯೊಳಗಿನ ಹಸಿವು

ಅಮರೇಶ ನುಗಡೋಣಿಯವರ ಬುತ್ತಿಯೊಳಗಿನ ಹಸಿವು

ಕಪಿಲ ಪಿ. ಹುಮ್ನಾಬಾದ

ವಾರ್ತಾಭಾರತಿವಾರ್ತಾಭಾರತಿ24 Sept 2017 12:40 AM IST
share
ಅಮರೇಶ ನುಗಡೋಣಿಯವರ ಬುತ್ತಿಯೊಳಗಿನ ಹಸಿವು

              ಅಮರೇಶ ನುಗಡೋಣಿ

ಅಮರೇಶ ನುಗಡೋಣಿಯವರ ಬುತ್ತಿ ಹಲವು ಕಾರಣಗಳಿಂದ ನನಗೆ ಕನ್ನಡದ ಮುಖ್ಯ ಕೃತಿಯಾಗಿ ಕಾಣುತ್ತಿದೆ. ಗೊರೂರು ರಾಮಸ್ವಾಮಿ ಐಯಂಗಾರ್ ಅವರ ಹಳ್ಳಿಯ ಚಿತ್ರಗಳು, ತೇಜಸ್ವಿಯವರ ಅಣ್ಣನ ನೆನಪು, ಕುವೆಂಪುರವರ ಮಲೆನಾಡಿನ ಚಿತ್ರಗಳು, ಕೇಶವ ಮಳಗಿಯವರ ನೇರಳೆ ಮರ ಈ ರೀತಿಯ ಕೃತಿಗಳ ಸಾಲಿಗೆ ಅಮರೇಶ ನುಗಡೋಣಿಯವರ ಬುತ್ತಿ ಸಹ ಸೇರುತ್ತದೆ. ಈ ಎಲ್ಲಾ ಪುಸ್ತಕಗಳ ವಿಶೇಷತೆಯೆಂದರೆ ಇವುಗಳು ಲೇಖಕನ ಬದುಕಿನ ಚಿತ್ರಗಳು ಆಗಬಹುದಾದ ಅಥವಾ ಅವ ಬದುಕಿದ ಪರಿಸರ ಚಿತ್ರಗಳು ಸಹ ಆಗಬಹುದಾದ ಸಾಧ್ಯತೆಗಳು ಹೊಂದಿವೆ. ‘‘ನನ್ನ ಪಾಲಿಗೆ ಬುತ್ತಿ ಎಂಬುದು ಕೇವಲ ಒಂದು ಪದವಲ್ಲ; ಪದಾರ್ಥ. ಇದು ಮನುಷ್ಯನ ಜತೆ ಬೆಳೆದ ಸಂಸ್ಕೃತಿ. ಬುತ್ತಿ ಎಂಬ ಪದವನ್ನು, ಪದಾರ್ಥವನ್ನು ಅನುಭವಿಸದ ಮನುಷ್ಯನಿರಲಾರ. ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಗ್ರಹಿಸಿದರೆ ಬೆಟ್ಟದಷ್ಟು ವಿವರಗಳು, ನಿರ್ವಚನಗಳು ವ್ಯಕ್ತವಾದವು’’.

ನುಗಡೋಣಿಯವರ ಈ ಮಾತುಗಳು ಅವಲೋಕಿಸಿದಾಗ ಅವರು ತಮ್ಮ ಅನುಭವ ಕಥನವನ್ನು ನೋಡುವ ದೃಷ್ಟಿಕೋನ ಎಂತಹದು ಎಂಬುದರಿವಾಗುತ್ತದೆ. ಬುತ್ತಿಯೊಳಗಿನ ಹಸಿವೆಂದರೆ ಅದೊಂದು ಬುತ್ತಿಯ ಜಗತ್ತಿರಿಯುವ ಹಸಿವು.

ಬುತ್ತಿಯಲ್ಲಿ ಸುಮಾರು ಇಪ್ಪತ್ತು ಬಿಡಿ ಬಿಡಿಯಾದ ಟೈಟಲ್‌ಗಳು ಹೊಂದಿರುವ ಬಾಲ್ಯ ಬದುಕಿನ ಅನುಭವ ಕಥನಗಳಿವೆ. ಇವುಗಳು ನಮಗೆ ಚದುರಿದಂತೆ ಕಾಣುವುದಿಲ್ಲ ,ಎಲ್ಲವೂ ಒಂದೇ ನೂಲಿನೊಳಗೆ ಬಂದಿಯಾದಂತಿವೆ. ‘‘ನಮ್ಮ ಬದುಕಿನಲ್ಲಿ ಘಟನೆಗಳು ಒಂದು ಕ್ರಮದಲ್ಲಿ ನಡೆಯುವುದಿಲ್ಲ, ಒಂದು ಕ್ರಮದಲ್ಲಿ ಅರಿವಿಗೆ ತಂದುಕೊಳ್ಳುತ್ತೇವೆ’’ ಎನ್ನುವ ಚಿತ್ತಾಲರ ಮಾತು ಸಂಪೂರ್ಣವಾಗಿ ಬುತ್ತಿಗೆ ಅನ್ವಯಿಸುತ್ತದೆ..

‘‘ಬುತ್ತಿ ಉಣ್ಣುವಾಗ ಹೊಲದಲ್ಲಿ ಹಸಿಯ ಎಳೆ ಮೆಣಸಿನಕಾಯಿಗಳನ್ನು ತಿನ್ನದವರೇ ಪಾಪಿಗಳು. ನನಗೂ ಮತ್ತು ಯಾರಿಗೂ ಪ್ರಿಯವಾದದ್ದು ಉಳ್ಳಾಗಡ್ಡೆಯ ಪಲ್ಲೆ. ಅಚ್ಚಹಸುರಿನ ಎಳೆಯ ಉಳ್ಳಾಗಡ್ಡೆ ಮತ್ತು ಅದರ ಪಲ್ಲೆಯನ್ನು ಬೇಯಿಸದೆ ಹಾಗೆ ತಿನ್ನುತ್ತಿದ್ದೆವು. ಎಳೆಯ ಬೆಳ್ಳಗಿರುವ ಉಳ್ಳಾಗಡ್ಡೆ, ಅದರ ಹಸಿಪಲ್ಲೆ ಕೊಯ್ದು ಉಪ್ಪು ಕಾರ ಕಲೆಸಿದರೆ ಆ ರುಚಿಯನ್ನು ಉಂಡೇ ಅನುಭವಿಸಬೇಕು. ಈಗಲು ಅಮ್ಮ ನೆನಪಾದರೆ ಸಾಕು, ಅಮ್ಮ ಮಾಡುತ್ತಿದ್ದ ಹುಣ್ಣಿಮೆ ಚಂದ್ರನಂತಹ ರೊಟ್ಟಿಗಳು ನೆನಪಾಗುತ್ತವೆ’’ - ತಮ್ಮ ಆಹಾರ ಕ್ರಮದ ಬಗ್ಗೆ ಅಪಾರವಾದ ಪ್ರೀತಿ ಹೊಂದಿರುವ ಅಮರೇಶರು ಅದನ್ನು ನೆನಪಿಸಿ ಬಾಯಿ ಚಪ್ಪರಿಸಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬ ಮನುಷ್ಯ ತಾನು ವಾಸಿಸುವ ಪರಿಸರದೊಂದಿಗೆ ಸೆಣೆಸುತ್ತ, ಹೊಂದಿಕೊಳ್ಳುತ್ತ, ಪ್ರೀತಿಸುತ್ತ, ಮುನಿಸನ್ನು ತೋರಿಸುತ್ತಲೆ ಬದುಕುತ್ತಾನೆ, ಈ ಸಂಗತಿಗಳೆಲ್ಲವು ಅವನ ಜೀವದೊಂದಿಗೆ ಬೆರೆತಿರುತ್ತವೆ.

‘‘ಬದುಕು ಬುತ್ತಿಯಲ್ಲಿ ಸುಖಗಳಂತೆ ಕಷ್ಟಗಳೂ ಮನೆಮಾಡಿಕೊಂಡಿ ರುತ್ತವೆ. ಆದರೆ ಕಳೆದ ಕಾಲವು ಸ್ಮತಿಯ ವಜ್ರಪಂಜರದಲ್ಲಿ ಆ ಅನುಭವಗಳನ್ನು ಬಂಧಿಸಿರುವುದರಿಂದ ನಮಗೆ ಅವುಗಳ ಭಯಂಕರತೆಗಿಂತಲೂ ಮನೋಹರತೆಯೆ ಹೆಚ್ಚಾಗಿ ಎದೆ ಮುಟ್ಟುತ್ತದೆ’’ ಎಂದು ಕುವೆಂಪುನವರು ಮಲೆನಾಡಿನ ಚಿತ್ರಗಳಲ್ಲಿ ಹೇಳುತ್ತಾರೆ. ಬುತ್ತಿಯಲ್ಲಿಯು ಸಹ ಈ ರೀತಿಯ ಅನುಭವಗಳಿವೆ. ನಾವು ಇಂದು ಓದುವ ಆ ಪ್ರಸಂಗಗಳು ನಮಗೆ ನಗುವನ್ನು ಮತ್ತು ಸಹಾನುಭೂತಿಯನ್ನು ಹುಟ್ಟಿಸುವಂತಿವೆ. ನುಗಡೋಣಿಯವರು ಹಲವು ಕಡೆ ಆಷಾಢದ ಗಾಳಿಯಲ್ಲಿ ನನ್ನ ಸೈಕಲ್ ಸವಾರಿಯ ಕಷ್ಟ ನುಗಡೋಣಿ ಬಸವನಿಗೆ ಗೊತ್ತು ಎಂದು ಹೇಳುತ್ತಾರೆ. ಒಂದು ಭಯಾನಕ ಕಾಲ್ನಡಿಗೆ ಎನ್ನುವ ಲೇಖನದಲ್ಲಿ ಅಮರೇಶರು ತಮ್ಮ ಅಕ್ಕನ ಊರಿಂದ ವಾಪಸ್ ಬರುವಾಗ, ಮಲ್ಲಟಗಿ ಹಳ್ಳದಲ್ಲಿ ಕುರುಬರು ಕುರಿಗಳ ಜೊತೆ ಬೀಡು ಬಿಟ್ಟದ್ದು ಕಾಣುತ್ತದೆ. ವಿಚಾರಿಸಲು ‘‘ಇಂಥ ಕತ್ತಲದಾಗ ಯಾಕ ಬಂದಿ ಗೌಡ? ಎಂದು ಕೂಡಿಸಿ, ನೀರು ಕೊಟ್ಟರು ಕುಡಿದೆ. ನಮ್ಮಲ್ಲೆ ಇದ್ದು ನಸುಕಿನ್ಯಾಗ ಹೋಗು ಅಂದರು. ತೇಜಸ್ವಿಯವರ ಮಹಾಪಲಾಯನ ಮತ್ತು ಪ್ಯಾಪಿಲಾನಗಳಲ್ಲಿ ಓದಿದ್ದೆ- ಯಾರನ್ನು ಅನಾಗರಿಕರೆಂದು ಮತ್ತು ಕನಿಷ್ಠರೆಂದು ಭಾವಿಸುತ್ತೇವೋ ಅವರೊಳಗೊಬ್ಬ ನಿಜವಾದ ಮನುಷ್ಯನಿರುತ್ತಾನೆ ಅವನು ಪಲಾಪೇಕ್ಷೆವಿಲ್ಲದೆ ಸಹಾಯ ಮಾಡುತ್ತಾನೆ. ಇಲ್ಲಿಯು ಸಹ ನನಗೆ ಹಾಗೇ ಕಂಡಿತ್ತು’’.

‘‘ಸಿರಿತನದ ಬಾಳು ಅಮ್ಮನಿಗೆ ಪರಿಚಯವಿಲ್ಲ. ಅನುಭವವೂ ಇಲ್ಲ. ಅದರ ಕಲ್ಪನೆಯೇ ಆಕೆಗಿಲ್ಲ. ಆಕೆ ಬಾಳಿದ್ದು ಕೂಡ ಸಾಧಾರಣ ಬದುಕನ್ನೇ. ಅದು ಬಡತನದ್ದು ಅಂತ ಕೂಡ ಅಮ್ಮನಿಗೆ ತಿಳಿದಿಲ್ಲ. ಆಕೆಯ ಪಾಲಿಗೆ ಒಂದು ಬಾಳು ಬಂದಿತ್ತು ಅದನ್ನು ಬಾಳಿ ಹೋದಳು. ಅಷ್ಟೇ’’. - ನುಗಡೋಣಿಯವರ ತಾಯಿಯ ಬಗ್ಗೆ ಓದುವಾಗ ಕಾರಂತರ ಅಳಿದ ಮೇಲೆ ಕಾದಂಬರಿಯ ಪಾರ್ವತಮ್ಮ ನೆನಪಾದಳು. ಬಾಳಿಸುವವನು ಬಾಳಿಸುವವರೆಗೆ ಬದುಕಿ ಹೋಗುವುದು ಎನ್ನುವ ಅರಿವು ಇವರಿಗರಿವಿಲ್ಲದೆ ಇವರೊಳಗಿದೆ. ನುಗಡೋಣಿಯವರು ತಮ್ಮ ತಾಯಿಯನ್ನು ಅಪಾರವಾಗಿ ಪ್ರೀತಿಸುತ್ತಾರೆ. ತಮ್ಮ ಕಥೆಗಳು ಅವರೆದುರು ಓದುವಾಗ ಆ ತಾಯಿ ಅಲ್ಲಿನ ಪ್ರಸಂಗಗಳ ಬಗ್ಗೆ ತಾಳುವ ನಿಲುವು ಎಷ್ಟು ವಿಶಾಲವಾದದ್ದು ಮತ್ತು ಕಾಳಜಿ ಪೂರ್ವಕವಾದದ್ದೆಂದರೆ ಬೆರಗಾಗುತ್ತದೆ. ‘‘ನಾನು ಕತೆಗಳು ಬರೆದು ಅಮ್ಮನ ಮುಂದೆ ಓದಿದ್ದೆ. ಅವು ನಮ್ಮೂರಿನ ಕತೆಗಳು. ಅದರಲ್ಲಿ ಬರುವ ಪಾತ್ರಗಳೂ ನಮ್ಮೂರಿನವರೇ ಆಗಿದ್ದರು. ಹಾದರದ ಪ್ರಸಂಗಗಳು ಓದಿದಾಗ, ಕೇಳಿ ‘ಮಾಡಿದವರ ಪಾಪ ಆಡಿದವರ ಬಾಯಿಯಲ್ಲಿ’ ಅಂದು ಬರದು ‘ನೀನು ಕೆಟ್ಟವನಾಗ ಬ್ಯಾಡ. ಊರುಕೇರಿ ಇದ್ದಲ್ಲಿ ಒಳ್ಳೆದು ಕೆಟ್ಟದ್ದೂ ಇರ್ತದ. ಒಳ್ಳೆಯದನ್ನು ಕತೆ ಮಾಡು’ ಎಂದು ಹೇಳಿದಳು’’ ಎಂದು ನಿರೂಪಿಸುತ್ತಾರೆ.

ನುಗಡೋಣಿಯವರ ತಂದೆ, ಅಜ್ಜ ತಮಂಧದ ಕೇಡಿನ ಕಥೆಯ ಬೀಜವಾಗಿದ್ದಾರೆ. ಹೀಗೆ ಅವರ ಹಲವು ಕಥೆಗಳ ಬೀಜಗಳು ಅವರೆದೆಯಲ್ಲಿ ಬಾಲ್ಯದಲ್ಲಿಯೆ ಬಿತ್ತಿದ್ದವುಗಳು. ಅವರು ಕಲಿತ ಶಾಲೆ, ಹೊಲ ಮನೆ, ಪಶು ಪಕ್ಷಿಗಳು, ಸೀತಾಫಲ ಹಣ್ಣು ಎಲ್ಲವನ್ನೂ ನೆನಪಿಸಿಕೊಂಡಿದ್ದಾರೆ. ಇಡೀ ಬುತ್ತಿ ಓದಿದ ತಕ್ಷಣ ಶಿವರುದ್ರಪ್ಪನವರು ತಮ್ಮ ಆತ್ಮಕಥೆ ಚತುರಂಗಕ್ಕೆ ಬರೆದ ಮಾತೊಂದು ನೆನಪಾಯ್ತು. ‘‘ನೆನಪುಗಳಿಗೆ ಕೊನೆ ಇಲ್ಲ. ನಾನು ಬರೆಯಲಪೇಕ್ಷಿಸುವ ನೆನಪುಗಳ ಹಾಗೆಯೇ ಮರೆಯಲಪೇಕ್ಷಿಸುವ ನೆನಪುಗಳೂ ಸಾಕಷ್ಟಿವೆ. ಅವುಗಳನ್ನು ಹೇಳಿಕೊಳ್ಳುವುದರಿಂದ ಯಾವ ಸುಖವೂ ಇಲ್ಲ. ಮನುಷ್ಯ ನೆಮ್ಮದಿಯಿಂದಿರಬೇಕಾದರೆ ಎಷ್ಟನ್ನೋ ನೆನೆಯದಿರುವುದೇ ಒಳ್ಳೆಯದು’’. ಈ ಜಗತ್ತಿನಲ್ಲಿ ಯಾವ ವ್ಯಕ್ತಿಯ ಬದುಕು ಸಹ ಪರಿಪೂರ್ಣವಲ್ಲ. ಕಷ್ಟ ಸುಖಗಳೆರೆಡರ ಕುಲುಮೆಯೆ ಬದುಕು. ಬೆಳೆ ಹಾನಿ, ದನ ಕರುಗಳ ಮಾರಾಟ, ಹಳ್ಳ ಕಣ್ಮರೆಯಾದದ್ದು, ಮಳೆಯ ಪ್ರವಾಹಕ್ಕೆ ಮನೆ ಬಿದ್ದು ಎತ್ತುಗಳು ಸತ್ತದ್ದು ಎಲ್ಲವೂ ನುಗಡೋಣಿಯವರಿಗೆ ಕಹಿಗಳೆ. ಅವು ಓದುಗರಿಗೂ ಕಣ್ಣಹನಿ ಚಿಮ್ಮದೆ ಇರದು...

share
ವಾರ್ತಾಭಾರತಿ
ವಾರ್ತಾಭಾರತಿ
Next Story
X