ಮಂಡ್ಯ: ನದಿಗೆ ಬಿದ್ದು ಪ್ರವಾಸಿಗ ಮೃತ್ಯು

ಮಂಡ್ಯ, ಸೆ.24: ಕೆ.ಆರ್.ಸಾಗರದ ಬೃಂದಾವನದಲ್ಲಿರುವ ದೋಣಿವಿಹಾರ ಕೇಂದ್ರದ ನದಿಗೆ ಆಕಸ್ಮಿಕವಾಗಿ ಬಿದ್ದು ವೃದ್ಧ ಸಾವನ್ನಪ್ಪಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಮೈಸೂರು ಜಿಲ್ಲೆ ನಂಜನಗೂಡಿನ ಆರ್.ಪಿ ರಸ್ತೆ ನಿವಾಸಿ ಪಾರ್ಥಸಾರಥಿ(70) ಸಾವನ್ನಪ್ಪಿದ ಪ್ರವಾಸಿಗ ಎಂದು ಗುರುತಿಸಲಾಗಿದೆ.
ಇವರು ನದಿಗೆ ಆಡ್ಡಲಾಗಿ ನಿರ್ಮಿಸಿರುವ ಪಾದಚಾರಿ ರಸ್ತೆಯಿಂದ ಜಾರಿ ನದಿಗೆ ಬಿದ್ದು ಸಾವನ್ನಪ್ಪಿದ್ದಾರೆ.
ಈ ವೇಳೆ ಪ್ರವಾಸಿಗರ ಭದ್ರತೆಗೆ ನಿಯೋಜಿಸಿರುವ ಕರ್ನಾಟನಕ ಕೈಗಾರಿಕ ಭದ್ರತಾ ಪಡೆಯ ಅಮರನಾರಾಯಣ ಅವರು ನದಿಗೆ ಜಿಗಿದು ವೃದ್ಧನನ್ನು ಮೇಲೆತ್ತಿದರು ಎನ್ನಲಾಗಿದೆ.
ಚಿಕಿತ್ಸೆಗಾಗಿ ಮೈಸೂರಿಗೆ ತೆಗೆದುಕೊಂಡು ಹೋಗುವ ವೇಳೆ ವೃದ್ಧ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
Next Story





